ನಾಲ್ಕು ತಿಂಗಳ ಹಿಂದೆಯೇ ಮಗನ ಹೆಸರಿಗೆ ಜಮೀನು ಬರೆದಿದ್ದ ಅಂಬಿ

ಬೆಂಗಳೂರು: ಅಂಬರೀಷ್​ ಅವರು ತಮ್ಮ ಹುಟ್ಟೂರು ದೊಡ್ಡ ಅರಸೀಕೆರೆಯಲ್ಲಿದ್ದ ಏಳು ಎಕರೆ ಜಮೀನನ್ನು ನಾಲ್ಕು ತಿಂಗಳ ಹಿಂದೆಯೇ ಪುತ್ರ ಅಭಿಷೇಕ್​ ಗೌಡ ಹೆಸರಿಗೆ ನೋಂದಣಿ ಮಾಡಿಸಿದ್ದರಂತೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಅಂಬಿ ಹೆಸರಿನಲ್ಲಿ ಈ ಏಳು ಎಕರೆ ಜಮೀನು ಇತ್ತು. ಜುಲೈ 21ರಂದು ಅಲ್ಲಿನ ಸಬ್​ರಿಜಿಸ್ಟ್ರಾರ್​ ಕಚೇರಿಗೆ ಮಗನೊಟ್ಟಿಗೆ ತೆರಳಿದ ಅಂಬರೀಷ್​ ಎಲ್ಲ ಕಾನೂನು ಪ್ರಕ್ರಿಯೆಗಳನ್ನೂ ಮುಗಿಸಿದ್ದರು ಎನ್ನಲಾಗಿದೆ.

ನಾಲ್ಕು ತಿಂಗಳ ಹಿಂದೆಯೇ ಮಗನ ಹೆಸರಿಗೆ ಆಸ್ತಿ ಬರೆದ ಅಂಬರೀಷ್​ಗೆ ತಮ್ಮ ಸಾವಿನ ಸುಳಿವು ಸಿಕ್ಕಿತ್ತಾ ಎಂಬ ಮಾತುಗಳು ಅವರ ಅಭಿಮಾನಿಗಳ ವಲಯದಿಂದ ಕೇಳಿಬರುತ್ತಿದೆ.