ಚಂದ್ರಶೇಖರ್​ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಒಳ್ಳೆಯದಲ್ಲ: ಅಂಬರೀಶ್​

ಬೆಂಗಳೂರು: ಚಂದ್ರಶೇಖರ್​ ಚುನಾವಣಾ ಕಣದಿಂದ ಈ ರೀತಿ ಹಿಂದೆ ಸರಿದಿರುವುದು ಒಳ್ಳೆಯದಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಮಾಜಿ ಸಚಿವ ಅಂಬರೀಷ್ ಪ್ರತಿಕ್ರಿಯಿಸಿದ್ದಾರೆ.

ರಾಮನಗರ ಚುನಾವಣೆ ಕಣದಿಂದ ಬಿಜೆಪಿ ಅಭ್ಯರ್ಥಿ ಹಿಂದೆ ಸರಿದಿರುವುದರ ಕುರಿತು ಫಿಲಂ ಚೇಂಬರ್​ನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಹೀಗೆ ಮಾಡುವುದು ಸರಿಯಲ್ಲ. ಈ ರೀತಿ ಆಗಿರುವುದು ಇದೇ ಮೊದಲು ಎಂದರು.

ಇನ್ನೂ ಮಂಡ್ಯ ಉಪಚುನಾವಣೆಯಲ್ಲಿ ಜೆಡಿಎಸ್​ಗೆ ಬೆಂಬಲ ಮಾಡುತ್ತೀರ ಎಂಬ ಪ್ರಶ್ನೆಗೆ ಮಂಡ್ಯದಲ್ಲಿರುವುದು ಸಮ್ಮಿಶ್ರ ಸರ್ಕಾರ ಅಲ್ವಾ ಎಂದು ಮರುಪ್ರಶ್ನಿಸಿದರು. (ದಿಗ್ವಿಜಯ ನ್ಯೂಸ್)

One Reply to “ಚಂದ್ರಶೇಖರ್​ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಒಳ್ಳೆಯದಲ್ಲ: ಅಂಬರೀಶ್​”

Comments are closed.