ಅಂಬರೀಷ್‌ ದರ್ಶನ ಮಾಡಿ ಬಂದು ನೇಣಿಗೆ ಶರಣಾದ ಅಭಿಮಾನಿ!

ಮಂಡ್ಯ: ನಿನ್ನೆಯಷ್ಟೇ ಅಂಬಿ ನಿಧನದಿಂದ ನೊಂದು ರೈಲಿಗೆ ತಲೆಕೊಟ್ಟು ಅಂಬರೀಷ್‌ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಇಂದು ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪಾರ್ಥಿವ ಶರೀರದ ದರ್ಶನ ಮಾಡಿ ಬಂದು ಸುರೇಂದ್ರ.ಜಿ.ಎಸ್(46) ಎಂಬಾತ ನೇಣಿಗೆ ಕೊರಳೊಡ್ಡಿದ್ದಾನೆ.

ನಿನ್ನೆ ರಾತ್ರಿ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬಿ ದರ್ಶನ ಪಡೆದಿದ್ದ ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಸುರೇಂದ್ರ. ಮದ್ದೂರಿನಲ್ಲಿ ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಅಂಬಿ ಮೇಲಿನ ಅಭಿಮಾನದಿಂದ ಹಲವು ವರ್ಷಗಳ ಹಿಂದೆಯೇ ತನ್ನ ಕೈ ಮೇಲೆ ಅಂಬಿ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದ. ಆದರೆ, ಇಂದು ಅಂಬಿ ಅಗಲಿಕೆ ಸಹಿಸಲಾಗದೆ ನೇಣಿಗೆ ಶರಣಾಗಿದ್ದಾನೆ.

ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. (ದಿಗ್ವಿಜಯ ನ್ಯೂಸ್)

ಹುಚ್ಚು ಅಭಿಮಾನಕ್ಕೆ ಬಲಿಯಾಗಿ ಕುಟುಂಬವನ್ನು ಬೀದಿಗೆ ತಳ್ಳಬೇಡಿ: ಎಚ್‌.ಡಿ. ಕುಮಾರಸ್ವಾಮಿ