More

    ಇದೇ ನೋಡಿ ನಮ್ಮ Someಕಲ್ಪ: ಹೀಗಿರಬಹುದಾ ಅಮಿತ್​ ಷಾ ಸಂಕಲ್ಪ?

    ನೂತನ ವರ್ಷ ಆರಂಭವಾಗುವ ಸಂದರ್ಭದಲ್ಲಿ ಎಲ್ಲರೂ ಏನಾದರೊಂದು ನಿರ್ಣಯ ಕೈಗೊಳ್ಳುವುದು ರೂಢಿ. ಇದಕ್ಕೆ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾರಂಗದ ಸೆಲೆಬ್ರಿಟಿಗಳು ಮುಂತಾಗಿ ಯಾರೂ ಹೊರತಲ್ಲ. 2020ರ ಹೊಸ್ತಿಲಲ್ಲಿ ಯಾರ್ಯಾರು ಏನೇನು ಸಂಕಲ್ಪ ಮಾಡಿರಬಹುದು ಎಂಬುದನ್ನು ಕನ್ನಡದ ಖ್ಯಾತ ಹಾಸ್ಯ ಸಾಹಿತಿ, ‘ವಿಜಯವಾಣಿ’ಯ ಅಂಕಣಕಾರ ಎಚ್. ಡುಂಡಿರಾಜ್ Fun ಶೈಲಿಯಲ್ಲಿ ಹೇಳ್ತಾ ಇದ್ದಾರೆ, ಕೇಳೋಣ ಬನ್ನಿ.

    ಅಮಿತ್ ಷಾ

    ಇಷ್ಟು ದಿನ ಎಲ್ಲರೂ ನನ್ನನ್ನು ಚಾಣಕ್ಯ ಅಂತ ಹೊಗಳ್ತಾ ಇದ್ರು. ಸಿಎಎ ಅನುಷ್ಠಾನ ಮಾಡಲು ಹೋಗಿ ಇರಲಾರದೆ ಇರುವೆ ಬಿಟ್ಕೊಂಡ್ರು ಅನ್ನುವಂತಾಯಿತು. ಕರ್ನಾಟಕದಲ್ಲಿ ಆಪರೇಷನ್ ಯಶಸ್ವಿಯಾದರೂ ಮಹಾರಾಷ್ಟ್ರದಲ್ಲಿ ವಿಫಲವಾಯಿತು. ಜಾರ್ಖಂಡ್ ನನ್ನ ಕೈಯಿಂದ ಜಾರ್ಕೊಂಡು ಹೋಯ್ತು. ಹೊಸ ವರ್ಷದಲ್ಲಿ ಪ್ರಧಾನಿ ಮೋದಿಯವರಿಗೆ ಇಂಥ ಷಾಕ್ ಕೊಡದೆ ಚಾಣಕ್ಯ ಎಂಬ ಬಿರುದನ್ನು ಮರಳಿ ಪಡೆಯಬೇಕು. ಕಮಲ ಪಕ್ಷದ ಕಾರ್ಯಕರ್ತರಿಗೆ ಅಮಿತಾನಂದ ಉಂಟು ಮಾಡಬೇಕು ಎಂಬುದೇ ಈ ಅಮಿತ್ ಷಾನ ಸಂಕಲ್ಪ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts