ಅಮರನಾಥ ಯಾತ್ರೆ: ಭೂಕುಸಿತದಿಂದ ಮೂವರು ಮೃತ, ಸತ್ತವರ ಸಂಖ್ಯೆ 10ಕ್ಕೆ ಏರಿಕೆ

ನವದೆಹಲಿ: ಅಮರನಾಥ ಯಾತ್ರೆಯಲ್ಲಿರುವ ಯಾತ್ರಾರ್ಥಿಗಳಲ್ಲಿ ಮೂವರು ಭೂಕುಸಿತದಿಂದ ಮೃತಪಟ್ಟಿದ್ದು, ಮತ್ತೊಬ್ಬರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಒಟ್ಟಾರೆ ಮೃತಪಟ್ಟಿರುವವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ತೀರ್ಥಯಾತ್ರೆಯ ಮಾರ್ಗದ ಬಾಲಟಾಲ್‌ ಮಾರ್ಗದಲ್ಲಿ ಉಂಟಾಗಿದ್ದ ಭೂಕುಸಿತದಿಂದ ಮೃತಪಟ್ಟಿದ್ದ ದೆಹಲಿ ಮೂಲದವರಾದ ಶೈಲೇಂದ್ರ(30), ಜ್ಯೋತಿ ಶರ್ಮಾ(35) ಮತ್ತು ಬಿಹಾರ ಮೂಲದ ಅಶೋಕ್‌ ಮೆಹ್ತಾ(51) ಎಂಬವರ ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಭೂಕುಸಿತದಿಂದಾಗಿ ಇಬ್ಬರು ಯಾತ್ರಾರ್ಥಿಗಳು ಸೇರಿ ಮೂವರು ಕುದುರೆ ಸವಾರರಿಗೆ ಗಾಯಗಳಾಗಿವೆ. ರೈಲ್‌ಪಾತ್ರಿ ಮತ್ತು ಬ್ರರಿಮಾರ್ಗ್‌ನಲ್ಲಿ ಅಧಿಕ ಮಳೆಯಾಗಿದ್ದರಿಂದ ಪ್ರತಿ ವರ್ಷ ಯಾತ್ರೆ ಕೈಗೊಳ್ಳುವ ಬಾಲ್ತಾಳ್‌ ಮಾರ್ಗದಲ್ಲಿ ಭೂಕುಸಿತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)