ಆಸ್ಪತ್ರೆಗೆ ದಾಖಲಾಗಿದ್ದ ಬಿಗ್​ಬಿ ಆರೋಗ್ಯದಲ್ಲಿ ಚೇತರಿಕೆ

<<‘ಥಗ್ಸ್‌ ಆಫ್‌ ಹಿಂದೂಸ್ತಾನ್‌’ ಚಿತ್ರೀಕರಣದ ವೇಳೆ ಅಸ್ವಸ್ಥರಾಗಿದ್ದ ಅಮಿತಾಬ್ ಬಚ್ಚನ್​>>

ರಾಜಸ್ಥಾನ: ‘ಥಗ್ಸ್‌ ಆಫ್‌ ಹಿಂದೂಸ್ತಾನ್‌’ ಸಿನಿಮಾ ಚಿತ್ರೀಕರಣದ ವೇಳೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎನ್ನಲಾಗಿದೆ.

ಮಂಗಳವಾರ ಬೆಳಗ್ಗೆ ಅಮಿತಾಬ್​ ಅಸ್ವಸ್ಥರಾಗುತ್ತಿದ್ದಂತೇ ಚಿತ್ರೀಕರಣದ ಸ್ಥಳದಲ್ಲೇ ಚಿಕಿತ್ಸೆ ನೀಡಿ, ನಂತರ ತುರ್ತಾಗಿ ವಿಶೇಷ ವಿಮಾನದ ಮೂಲಕ ಜೋಧಪುರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. 75 ವರ್ಷದ ಮೇರುನಟನಿಗೆ ಚಿಕಿತ್ಸೆ ನೀಡಲು ತಜ್ಞ ವೈದ್ಯರ ತಂಡ ಮುಂಬೈನಿಂದ ಜೋಧ್‌ಪುರಕ್ಕೆ ತೆರಳಿತ್ತು.

(ಏಜೆನ್ಸೀಸ್​)

 

Leave a Reply

Your email address will not be published. Required fields are marked *