Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಕಾಂಗ್ರೆಸ್‌ ಸರ್ಕಾರದ ಕಡೇ ದಿನಗಳು ಆರಂಭ: ಅಮಿತ್‌ ಷಾ

Wednesday, 10.01.2018, 2:23 PM       No Comments

<< ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಲೆಕ್ಕ ಕೇಳಲು ಬಂದಿದ್ದೇನೆ>>

ಚಿತ್ರದುರ್ಗ: ಕಾಂಗ್ರೆಸ್‌ ಸರ್ಕಾರದ ಕೊನೆ ದಿನಗಳು ಪ್ರಾರಂಭವಾಗಿದ್ದು, ಮುಖ್ಯಮಂತ್ರಿ ಸವಾಲಿಗೆ ಜವಾಬ್‌ ನೀಡಲು ಬಂದಿದ್ದೇನೆ. ನಮ್ಮ ಬಳಿ ಅವರು ಲೆಕ್ಕ ಕೇಳಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಹೇಳಿದರು.

ಜಿಲ್ಲೆಯ ಹೊಳಲ್ಕೆರೆಯ ಕೊಟ್ರೆ ನಂಜಪ್ಪ ಕಾಲೇಜು ಮೈದಾನದಲ್ಲಿ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತ್ ಮಾತಾ ಕೀ‌ ಜೈ ಘೋಷಣೆಯನ್ನು ದೆಹಲಿಯಲ್ಲಿರುವ ಮೋದಿ ಜೀಗೆ ಕೇಳಿಸುವಂತೆ ಹೇಳಿ. ಬಿಜೆಪಿ ಕಾರ್ಯಕರ್ತರು ಸಂಘಟನೆ ಮಾಡುತ್ತಿರುವುದು ಗೊತ್ತಾಗುವಂತೆ ಕೂಗಿ ಹೇಳಿ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದ ಷಾ, ಬಿ.ಎಸ್.​ಯಡಿಯೂರಪ್ಪನವರೇ ಭಾವಿ ಮುಖ್ಯಮಂತ್ರಿ ಎಂದು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಯಾವುದೇ ವಿಕಾಸವಾಗಿಲ್ಲ. ಕರ್ನಾಟಕದ ಜನರ ಆಶೀರ್ವಾದದಿಂದ ಮೋದಿ ಪ್ರಧಾನಿಯಾಗಿದ್ದಾರೆ. ಈವರೆಗೂ ಕೇಂದ್ರ ಸರ್ಕಾರ ರಾಜ್ಯಕ್ಕೆ 2,19,000 ಕೋಟಿ ರೂಪಾಯಿ ನೀಡಿದೆ. ಯುಪಿಎ ಅವಧಿಯಲ್ಲೂ ಇಷ್ಟೊಂದು ಹಣ ನೀಡಿರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ 2,19,000 ರೂ. ಹಣದ ಲೆಕ್ಕ ಕೊಡಿ. ಹಣದ ಲೆಕ್ಕವನ್ನು ನಾವು ಕೇಳುತ್ತಿಲ್ಲ, ರಾಜ್ಯದ ಜನ ಕೇಳುತ್ತಿದ್ದಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡಿ, ವಿದೇಶಕ್ಕೆ ಹೋಗಿ ಅನಿವಾಸಿ ಭಾರತೀಯರ ಸಭೆಯಲ್ಲಿ ರಾಹುಲ್ ಗಾಂಧಿ ಜವಾಬ್ದಾರಿ ಇಲ್ಲದೆ ಮಾತನಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಪರಿವರ್ತನಾ ರ‍್ಯಾಲಿಯ ಸಮಾರೋಪಕ್ಕೆ ಮೋದಿ ಬರುತ್ತಿದ್ದು, ಆಗ ಬೆಂಗಳೂರಲ್ಲಿ 5 ಲಕ್ಷ ಜನ ಸೇರುತ್ತಿದ್ದಾರೆ. 40 ವರ್ಷಗಳಿಂದ ರಾಜ್ಯದಲ್ಲಿ ಪ್ರವಾಸ ಮಾಡಿದ್ದರೂ ಈ ಯಾತ್ರೆಗೆ ಹೋದಾಗ ಸಿಕ್ಕಿದ ಸ್ವಾಗತ ಎಂದೂ ಸಿಕ್ಕಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಡುಗೊಲ್ಲರ ಸಮಸ್ಯೆ ಬಗೆಹರಿಸುತ್ತೇನೆ ಎಂದರು.

ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, 3 ವರ್ಷದಲ್ಲಿ ಭದ್ರಾ ನೀರು ಹರಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಇನ್ನೂ ನೀರು ಬಂದಿಲ್ಲ. ಯಾತ್ರೆಗೆ ಸೇರಿರುವ ಜನರನ್ನು ನೋಡಿ ಆಂಜನೇಯ ಎದೆ ಒಡೆಯುತ್ತಿದೆ ಎಂದು ಹೇಳಿದರು.
ಬಿಜೆಪಿ ಪರಿವರ್ತನಾ ರ‍್ಯಾಲಿಯನ್ನು ಉದ್ಘಾಟಿಸಿದ ಅಮಿತ್ ಷಾ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಸ್ವಾಗತ ಕೋರಿದರು. ಮಾಜಿ ಶಾಸಕ ಚಂದ್ರಪ್ಪ ಬೆಳ್ಳಿ ಕಮಲದ ಉಡುಗೊರೆ ನೀಡಿದರು.

ಸಮಾವೇಶದಲ್ಲಿ ಸಂಸದ ಬಿ.ಶ್ರೀರಾಮುಲು, ಸಿ.ಟಿ. ರವಿ, ಮುಖಂಡರಾದ ಮುರುಳೀಧರ ರಾವ್, ಪುರಂದರೇಶ್ವರಿ, ಜಿ.ಎಂ.ಸಿದ್ದೇಶ್ವರ್​, ಗೋವಿಂದ ಕಾರಜೋಳ, ರವಿಕುಮಾರ್ ಉಪಸ್ಥಿತರಿದ್ದರು. (ದಿಗ್ವಿಜಯ ನ್ಯೂಸ್‌)

Leave a Reply

Your email address will not be published. Required fields are marked *

Back To Top