ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ನಟರ ಪೈಕಿ ಅಮಿತಾಭ್ ಬಚ್ಚನ್ ಪ್ರಮುಖರು. ಅಭಿಮಾನಿಗಳ ಜತೆಗೆ ನಿರಂತರ ಸಂಪರ್ಕದಲ್ಲಿರುವ ಅವರು, ಶುಕ್ರವಾರವಷ್ಟೇ ಟ್ವಿಟರ್‌ನಲ್ಲಿ 12ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಹೀಗಿರುವಾಗಲೇ, ಅಮಿತಾಭ್ ಅವರಿಗೆ ಅಭಿಮಾನಿಯೊಬ್ಬರಿಂದ ಒಂದು ಅನಿರೀಕ್ಷಿತ ಪ್ರಶ್ನೆ ಎದುರಾಗಿದೆ ಮತ್ತು ‘ಬಿಗ್ ಬಿ’ ಅದಕ್ಕೆ ಸರಿಯಾದ ಉತ್ತರ ನೀಡಿದ್ದಾರೆ.
ಅಮಿತಾಭ್ ಬಚ್ಚನ್ ಅವರ ಕಟ್ಟ ಅಭಿಮಾನಿಯೊಬ್ಬರು ಟ್ವಿಟರ್‌ನಲ್ಲಿ ಒಂದು ಪ್ರಶ್ನೆ ಕೇಳಿದ್ದಾರೆ. ‘ಸಾರ್, ನೀವು ಈ ದೇಶ ಪ್ರಧಾನಿ ಆಗ್ತೀರಾ?’ ಎಂದು. ಇಂಥಾ ತರಲೆ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಉತ್ತರಿಸುವುದಕ್ಕೆ ಹೋಗುವುದಿಲ್ಲ. ಆದರೆ, ಅಮಿತಾಭ್ ಎಲ್ಲರ ರೀತಿಯಲ್ಲ. ಈ ಮಜವಾದ ಪ್ರಶ್ನೆಗೆ, ಅಷ್ಟೇ ಮಜವಾಗಿ ಉತ್ತರ ಕೊಟ್ಟಿದ್ದಾರೆ. ಇಂಥದ್ದೊಂದು ಪ್ರಶ್ನೆಗೆ, ‘ಬೆಳಿಗ್ಗೆ ಬೆಳಿಗ್ಗೆ ಒಳ್ಳೇದು ಮಾತಾಡಿ …’ ಎಂದು ಉತ್ತರಿಸುವ ಮೂಲಕ ಅಭಿಮಾನಿಯ ಬಾಯಿ ಮುಚ್ಚಿಸಿದ್ದಾರೆ.
ಅಮಿತಾಭ್ ಬಚ್ಚನ್ ಅವರಿಗೆ ರಾಜಕೀಯವೇನೂ ಹೊಸದಲ್ಲ. 80ರ ದಶಕದಲ್ಲೇ ಅವರು ಸಂಸದರಾಗಿದ್ದರು. ಆದರೆ, ನಂತರದ ವರ್ಷಗಳಲ್ಲಿ ಕಾರಣಾಂತರಗಳಿಂದ ರಾಜಕೀಯದಿಂದ ದೂರ ಉಳಿದುಬಿಟ್ಟರು. ಅಲ್ಲಿಂದ ರಾಜಕೀಯದಿಂದ ದೂರವೇ ಉಳಿದಿದ್ದಾರೆ ಅಮಿತಾಭ್.