ಗದಗ: ರೋಗಿಗಳ ಆರೈಕೆ ಮಾಡಲು ವೈದ್ಯಕೀಯ ಸಿಬ್ಬಂದಿ ಬಳಸುವ ಪಿಪಿಇ ಕಿಟ್ ಅನ್ನು (ವೈಯಕ್ತಿಕ ರಕ್ಷಣಾ ಸಾಧನ) ಜಿಲ್ಲಾಸ್ಪತ್ರೆ ಸಮೀಪದ ಮಲ್ಲಸಮುದ್ರ ಕ್ರಾಸ್ ಬಳಿ ರಸ್ತೆ ಪಕ್ಕದಲ್ಲಿ ಶುಕ್ರವಾರ ವಿಲೇವಾರಿ ಮಾಡಲಾಗಿದೆ.
ಜಿಮ್ಸ್ ಆಸ್ಪತ್ರೆಯ ಆಂಬುಲೆನ್ಸ್ ಚಾಲಕನೊಬ್ಬ ಪಿಪಿಇ ಕಿಟ್ ಅನ್ನು ರಸ್ತೆ ಬದಿಯಲ್ಲಿ ಬಿಸಾಕಿ ಹೋಗಿದ್ದಾನೆ. ಪಿಪಿಇ ಕಿಟ್ ಬೇಕಾಬಿಟ್ಟಿಯಾಗಿ ವಿಲೇವಾರಿ ಮಾಡಿದ್ದರಿಂದ, ಆ ಮಾರ್ಗದಲ್ಲಿ ಓಡಾಡುವ ಜನರು ಆತಂಕಗೊಂಡಿದ್ದಾರೆ.
ಕೋವಿಡ್-19 ಮಾರ್ಗಸೂಚಿ ಅನ್ವಯ ಪಿಪಿಇ ಕಿಟ್ ಅನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆದರೆ ಅದನ್ನು ಆಂಬುಲೆನ್ಸ್ ಚಾಲಕ ಬೇಕಾಬಿಟ್ಟಿ ವಿಲೇವಾರಿ ಮಾಡಿರುವ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಜತೆಗೆ ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮೊಸಳೆ ದವಡೆಗೆ ಸಿಲುಕಿದ್ದ ಮಗನನ್ನು ರಕ್ಷಿಸಲು ಪ್ರಾಣ ಪಣಕ್ಕಿಟ್ಟು ಕಾದಾಡಿದ ತಾಯಿ: ಮುಂದೇನಾಯ್ತು ಗೊತ್ತಾ ?