More

    ಅಮೆಜಾನ್​ನಿಂದ 10 ಲಕ್ಷ ಉದ್ಯೋಗ ಸೃಷ್ಟಿ; ಸಣ್ಣ ಕೈಗಾರಿಕೆಗಳಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ, ದೇಶಿ ಉತ್ಪನ್ನಗಳ ರಫ್ತಿಗೆ ಸಿದ್ಧತೆ

    ಬೆಂಗಳೂರು:  ಅಮೆಜಾನ್ ಸಂಸ್ಥೆ 2025ರ ವೇಳೆಗೆ 10 ಲಕ್ಷ ಉದ್ಯೋಗ ಸೃಷ್ಟಿಸುವ ಯೋಜನೆ ಹೊಂದಿರುವುದಾಗಿ ಅಮೆಜಾನ್ ಕಂಪನಿ ಸಂಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ತಿಳಿಸಿದ್ದಾರೆ.

    17 ಲಕ್ಷಕ್ಕೆ ಹೆಚ್ಚಿಸುವ ಗುರಿ: ವಿಶ್ವದಲ್ಲಿ ಭಾರತ ಹೂಡಿಕೆಗೆ ಅತಿ ಆಕರ್ಷಕ ತಾಣವಾಗಿದ್ದು, ಇಲ್ಲಿನ ಜನರಿಗೆ ಉದ್ಯೋಗ ನೀಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. 2013ರಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆಜಾನ್ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್​ಗಳಲ್ಲಿ 7 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿದೆ. ಇನ್ಮುಂದೆ ಮಾಹಿತಿ ಮತ್ತು ತಂತ್ರಜ್ಞಾನ, ಕೌಶಲಾಭಿವೃದ್ಧಿ, ಕಂಟೆಂಟ್ ಸೃಷ್ಟಿ, ಚಿಲ್ಲರೆ ವ್ಯಾಪಾರ, ಲಾಜಿಸ್ಟಿಕ್ಸ್ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆ ಮೂಲಕ 2025ರ ವೇಳೆಗೆ ಅಮೆಜಾನ್ ಉದ್ಯೋಗಿಗಳ ಪ್ರಮಾಣ 17 ಲಕ್ಷಕ್ಕಿಂತ ಹೆಚ್ಚಾಗುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಎಂಎಸ್​ಎಂಇಗೆ ಅಗತ್ಯ ಬೆಂಬಲ: ಭಾರತದಲ್ಲಿ ಈಗಾಗಲೆ ಹಲವು ವಸ್ತುಗಳನ್ನು ಸಣ್ಣ ಮತ್ತು ಗುಡಿ ಕೈಗಾರಿಕೆಗಳಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. 10 ಲಕ್ಷಕ್ಕೂ ಹೆಚ್ಚು ಅತಿಸಣ್ಣ, ಸಣ್ಣ ಮತ್ತು ಮಧ್ಯಮಗಾತ್ರದ ಉದ್ಯಮಗಳನ್ನು

    (ಎಂಎಸ್​ಎಂಇ) ಆನ್​ಲೈನ್​ಗೆ ತರಲು 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗುವುದು. ಈ ಮೂಲಕ 2025ರ ವೇಳೆಗೆ 10 ಬಿಲಿಯನ್ ಡಾಲರ್ ಮೊತ್ತದ ದೇಶಿ ವಸ್ತುಗಳನ್ನು ರಪ್ತು ಮಾಡುವ ಮೂಲಕ ಭಾರತದ ಆರ್ಥಿಕ ವೈವಿಧ್ಯತೆಗೆ ಬೆಂಬಲ ನೀಡುವುದಾಗಿ ಜೆಫ್ ಬೆಜೋಸ್ ತಿಳಿಸಿದ್ದಾರೆ.

    ಹೂಡಿಕೆಯ ಹೊಸ ಕ್ಷೇತ್ರಗಳು

    ಭಾರತದಲ್ಲಿ ಅಮೆಜಾನ್ ಕಂಪನಿ ಹೊಸ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಸಿದ್ಧವಾಗಿದೆ. ತಂತ್ರಾಂಶಾಭಿವೃದ್ಧಿ ಇಂಜಿನಿಯರಿಂಗ್, ಕ್ಲೌಡ್ ಕಂಪ್ಯೂಟಿಂಗ್, ಕಂಟೆಂಟ್ ಸೃಷ್ಟಿ ಮತ್ತು ಗ್ರಾಹಕ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಿದೆ. ಇದಕ್ಕಾಗಿ ಪ್ರತಿಭಾನ್ವಿತರನ್ನು ನೇಮಕ ಮಾಡಿಕೊಳ್ಳಲಾಗುವುದು. ಅಮೆರಿಕ ಹೊರತುಪಡಿಸಿ ಮೊದಲ ಪೂರ್ಣಸ್ವಾಮ್ಯದ ಆವರಣ ಮತ್ತು ಉದ್ಯೋಗಿಗಳನ್ನು ಭಾರತದಲ್ಲಿ ಹೊಂದಿದೆ. ಹೈದರಾಬಾದ್​ನಲ್ಲಿ 9.5 ಎಕರೆ ಸ್ಥಳದಲ್ಲಿ ಅತಿದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡಿದೆ. ಇಲ್ಲಿ 15 ಸಾವಿರಕ್ಕಿಂತ ಹೆಚ್ಚು ಉದ್ಯೋಗಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ.

    ರ‍್ಯಾಂಡ್ ಸ್ಟಾಂಡ್ ಎಂಪ್ಲಾಯರ್ ಬ್ರ್ಯಾಂಡ್​ ರಿಸರ್ಚ್ 2019ನಲ್ಲಿ ಅಮೆಜಾನ್ ಇಂಡಿಯಾ ಕೆಲಸ ಮಾಡಲು ಅತ್ಯಂಕ ಆಕರ್ಷಕ ಸ್ಥಳವಾಗಿದೆ. ಹಣಕಾಸು ಆರೋಗ್ಯ, ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯಲ್ಲಿ ಅಮೆಜಾನ್ ಉತ್ತಮ ಅಂಕ ಗಳಿಸಿದೆ. 2019ರ ಲಿಂಕ್ಡಿನ್ ವರದಿ ಪ್ರಕಾರ ಭಾರತದಲ್ಲಿ ಕೆಲಸ ಮಾಡುವ ಸಂಸ್ಥೆಗಳ ಪಟ್ಟಿಯಲ್ಲಿ ಅಮೆಜಾನ್ ಕಂಪನಿ 2ನೇ ಸ್ಥಾನ ಪಡೆದಿದೆ.

    | ಜೆಫ್ ಬೆಜೋಸ್ ಅಮೆಜಾನ್ ಕಂಪನಿ ಸಂಸ್ಥಾಪಕ ಮತ್ತು ಸಿಇಒ  

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts