More

    ಯಾರು ಪ್ರತಿಭಟನೆ ಮಾಡುತ್ತಾರೆ ಎಂಬುದು ನಮಗೊಂದು ವಿಚಾರವೇ ಅಲ್ಲ, ಕಾಯ್ದೆ ಮಾತ್ರ ಹಿಂಪಡೆಯುವುದಿಲ್ಲ: ಅಮಿತ್​ ಷಾ

    ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಕೇಂದ್ರ ಗೃಹಸಚಿವ ಅಮಿತ್​ ಷಾ ಅವರು ಪ್ರತಿಪಕ್ಷದ ನಾಯಕರುಗಳಿಗೆ ಸವಾಲೊಂದನ್ನು ಎಸೆದಿದ್ದು, ಚರ್ಚೆ ನಡೆಯಲಿ, ಬಳಿಕ ಏನು ನಿರ್ಣಯವಾಗಲಿದೆಯೋ ಅದನ್ನು ಘೋಷಿಸೋಣ. ಅಂತಿಮವಾಗಿ ನ್ಯಾಯವೇ ಗೆಲ್ಲಲಿದೆ ಎಂದಿದ್ದಾರೆ.

    ಲಖನೌದಲ್ಲಿ ಸಿಎಎ ಕುರಿತ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು ಈ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ಯಾರು ಪ್ರತಿಭಟನೆ ಮಾಡುತ್ತಾರೆ ಎಂಬುದು ನಮಗೊಂದು ವಿಚಾರವೇ ಅಲ್ಲ. ನಾವು ಪ್ರತಿಪಕ್ಷದವರಿಗೆ ಅಂಜುವುದೂ ಇಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಪ್ರತಿಪಕ್ಷದವರಿಗೆ ವಾಸ್ತವಾಂಶ ತಿಳಿಯುತ್ತಿಲ್ಲ. ಅವರ ಮುಖ ವೋಟ್​ಬ್ಯಾಂಕ್​ ರಾಜಕಾರಣದಿಂದ ಸುತ್ತುವರಿದಿದೆ ಎಂದು ಜರಿದರು.

    ಕಾಯ್ದೆ ಕುರಿತು ಕಾಂಗ್ರೆಸ್​ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಷಾ, ಸುಳ್ಳುಗಳನ್ನು ಹರಡುತ್ತಿದ್ದಾರೆ. ದೇಶದ ಯಾವುದೇ ಮೂಲೆಯಲ್ಲಾದರೂ ಸರಿ ಕಾಯ್ದೆ ಬಗ್ಗೆ ಚರ್ಚಿಸಲು ಮಮತಾ ದೀದಿ, ಅಖಿಲೇಶ್​ ಜಿ ಹಾಗೂ ಮಾಯಾವತಿ ಜಿಗೆ ಸವಾಲು ಹಾಕುತ್ತಿದ್ದೇನೆ. ಪೌರತ್ವವನ್ನು ಕಿತ್ತುಕೊಳ್ಳಲಿದೆ ಎಂಬ ಒಂದೇ ಒಂದು ಅಂಶವನ್ನು ಕಾಯ್ದೆಯಲ್ಲಿ ತೋರಿಸಿ ಎಂದರು.

    ಅಕ್ರಮ ವಲಸಿಗರು ಮತ್ತು ಪಾಕಿಸ್ತಾನದ ಭಯೋತ್ಪಾದನೆ ಬಗ್ಗೆ ಕಾಂಗ್ರೆಸ್​ ಒಮ್ಮೆಯೂ ಚಿಂತಿಸಿರಲಿಲ್ಲ. ಆಲಿಯಾ, ಮಾಲಿಯಾ ಮತ್ತು ಜಮಾಲಿಯಾ ಪಾಕಿಸ್ತಾನದಿಂದ ಬಂದು ಬಾಂಬ್​ ಸ್ಫೋಟಿಸಿ ಹೋಗುತ್ತಿದ್ದರು. ಆದರೆ, ಮನಮೋಹನ್​ಸಿಂಗ್​ ಮೌನಿ ಬಾಬಾ ಆಗಿದ್ದರು. ಶಬ್ದವೇ ಮಾಡುತ್ತಿರಲಿಲ್ಲ ಎಂದು ಕಾಂಗ್ರೆಸ್​ ಪಕ್ಷವನ್ನು ಟೀಕಿಸಿದರು.

    ಸಿಎಎ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆಗಳು ಮುಂದುವರಿಯುತ್ತಿದ್ದು, ಕಾಯ್ದೆ ಕುರಿತು ಬಿಜೆಪಿ ಜಾಗೃತಿ ಮೂಡಿಸುವ ಕೆಲಸವನ್ನು ಇನ್ನೊಂದೆಡೆ ಮಾಡಿಕೊಂಡು ಬರುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts