ಅಮಿತ್​ ಷಾಗೆ ಗೋಮಾಂಸ ಬಿರ್ಯಾನಿ ಕಳಿಸಲು ಕೆಸಿಆರ್​ಗೆ ಕೋರುತ್ತೇನೆ ಎಂದ ಅಸಾದುದ್ದೀನ್​ ಓವೈಸಿ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರಿಗೆ ಬಿರ್ಯಾನಿ ಎಂದರೆ ಇಷ್ಟ ಎಂದು ಗೊತ್ತಿರಲಿಲ್ಲ. ಅವರಿಗೆ ಕೂಡಲೇ ಕಲ್ಯಾಣಿ ಬಿರ್ಯಾನಿ (ಗೋಮಾಂಸ) ಕಳಿಸಿ ಎಂದು ನಾನು ತೆಲಂಗಾಣ ಮುಖ್ಯಮಂತ್ರಿ ಬಳಿ ಮನವಿ ಮಾಡುತ್ತೇನೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಹೇಳಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರು ಮುಸ್ಲಿಮರಿಗೆ ಬಿರ್ಯಾನಿ ಕಳಿಸುತ್ತಾರೆ ಎಂದು ಆರೋಪ ಮಾಡಿದ್ದ ಅಮಿತ್​ ಷಾ ವಿರುದ್ಧ ಕಿಡಿಕಾರಿರುವ ಓವೈಸಿ, ಇನ್ಯಾರೋ ಬಿರ್ಯಾನಿ ತಿಂದರೆ ಇವರ್ಯಾಕೆ ಮಾತನಾಡಬೇಕು? ಒಂದೊಮ್ಮೆ ಅಮಿತ್​ ಷಾ ಅವರಿಗೆ ಕಳಿಸಿದರೆ ಅವರೂ ತಿನ್ನಬಹುದುಎಂದು ವ್ಯಂಗ್ಯವಾಡಿದ್ದಾರೆ.

ಅಷ್ಟಕ್ಕೇ ಸುಮ್ಮನಾಗದ ಓವೈಸಿ, ಪ್ರಧಾನಿ ಮೋದಿಯವರು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​ ಷರೀಫ್​ ಮೊಮ್ಮಗಳ ಮದುವೆಗೆ ತೆರಳಿದ್ದರು. ಅಲ್ಲಿ ನವಾಜ್ ಷರೀಫ್ ಏನನ್ನು ತಿನ್ನಲು ಕೊಟ್ಟಿದ್ದಾರೆಂಬುದರ ಬಗ್ಗೆ ಅವರಿಗೆ ಗೊತ್ತಿಲ್ಲವೇನೋ? ಎಂದು ಕುಟುಕಿದ್ದಾರೆ.

One Reply to “ಅಮಿತ್​ ಷಾಗೆ ಗೋಮಾಂಸ ಬಿರ್ಯಾನಿ ಕಳಿಸಲು ಕೆಸಿಆರ್​ಗೆ ಕೋರುತ್ತೇನೆ ಎಂದ ಅಸಾದುದ್ದೀನ್​ ಓವೈಸಿ”

Comments are closed.