More

    ಸಿಎಎ ಬೆಂಬಲಿಸಿ ಪ್ರಧಾನಿಗೆ ಧನ್ಯವಾದ ತಿಳಿಸಲು ಬರೆದಿದ್ದ 5.5 ಲಕ್ಷ ಪೋಸ್ಟ್​ಕಾರ್ಡ್​ಗಳನ್ನು ಅನಾವರಣಗೊಳಿಸಿದ ಅಮಿತ್​ ಷಾ

    ಅಹಮದಾಬಾದ್​: ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುಜರಾತ್​ನ ಅಹಮದಬಾದ್​ ನಿವಾಸಿಗಳು ಬರೆದಿರುವ 5.5 ಲಕ್ಷಕ್ಕಿಂತ ಹೆಚ್ಚಿನ ಪೋಸ್ಟ್​ಕಾರ್ಡ್​ಗಳನ್ನು ಕೇಂದ್ರ ಗೃಹಸಚಿವ ಅಮಿತ್​ ಷಾ ಅವರು ಶನಿವಾರ ಅನಾವರಣಗೊಳಿಸಿದರು.

    ಅಹಮದಬಾದ್​ನಲ್ಲಿ ಬಿಜೆಪಿ ಕಾರ್ಯಕರ್ತರ ವೇದಿಕೆಯಲ್ಲಿ ಸಿಎಎ ಅಕ್ಷರ ರೂಪದಲ್ಲಿ ವಿನೂತನ ಜೋಡಿಸಿ ಇಡಲಾಗಿದ್ದ ಪೋಸ್ಟ್​ಕಾರ್ಡ್​ಗಳನ್ನು ಅಮಿತ್ ಷಾ ಅನಾವರಣಗೊಳಿಸಿದರು. ಸಿಎಎ ಪರವಾಗಿ ಬಹುದೊಡ್ಡ ಜಾಗೃತಿ ಅಭಿಯಾನ ನಡೆಸಿದ್ದು, ಇಂದು ಲಿಮ್ಕಾ ಬುಕ್​ ಆಫ್​ ರೆಕಾರ್ಡ್​ ಮತ್ತು ಭಾರತದ ವಿಶ್ವದಾಖಲೆಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ ಎಂದು ಇದೇ ವೇಳೆ ರಾಜ್ಯ ಬಿಜೆಪಿ ಹಕ್ಕು ಮಂಡಿಸಿತು.

    ಇದು ಕೇವಲ ಒಂದು ಪದವಲ್ಲ. ಹೃದಯದಿಂದ ಬರೆಯಲಾದ ಧನ್ಯವಾದ ಪತ್ರಗಳಾಗಿದೆ. ಸಿಎಎ ವಿರುದ್ಧ ಅಪಪ್ರಚಾರ ಹರಡಿಸುತ್ತಿರುವವರಿಗೆ ನಮ್ಮ ಸಾರ್ವಜನಿಕ ಕಾರ್ಯಕ್ರಮದ ಮೂಲಕ ಖಡಕ್​ ಉತ್ತರ ನೀಡಲಾಗಿದೆ ಎಂದು ಅಮಿತ್​ ಷಾ ತಮ್ಮ ಹಿಂದಿನ ವಿಧಾನಸಭಾ ಕ್ಷೇತ್ರ ನಾರಾಯಣಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಈ ಹೇಳಿಕೆ ನೀಡಿದರು.

    ಸಿಎಎ ಜಾರಿಗೆ ತರುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿಯೇ ಭರವಸೆ ನೀಡಿತ್ತು. ಅಂದೇ ಕಾಂಗ್ರೆಸ್​ ಇದನ್ನೇಕೆ ವಿರೋಧಿಸಲಿಲ್ಲ ಎಂದು ಪ್ರಶ್ನಿಸಿದ ಅಮಿತ್​ ಷಾ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಗುರಿಯಾಗಿಸಕೊಂಡು ರಾಜಸ್ಥಾನದಲ್ಲಿ ಕಾಂಗ್ರೆಸ್​ ಸರ್ಕಾರವಿದೆ. ಪಾಕಿಸ್ತಾನದ ಹಿಂದು ಮತ್ತು ಸಿಖ್​ಗಳಿಗೆ ಪೌರತ್ವ ನೀಡುವುದಾಗಿ ಕಾಂಗ್ರೆಸ್​ ಭರವಸೆ ನೀಡಿತ್ತು. ನೀವು ನೀಡಿದ ಭರವಸೆಯನ್ನು ನಾವು ನೆರವೇರಿಸುವಾಗ ನಮ್ಮನ್ನೇಕೆ ವಿರೋಧಿಸುತ್ತಿರಾ? ಎಂದು ಷಾ, ಪ್ರಶ್ನಿಸಿದರು.


    ಪ್ರಧಾನಿ ನರೇಂದ್ರ ಮೋದಿ ಅವರು ಸಿಎಎ ಜಾರಿಗೆ ತರುವ ಮೂಲಕ ಲಕ್ಷಾಂತರ ಮಂದಿಗೆ ಮಾನವ ಹಕ್ಕುಗಳನ್ನು ನೀಡುತ್ತಿದ್ದಾರೆ. ಆದರೆ, ಪ್ರತಿಪಕ್ಷಗಳೇಕೆ ವಿರೋಧಿಸುತ್ತಿವೆ ಎಂದು ಕೇಳಿದರು. ಭಾರತೀಯ ಮುಸ್ಲಿಮರ ಪೌರತ್ವವನ್ನು ಸಿಎಎ ಕಸಿದುಕೊಳ್ಳಲಿದೆ ಎಂಬುದಕ್ಕೆ ಒಂದೇ ಒಂದು ನಿದರ್ಶನ ತೋರಿ ಎಂದು ರಾಹುಲ್ ಗಾಂಧಿಯನ್ನು ರಾಹುಲ್​ ಬಾಬಾ ಎಂದು ಉಲ್ಲೇಖಿಸಿ, ಅವರೊಟ್ಟಿಗೆ ಮಮತಾ ಬ್ಯಾನರ್ಜಿ ಮತ್ತು ಅರವಿಂದ್​ ಕೇಜ್ರಿವಾಲ್​ಗೆ ಸವಾಲು ಎಸೆದರು.

    ದೇಶದ ಮೊದಲ ಪ್ರಧಾನಿ ಮಂತ್ರಿ ಜವಹರ್​ಲಾಲ್ ನೆಹರೂ ಅವರಿಂದ ಹಿಡಿದು ಮೊದಲ ಗೃಹ ಸಚಿವರು, ಮೊದಲ ರಾಷ್ಟ್ರಪತಿ ಮತ್ತು ಮಹಾತ್ಮ ಗಾಂಧಿಯವರೆಗೂ ಪಾಕಿಸ್ತಾನದಿಂದ ಭಾರತಕ್ಕೆ ಯಾರೇ ಬಂದರೂ ಪೌರತ್ವ ನೀಡುವಂತೆ ಹೇಳಿದ್ದರು. ಹಿಂದು, ಸಿಖ್​, ಬೌದ್ಧರು ಮತ್ತು ಜೈನರು ಪಾಕಿಸ್ತಾನ ಬರುತ್ತಿದ್ದಾರೆ. ಹೀಗಾಗಿ ಸಿಎಎ ಜಾರಿ ತಂದಿದ್ದೇವೆ ಎಂದು ಹೇಳಿದರು. (ಏಜೆನ್ಸೀಸ್​)​

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts