ಪೋರ್ಟ್ಲ್ಯಾಂಡ್: ಅಮೆರಿಕದ ಪೋರ್ಟ್ಲ್ಯಾಂಡ್ ಕನ್ನಡ ಕೂಟದ 30ನೇ ದೀಪಾವಳಿ ಸಂಭ್ರಮ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆ ಹಾಗೂ ವಿಶೇಷ ಕಾರ್ಯಕ್ರಮಗಳ ವಿಜೇತರ ಹೆಸರು ನಾಳೆ ಬೆಳಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಘೋಸಿಸಲಾಗುವುದು.
ಪೋರ್ಟ್ಲ್ಯಾಂಡ್ ಕನ್ನಡ ಕೂಟವು “ದೀಪೋತ್ಸವ ಸ್ಪರ್ಧೆ” ಹಾಗೂ “ದೀಪೋತ್ಸವ ಸಾಂಸ್ಕೃತಿಕ ಪ್ರದರ್ಶನ”ಗಳನ್ನು ಹಬ್ಬದ ವಿಶೇಷವಾಗಿ ಆಯೋಜಿಸಿತ್ತು. ಸಾಂಸ್ಕೃತಿಕ ಪ್ರದರ್ಶನ ಅಡಿಯಲ್ಲಿ ಸ್ವರ ಸಂಭ್ರಮ (ಎಸ್ಪಿಬಿ ಮತ್ತು ರಾಜನ್ ನಾಗೇಂದ್ರರರಿಗೆ ಗೌರವ), ನೃತ್ಯಾಂಜಲಿ (ಸ್ಯಾಂಡಲ್ವುಡ್ ನಟಿಯರಿಗೆ ಗೌರವ) ಮತ್ತು ಹರಟೆ ಕಟ್ಟೆ ಕಾರ್ಯಕ್ರಮಗಳನ್ನು ಏರ್ಪಡಿಸಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಮಾಡಿ ನ. 13ರ ಒಳಗೆ ಸಲ್ಲಿಸುವಂತೆ ಕೇಳಿತ್ತು.
ದೀಪೋತ್ಸವ ಸ್ಪರ್ಧೆ ಅಡಿಯಲ್ಲಿ ಡಬ್ಸ್ಮ್ಯಾಶ್, ರಂಗೋಲಿ, ಪೇಟಿಂಗ್ ಮತ್ತು ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳ ಕಂಠಪಾಠ ಮತ್ತು ಪೇಂಟಿಂಗ್ ವಿಡಿಯೋ ಸಲ್ಲಿಸಲು ನ. 8 ಹಾಗೂ ರಂಗೋಲಿ ಮತ್ತು ಡಬ್ಸ್ಮ್ಯಾಶ್ ವಿಡಿಯೋ ಸಲ್ಲಿಸಲು ನ. 15ರ ಒಳಗೆ ಕಾಲಾವಕಾಶ ನಿಗದಿ ಮಾಡಲಾಗಿತ್ತು.
ಮಕ್ಕಳು ಮತ್ತು ವಯಸ್ಕರಿಗೆಂದೇ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಸಹ ಸಿಗಲಿದೆ. ನ. 22ರ ಭಾರತೀಯ ಕಾಲಮಾನ ಬೆಳಗ್ಗೆ 6.30ಕ್ಕೆ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗುತ್ತದೆ.
ಕರೊನಾ ಹಿನ್ನೆಲೆಯಲ್ಲಿ ಕಾರ್ಯಕ್ರಮವು ವರ್ಚುವಲ್ ಆಗಿರಲಿದ್ದು, ಪೋರ್ಟ್ಲ್ಯಾಂಡ್ ಕನ್ನಡ ಕೂಟ (https://www.facebook.com/portlandkannadakoota/) ಫೇಸ್ಬುಕ್ ಖಾತೆ ಹಾಗೂ (https://www.youtube.com/watch?v=HJsS3UIT0zU) ಯೂಟ್ಯೂಬ್ ಲೈವ್ನಲ್ಲಿ ವೀಕ್ಷಿಸಬಹುದಾಗಿದೆ.
ಕನ್ನಡ ಬರಿ ಭಾಷೆಯಲ್ಲ ಅದು ಸಂಸ್ಕೃತದ ಆಗರ: ಪೋರ್ಟ್ಲ್ಯಾಂಡ್ ಕನ್ನಡ ಕೂಟದ ನಾಡಹಬ್ಬದಲ್ಲಿ ನಾಗಾಭರಣ