ಅಂಬಿ ಹುಟ್ಟೂರಿಗೆ ಭೇಟಿ ನೀಡಿದ ಸುಮಲತಾ, ಅಭಿಷೇಕ್‌ರಿಂದ ಮನೆದೇವರಿಗೆ ಪೂಜೆ

ಮಂಡ್ಯ: ಅಂಬರೀಷ್ ಹುಟ್ಟೂರು ದೊಡ್ಡರಸಿನಕೆರೆ ಬಳಿ ಇರುವ ಚಿಕ್ಕಅರಸಿನಕೆರೆ ಗ್ರಾಮಕ್ಕೆ ಪತ್ನಿ ಮತ್ತು ಪುತ್ರ ಭೇಟಿ ನೀಡಿ ಮನೆ ದೇವರಿಗೆ ಪೂಜೆ ಸಲ್ಲಿಸಿದರು.

ಚಿಕ್ಕಅರಸಿನಕೆರೆ ಕಾಲಭೈರವೇಶ್ವರ ಸ್ವಾಮಿ ಹಾಗೂ ಮಂಡ್ಯ ತಾಲೂಕಿನ ಬಸರಾಳು ಬಳಿಯ ಮುತ್ತೆಗೆರೆ ಮಾಯಮ್ಮನಿಗೆ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಪೂಜೆ ಸಲ್ಲಿಸಿದರು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಇವರಿಗೆ ಸಾಥ್‌ ನೀಡಿದರು.

ಪೂಜೆ ಬಳಿಕ ಸ್ವಗ್ರಾಮ ದೊಡ್ಡರಸಿಕೆರೆಗೆ ಭೇಟಿ ನೀಡಿ ಗ್ರಾಮಸ್ಥರು ಅಂಬಿ ಚಿತಾಭಸ್ಮ ತಂದು ನಿರ್ಮಿಸಿರುವ ಸಮಾಧಿಗೆ ಪೂಜೆ ಸಲ್ಲಿಸಿದರು.

ಬಹಳ ವರ್ಷಗಳಾದ ಬಳಿಕ ಅಂಬಿ ನಿಧನದ ನಂತರ ತವರಿಗೆ ಬಂದ ಪತ್ನಿ ಮತ್ತು ಪುತ್ರನಿಗೆ ಗ್ರಾಮಸ್ಥರು ಅಂಬಿಗೆ ಜೈಕಾರ ಕೂಗಿ ಅದ್ಧೂರಿ ಸ್ವಾಗತ ಕೋರಿದರು. ಜನರ ಅಭಿಮಾನ ಕಂಡು ಪತ್ನಿ‌ ಮತ್ತು ಪುತ್ರ ಭಾವುಕರಾದರು. (ದಿಗ್ವಿಜಯ ನ್ಯೂಸ್)