ಗೊಳಸಂಗಿ: ಗ್ರಾಮದಲ್ಲಿನ ಅಂಬೇಡ್ಕರ್ ಭವನವನ್ನು ಜೀರ್ಣೋದ್ಧಾರ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕಾಳಪ್ಪ ಮಸಬಿನಾಳ ಆಗ್ರಹಿಸಿದರು.

ಗ್ರಾಮದ ಇಂದಿರಾ ನಗರದ ಆಚೆಗಿರುವ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಡಾ.ಬಿ.ಆರ್. ಅಂಬೇಡ್ಕರರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಭವನದ ಕಿಟಕಿ-ಗಾಜುಗಳೆಲ್ಲ ಒಡೆದು ಹೋಗಿವೆ. ಒಳಗಡೆ ಫ್ಯಾನ್ ಕೂಡ ಇಲ್ಲ. ಅಲ್ಲದೆ, ಎಸ್.ಸಿ. ಕಾಲನಿಯಲ್ಲಿ ಸಿಮೆಂಟ್ ರಸ್ತೆ ಇಲ್ಲ. ಕೂಡಲೇ ಸಿಮೆಂಟ್ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಪಿಡಿಒ ಎಂ.ಎಚ್. ಕಾಳಗಿ, ಕಾರ್ಯದರ್ಶಿ ಅಶೋಕ ಗಲಗಲಿ, ಡಿಎಸ್‌ಎಸ್ ಕಾರ್ಯದರ್ಶಿ ವಿನೋದ ಚಲವಾದಿ, ಶಿವ ಚವ್ಹಾಣ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ರಾವುತ ಸೀಮಿಕೇರಿ, ಮಾಜಿ ಅಧ್ಯಕ್ಷ ಕೇಶವ ಪವಾರ, ಗ್ರಾಪಂ ಸದಸ್ಯರು, ದಲಿತ ಮುಖಂಡರಾದ ಹುಸನಪ್ಪ ಚಿಮ್ಮಲಗಿ, ಸಿಂಧೂರ ಚಲವಾದಿ, ಆನಂದ ಚಲವಾದಿ, ಶಿವಪ್ಪ ಚಲವಾದಿ, ರಾಘವೇಂದ್ರ ಚಲವಾದಿ, ಲಕ್ಷ್ಮಣ ಚಲವಾದಿ, ರಾಘವೇಂದ್ರ ಚಲವಾದಿ, ಶೇಕು ಚಲವಾದಿ, ಸದಾಶಿವ ಚಿಮ್ಮಲಗಿ, ರವಿ ಚಲವಾದಿ ಇತರರಿದ್ದರು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಿತು.