VIDEO| ಛಾನ್ಸೇ ಇಲ್ಲ ನಾನ್ ಹೀರೋನೇ ಎಂದು ‘ಅಮರ್​’ ಟೀಸರ್​ ಮೂಲಕ ಎಂಟ್ರಿ ಕೊಟ್ಟ ಜ್ಯೂನಿಯರ್​ ಅಂಬಿ

ಬೆಂಗಳೂರು: ದಿವಂಗತ ನಟ ರೆಬಲ್​ಸ್ಟಾರ್ ಅಂಬರೀಶ್ ಅವರ ಪುತ್ರ ಜೂನಿಯರ್ ರೆಬಲ್​ಸ್ಟಾರ್ ಅಭಿನಯದ ಬಹುನಿರೀಕ್ಷಿತ ‘ಅಮರ್’ ಚಿತ್ರದ ಟೀಸರ್ ಗುರುವಾರ ಬಿಡುಗಡೆ ಆಗಿದೆ.

ಪ್ರೇಮಿಗಳ ದಿನದಂದು ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದ್ದು, ನಾಯಕ ನಟನಾಗಿ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿರುವ ಅಭಿಷೇಕ್​ ಅಪ್ಪನಂತೆಯೇ ರೆಬಲ್ ಆಗಿ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ.

ಟೀಸರ್​ ಸಖತ್ ರಾಯಲ್ ಆಗಿ ಮೂಡಿಬಂದಿದೆ. ಅಭಿಷೇಕ್ ಅಂಬರೀಶ್ ಬೈಕ್ ಸ್ಟಂಟ್, ಡೈಲಾಗ್ ಡೆಲವರಿ ಎಲ್ಲವೂ ಖಡಕ್​ ಆಗಿದ್ದು, ಥೇಟ್ ಅಂಬಿಯನ್ನು ನೆನಪು ಮಾಡುತ್ತಿದ್ದಾರೆ. ಅದರಲ್ಲೂ ಅಪ್ಪನ ಫೇಮಸ್ ರಿಯಲ್ ಡೈಲಾಗ್ ಛಾನ್ಸೇ ಇಲ್ಲ , ನಾನ್ ಹೀರೋನೇ ಡೈಲಾಗ್ ಅಲ್ಟಿಮೇಟ್ ಆಗಿದ್ದು, ಇದನ್ನ ನೋಡಿ ಅಂಬಿ ಫ್ಯಾನ್ಸ್ ತಮ್ಮ ಕಲಿಯುಗನ ಕರ್ಣನನ್ನೇ ಮತ್ತೆ ನೋಡಿದಷ್ಟು ಖುಷಿ ಪಡುತ್ತಿದ್ದಾರೆ.

ಟೀಸರ್​ ಬಿಡುಗಡೆಯಾದ ಅರ್ಧ ಗಂಟೆಯಲ್ಲೇ 69 ಸಾವಿರ ಜನ ವೀಕ್ಷಣೆ ಮಾಡಿದ್ದು, ಯೂಟ್ಯೂಬ್​ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. (ದಿಗ್ವಿಜಯ ನ್ಯೂಸ್​)