ಅಮೆರಿಕದಲ್ಲಿ ಹಿಂದಿವಾಲಾ ನಂ.1

ಎಂಟು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಪೈಕಿ ಹಿಂದಿ ಮಾತನಾಡುವವರು ನಂ.1 ಸ್ಥಾನ ಕಾಯ್ದುಕೊಂಡು ಬರುತ್ತಿದ್ದಾರೆ. 6.09 ಲಕ್ಷ ಮಂದಿ ಹಿಂದಿ ಭಾಷಿಕರಿಂದ ಆರಂಭಗೊಂಡು 2017ರಲ್ಲಿ ಅವರ ಸಂಖ್ಯೆ 8.63 ಲಕ್ಷ ತಲುಪಿದೆ. ಯುಎಸ್ ಸೆನ್ಸಸ್ ಬ್ಯೂರೊ ನಡೆಸಿದ ಅಮೆರಿಕನ್ ಕಮ್ಯೂನಿಟಿ ಸರ್ವೆ (ಎಸಿಎಸ್) ಪ್ರಕಾರ ಅಮೆರಿಕದಲ್ಲಿರುವ ಭಾರತೀಯ ಭಾಷಿಕರ ಪೈಕಿ ಗುಜರಾತಿ ಮಾತನಾಡುವವರು 2ನೇ ಸ್ಥಾನ, ತೆಲುಗು ಭಾಷಿಕರು 3ನೇ ಸ್ಥಾನದಲ್ಲಿದ್ದಾರೆ. ಕಳೆದ 8 ವರ್ಷಗಳಲ್ಲಿ ತೆಲುಗು ಮಾತನಾಡುವವರ ಸಂಖ್ಯೆ ಶೇ. 86 ಹೆಚ್ಚಳವಾಗಿರುವುದು ಗಮನಾರ್ಹ. ಸಮೀಕ್ಷೆಯಲ್ಲಿ 20 ಲಕ್ಷ ಅಮೆರಿಕ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ.

# 17% ಅಮೆರಿಕದಲ್ಲಿರುವ ಭಾರತೀಯರಲ್ಲಿ ಗುಜರಾತಿ, ತೆಲುಗು ಮಾತನಾಡುವವರು

# ಅಮೆರಿಕದ ಟಾಪ್ 5 ನಗರಗಳಲ್ಲಿ ಶೇ. 48 ಇಂಗ್ಲಿಷೇತರ ಭಾಷಿಕರಿದ್ದಾರೆ.

# 8 ವರ್ಷದಲ್ಲಿ ತೆಲುಗು ಭಾಷಿಕರು 86% ಹೆಚ್ಚಳ

 

# 21.8% (5 ವರ್ಷಕ್ಕೂ ಮೇಲ್ಪಟ್ಟ ಪ್ರಜೆ, ಅಧಿಕೃತ ಹಾಗೂ ಅಕ್ರಮ ವಲಸಿಗ) ನಿವಾಸದಲ್ಲಿ ಇಂಗ್ಲಿಷ್ ಹೊರತಾಗಿ ಅನ್ಯಭಾಷೆ ಮಾತನಾಡುವವರು

# 6.7 ಕೋಟಿ 30.5 ಕೋಟಿ ಅಮೆರಿಕ ನಿವಾಸಿಗಳ (2017ರ ಜು.1ರ ಗಣತಿಯಂತೆ) ಪೈಕಿ ವಿದೇಶಿ ಭಾಷೆ ಮಾತನಾಡುವವರು

ಯಾಕೆ ತೆಲುಗು ಭಾಷಿಕರ ಹೆಚ್ಚಳ?

ಸಮೀಕ್ಷಾ ತಜ್ಞರ ಪ್ರಕಾರ ಅಮೆರಿಕದಲ್ಲಿನ ಸಿಲಿಕಾನ್ ವ್ಯಾಲಿಯಲ್ಲಿ ಸಾಫ್ಟ್​ವೇರ್ ಉದ್ಯೋಗಕ್ಕಾಗಿ ಬಂದು ನೆಲೆಸುವವರು ಹೆಚ್ಚಾಗುತ್ತಿದ್ದಾರೆ. ಆ ಪೈಕಿ ಟೆಕ್ಕಿಗಳು ಅಮೆರಿಕ ಪ್ರವೇಶಿಸುವುದು ಎಚ್-1ಬಿ ವೀಸಾಗಳ ಮೂಲಕ. ಐಟಿ ಕ್ಷೇತ್ರದಲ್ಲಿ ಅತಿಹೆಚ್ಚು ಮಂದಿ ತೆಲುಗು ಭಾಷಿಕರಿದ್ದು, ಅವರಲ್ಲಿ ಬಹುತೇಕರು ಎಚ್-1ಬಿ ವೀಸಾ ಅನ್ವಯ ಅಮೆರಿಕದಲ್ಲಿ ನೆಲೆಸುತ್ತಿದ್ದಾರೆ. ಕ್ರಮೇಣ ಅವರ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ವಿಶ್ಲೇಷಿಸಿದ್ದಾರೆ.

(ಮಾಹಿತಿ: ಯುಎಸ್ ಸೆನ್ಸಸ್ ಬ್ಯುರೊ-ಅಮೆರಿಕನ್ ಫ್ಯಾಕ್ಟ್ ಫೈಂಡರ್ ವೆಬ್​ಸೈಟ್)