ಏಷ್ಯನ್​ ಕುಸ್ತಿ ಚಾಂಪಿಯನ್​​ಶಿಪ್​​: ಅಮಿತ್​​ಗೆ ಒಲಿದ ಬೆಳ್ಳಿ

ಕ್ಸಿಯಾನ್​​: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್​​ ಕುಸ್ತಿ ಚಾಂಪಿಯನ್​​ಶಿಪ್​​​ನಲ್ಲಿ ಭಾರತದ ಅಮಿತ್​​ ಧನ್​​​ಕರ್​​ ಬೆಳ್ಳಿ ಹಾಗೂ ರಾಹುಲ್​​ ಅವಾರ್​ ಅವರು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಬುಧವಾರ ಇಲ್ಲಿ ನಡೆದ ಪುರುಷರ 74 ಕೆ.ಜಿ ಫ್ರಿಸ್ಟೈಲ್​​​​​​​​​​​ ವಿಭಾಗದ ಫೈನಲ್​ನಲ್ಲಿ ಅಮಿತ್​​, ಕಜಕಿಸ್ತಾನದ ದನಿಯರ್ ಕೈಸಾನೊವ್ ಎದುರು 0-5 ಅಂತರಗಳಿಂದ ಮಣಿದು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ವಿಶ್ವಾಸದಿಂದಲೇ ಕಣಕ್ಕಿಳಿದ ಹರಿಯಾಣ ಆಟಗಾರ ಎದುರಾಳಿಯ ತಂತ್ರಗಾರಿಕೆಯನ್ನು ಜಯಿಸಲು ಸಾಧ್ಯವಾಗಲಿಲ್ಲ. ಅಮಿತ್​​​​​​​​ 2013ನೇ ಆವೃತ್ತಿಯಲ್ಲಿ ಚಿನ್ನದ ಪದಕ ಜಯಿಸಿದ್ದರು.

ಕಾಮನ್​​ವೆಲ್ತ್​​ ಚಿನ್ನದ ಪದಕ ವಿಜೇತ ರಾಹುಲ್​ ಅವಾರ್​ ಅವರು ಕಂಚಿನ ಪದಕ ಪಂದ್ಯದಲ್ಲಿ ಕೊರಿಯಾದ ಜಿನ್ಚೆಲ್ ಕಿಮ್ ಎದುರು ಯಶಸ್ವಿ ಹೋರಾಟ ನಡೆಸುವ ಮೂಲಕ 9-2 ಅಂತರದಿಂದ ಜಯ ದಾಖಲಿಸಿ ಪದಕ ತಮ್ಮದಾಗಿಸಿಕೊಂಡರು.
ಟೂರ್ನಿಯಲ್ಲಿ ಭಾರತ ಒಂದು ಚಿನ್ನ, 2 ಬೆಳ್ಳಿ ಮತ್ತು 2 ಕಂಚಿನ ಪದಕ ಜಯಿಸಿದೆ. (ಏಜನ್ಸೀಸ್)