ಗೋಡ್ಸೆ ಕುರಿತು ಮೂವರು ಬಿಜೆಪಿ ನಾಯಕರ ಹೇಳಿಕೆ ವೈಯಕ್ತಿಕ, ಬಿಜೆಪಿಗೂ ಅದಕ್ಕೂ ಸಂಬಂಧವಿಲ್ಲ: ಅಮಿತ್ ಷಾ

ನವದೆಹಲಿ: ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ್ದ ನಾಥುರಾಮ್​ ಗೋಡ್ಸೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆ, ಸಂಸದ ನಳಿನ್​ ಕುಮಾರ್​ ಕಟೀಲ್​ ಮತ್ತು ಭೋಪಾಲ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರ ಹೇಳಿಕೆ ವೈಯಕ್ತಿಕವಾದದ್ದರು, ಅವರ ಹೇಳಿಕೆಗೂ ಬಿಜೆಪಿ ಪಕ್ಷದ ನಿಲುವಿಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್​ ಮಾಡಿರುವ ಅಮಿತ್​ ಷಾ ‘ಈ ಮೂವರೂ ತಮ್ಮ ಹೇಳಿಕೆಗಳನ್ನು ಹಿಂಪಡೆದಿದ್ದು ಕ್ಷಮೆ ಕೇಳಿದ್ದಾರೆ. ಆದರೂ ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಶಿಸ್ತು ಸಮಿತಿಗೆ ಈ ಪ್ರಕರಣವನ್ನು ವರ್ಗಾಯಿಸಲಾಗುವುದು. ಬಿಜೆಪಿ ಪಕ್ಷದ ಘನತೆ ಮತ್ತು ಸಿದ್ಧಾಂತವನ್ನು ಪರಿಗಣನೆಗೆ ತೆಗೆದುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಮಿತ್​ ಷಾ ತಿಳಿಸಿದ್ದಾರೆ.

ಶಿಸ್ತು ಸಮಿತಿ ಮೂವರೂ ನಾಯಕರಿಂದ ಪ್ರತಿಕ್ರಿಯೆ ಪಡೆದು 10 ದಿನಗಳ ಒಳಗಾಗಿ ಪಕ್ಷಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅಮಿತ್​ ಷಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *