ಅಮೇಥಿ ರೈಫಲ್​ ಕಾರ್ಖಾನೆ ವಿಷಯವಾಗಿ ರಾಹುಲ್​ ಗಾಂಧಿ ಮತ್ತು ಸ್ಮೃತಿ ಇರಾನಿ ನಡುವೆ ಟ್ವಿಟರ್​ ಯುದ್ಧ

ನವದೆಹಲಿ: ಅಮೇಥಿಯ ಆರ್ಡನನ್ಸ್​ ಫ್ಯಾಕ್ಟರಿಯಲ್ಲಿ ರಷ್ಯಾ ಸಹಭಾಗಿತ್ವದಲ್ಲಿ ಎಕೆ-203 ರೈಫಲ್​ಗಳ ತಯಾರಿಕೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ ವಿಷಯವಾಗಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡುವೆ ಟ್ವಿಟರ್​ ಯುದ್ಧ ನಡೆದಿದೆ.

ಈ ಫ್ಯಾಕ್ಟರಿಗೆ ತಾವು 2010ರಲ್ಲೇ ಶಂಕುಸ್ಥಾಪನೆ ನೆರವೇರಿಸಿದ್ದೆ. ಇದಕ್ಕೆ ಮತ್ತೆ ಚಾಲನೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಸುಳ್ಳು ಹೇಳುವ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ ಎಂದು ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಸಚಿವೆ ಸ್ಮೃತಿ ಇರಾನಿ, ಅಮೇಥಿಯಲ್ಲಿ ಅಭಿವೃದ್ಧಿ ಕಾರ್ಯಗ|ಳು ಆಗುತ್ತಿರುವುದು ನಿಮ್ಮಲ್ಲಿ ನಡುಕ ಉಂಟು ಮಾಡಿರಬಹುದು. ಪ್ರಧಾನಿ ಅವರು ರಷ್ಯಾದ ಸಹಭಾಗಿತ್ವದಲ್ಲಿ ಎಕೆ-203 ರೈಫಲ್​ಗಳ ಉತಯ್ಪಾದನೆಗೆ ಚಾಲನೆ ನೀಡಿದ್ದಾರೆ ಹೊರತು ಆರ್ಡನನ್ಸ್​ ಫ್ಯಾಕ್ಟರಿಗೆ ಅಲ್ಲ. ಇದನ್ನು ಅರಿತುಕೊಳ್ಳದೆ ಸುಳ್ಳು ಆರೋಪಗಳನ್ನು ಮಾಡುವುದನ್ನು ನಿಲ್ಲಿಸಿ ಎಂದು ರಾಹುಲ್​ ಗಾಂಧಿಗೆ ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್​)