Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

Photos: ರೆಬೆಲ್ ಸ್ಟಾರ್ ಅಂಬಿ ಯಶ್ ಮಗುವಿಗೆ ನೀಡಿ ಹೋದ ಗಿಫ್ಟ್ ಯಾವುದು ಗೊತ್ತೆ?

Friday, 07.12.2018, 3:00 PM       No Comments

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಮತ್ತು ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್​ ದಂಪತಿಯ ಪುತ್ರಿಗೆ ಇತ್ತೀಚೆಗೆ ವಿಧಿವಶರಾದ ಅಂಬರೀಷ್​ ಅವರು ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾರೆ.

ಹೌದು, ಅಂಬರೀಷ್​ ಅವರು ಯಶ್​ ಮಗುವಿಗಾಗಿ ಸುಮಾರು 1.5 ಲಕ್ಷ ರೂ. ಬೆಲೆಬಾಳುವ ವಿಶೇಷವಾದ ತೊಟ್ಟಿಲೊಂದನ್ನು ಬುಕ್​ ಮಾಡಿದ್ದರು. ಈ ಕುರಿತು ಅವರು ಪತ್ನಿ ಸುಮಲತಾ ಮತ್ತು ಯಶ್​ಗೆ ಈ ವಿಷಯವನ್ನು ತಿಳಿಸಿರಲಿಲ್ಲ. ಅವರು ಎಲ್ಲರಿಗೂ ಸರ್​ಪ್ರೈಸ್​ ಕೊಡಬೇಕು ಎಂದಿದ್ದರು.

ಮೊನ್ನೆ ಅಂಬರೀಷ್​ ಅವರ ಮೊಬೈಲ್​ಗೆ ಗಿಫ್ಟ್​ ರೆಡಿ ಇದೆ ಎಂದು ಮೆಸೇಜ್​ ಬಂದಿತ್ತು. ಇದನ್ನು ನೋಡಿದ ಸುಮಲತಾ ಅವರು ಯಶ್​ಗೆ ಪೋನ್​ ಮಾಡಿ ‘ಸ್ವರ್ಗದಿಂದ ನಿನ್ನ ಮಗಳಿಗೆ ತೊಟ್ಟಿಲು ಬಂದಿದೆ. ನಿನ್ನ ಮಗಳು ಅದೃಷ್ಟ ಮಾಡಿದ್ದಾಳೆ’ ಎಂದು ತಿಳಿಸಿದ್ದಾರೆ. ಈ ಕುರಿತು ಅಂಬರೀಷ್​ ಅವರ ಆಪ್ತ ಶ್ರೀನಿವಾಸ್​ ಅವರು ದಿಗ್ವಿಜಯ ನ್ಯೂಸ್​ಗೆ ಮಾಹಿತಿ ನೀಡಿದ್ದಾರೆ.

ಕಲಘಟಗಿಯಲ್ಲಿ ಸಿದ್ಧವಾಗುತ್ತಿದೆ ತೊಟ್ಟಿಲು

ಯಶ್​-ರಾಧಿಕಾ ಮಗುವಿಗೆ ತೊಟ್ಟಿಲು ಕೊಡುಗೆ ನೀಡಲು ಅಂಬರೀಷ್​ ಬಯಸಿದ್ದರು. ಬೆಳಗಾವಿ ಸಂಪಗಾವಿಯ ಗೆಳೆಯ ನಾರಾಯಣ ಎಂಬುವವರನ್ನು ಸಂಪರ್ಕಿಸಿ ಈ ಕುರಿತು ತಿಳಿಸಿದ್ದರು. ನಾರಾಯಣ ಅವರು ಧಾರವಾಡ ಜಿಲ್ಲೆಯ ಕಲಘಟಗಿಯ ಶ್ರೀಧರ ಸಾವಕಾರ ಅವರನ್ನು ಸಂಪರ್ಕಿಸಿ ತೊಟ್ಟಿಲು ಮಾಡುವಂತೆ ತಿಳಿಸಿದ್ದರು.

ಸಾಗವಾನಿ ಕಟ್ಟಿಗೆಯಿಂದ ತೊಟ್ಟಿಲನ್ನು ಸಿದ್ಧಪಡಿಸಲಾಗುತ್ತಿದ್ದು, ಅರಗಿನಿಂದ ತಯಾರಿಸಿದ ಬಣ್ಣ ಬಳಸಿ ಕೃಷ್ಣ ಜನ್ಮಾವತಾರ ಸೇರಿದಂತೆ ವಿವಿಧ ಚಿತ್ರಗಳನ್ನು ತೊಟ್ಟಿಲ ಮೇಲೆ ಬಿಡಿಸಲಾಗಿದೆ. ಈ ತೊಟ್ಟಿಲು ನೂರು ವರ್ಷ ಕಳೆದರೂ ಅಂದಗೆಡುವುದಿಲ್ಲ. ಇದು 80 ಸಾವಿರದಿಂದ 1 ಲಕ್ಷ ರೂ.ವರೆಗೆ ಮೌಲ್ಯ ಹೊಂದಿದೆ. ಇನ್ನು ಹದಿನೈದು ದಿನಗಳಲ್ಲಿ ತೊಟ್ಟಿಲು ಸಿದ್ಧಗೊಳ್ಳಲಿದೆ ಎಂದು ಶ್ರೀಧರ ಸಾವಕಾರ ಅವರು ವಿಜಯವಾಣಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top