ಜಾತ್ರೆಗಾಗಿ ಸಿಹಿ ಪದಾರ್ಥಗಳ ಸಂಗ್ರಹ

ಹಾನಗಲ್ಲ: ಚೌಡಯ್ಯದಾನಪುರದಲ್ಲಿ ಜ. 14 ಹಾಗೂ 15ರಂದು ನಡೆಯಲಿರುವ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ, ಲಿಂ. ಶಾಂತಮುನಿ ಮಹಾಸ್ವಾಮಿಗಳ ತೃತೀಯ ಸ್ಮರಣೋತ್ಸವ ಮತ್ತು ಜಗದ್ಗುರು ಶಾಂತಭೀಷ್ಮ ಮಹಾಸ್ವಾಮಿಗಳ ಪೀಠಾರೋಹಣದ ದ್ವಿತೀಯ ವಾರ್ಷಿಕೋತ್ಸವದ ದಾಸೋಹಕ್ಕಾಗಿ ತಾಲೂಕಿನಿಂದ ರೊಟ್ಟಿ ಹಾಗೂ ಸಿಹಿ ಪದಾರ್ಥಗಳನ್ನು ಕೊಂಡೊಯ್ಯಲಾಗುತ್ತಿದೆ.

ಈ ಕುರಿತು ಭಾನುವಾರ ಮಾಹಿತಿ ನೀಡಿದ ಗಂಗಾಮತ ಸಮಾಜ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಾಜೇಂದ್ರ ರ್ಬಾ, ಜಾತ್ರೆಗಾಗಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಂದಲೂ ರೊಟ್ಟಿ ಸಂಗ್ರಹಣೆ ನಡೆಯುತ್ತಿದೆ. ಹಾನಗಲ್ಲ ತಾಲೂಕಿನ 70 ಗ್ರಾಮಗಳಲ್ಲಿ ಗಂಗಾಮತ ಸಮಾಜ ಬಾಂಧವರು ವಾಸಿಸುತ್ತಿದ್ದು, ಎಲ್ಲ ಗ್ರಾಮಗಳಲ್ಲಿ ಕಡಕ್ ರೊಟ್ಟಿ ಹಾಗೂ ಪುಡಿಚಟ್ನಿ, ಅಕ್ಕಿ, ಬೇಳೆ, ಕರ್ಚಿಕಾಯಿ, ಶೇಂಗಾಹೋಳಿಗೆ, ಉಂಡಿ ಮತ್ತಿತರ ಸಿಹಿ ಪದಾರ್ಥಗಳನ್ನು ತಯಾರಿಸಿ ಸಂಗ್ರಹಿಸಲಾಗಿದೆ. ಈ ಎಲ್ಲ ಪದಾರ್ಥಗಳನ್ನು ಸೋಮವಾರ ಚೌಡಯ್ಯದಾನಪುರಕ್ಕೆ ತೆರಳಿ ಮಠಕ್ಕೆ ಸಮರ್ಪಿಸಲಾಗುವುದು ಎಂದರು.

ಗಂಗಾಮತ ಟ್ರಸ್ಟ್ ಸಮಿತಿ ಅಧ್ಯಕ್ಷ ಅನಂತವಿಕಾಸ ನಿಂಗೋಜಿ, ವಿವಿಧ ಪದಾಧಿಕಾರಿಗಳಾದ ನಾರಾಯ ಣಪ್ಪ ಕಠಾರೆ, ನಾಗೇಂದ್ರ ತುಮರಿಕೊಪ್ಪ, ಭಾಸ್ಕರ್ ಹುಲಮನಿ, ಲಕ್ಷ್ಮಣ ಬಾಳಂಬೀಡ, ಮಲ್ಲಪ್ಪ ಹುಲಿ, ಮೈಲಾರಪ್ಪ ಕಬ್ಬೂರ, ಕರಬಸಪ್ಪ ರ್ಬಾ, ಹನುಮಂ ತಪ್ಪ ಸುರಳೇಶ್ವರ, ಕೃಷ್ಣಪ್ಪ ಜಾಡರ್ ಇತರರಿದ್ದರು.

Leave a Reply

Your email address will not be published. Required fields are marked *