VIDEO| ‘ಆಡೈ’ ಚಿತ್ರದ ಟೀಸರ್​ನಲ್ಲಿ ಅಮಲೇರಿಸಿದ ಪೌಲ್​: ಅಮಲಾರ ನಗ್ನ ದೃಶ್ಯಕ್ಕೆ ವ್ಯಕ್ತವಾಯ್ತು ಮಿಶ್ರಪ್ರತಿಕ್ರಿಯೆ

ಚೆನ್ನೈ: ಸ್ಯಾಂಡಲ್​ವುಡ್​ನಲ್ಲಿ ನಟ ಕಿಚ್ಚ ಸುದೀಪ್​ ಜತೆ ‘ಹೆಬ್ಬುಲಿ’ ಚಿತ್ರದಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ಕಾಲಿವುಡ್​ ನಟಿ ಅಮಲಾ ಪೌಲ್, ತಮ್ಮ ಮುಂದಿನ ‘ಆಡೈ’​ ಚಿತ್ರದಲ್ಲಿ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ನಿನ್ನೆ(ಮಂಗಳವಾರ) ಬಿಡುಗಡೆಯಾದ ಟೀಸರ್​ ನೋಡಿ ಶಾಕ್​ಗೆ ಒಳಗಾಗಿದ್ದಾರೆ.

ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಆಡೈ ಚಿತ್ರದ ಟೀಸರ್​ ಧನಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುವ ಮೂಲ ಯೂಟ್ಯೂಬ್​ನಲ್ಲಿ ಸಂಚಲನವನ್ನು ಉಂಟುಮಾಡಿದೆ. ಈಗಾಗಲೇ 26 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿಕೊಂಡಿರುವ ಟೀಸರ್​ ದಾಖಲೆಯತ್ತ ಮುನ್ನುಗ್ಗುತ್ತಿದೆ.

”ನಿಮಗೆ ಏನು ಮಾಡಲಾಗಿದೆಯೋ ಅದನ್ನು ನೀವು ಮಾಡುತ್ತಿರುವುದೇ ಸ್ವಾತಂತ್ರ್ಯ” ಎಂಬ ತತ್ವಜ್ಞಾನಿ ಜೀನ್​ ಪೌಲ್​ ಸರ್ತ್ರೆ ಅವರ ಕೋಟ್​ ಮೂಲಕ ಶುರುವಾಗುವ ಆದೈ ಚಿತ್ರದ ಟೀಸರ್​ ಗಮನಿಸಿದವರು, ಹುಡುಗಿಯೊಬ್ಬಳು ಕಸಿದುಕೊಂಡಿರುವ ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕತೆಯ ಸುಳಿವು ಟೀಸರ್​ನಲ್ಲಿದೆ ಎಂದು ಹೇಳುತ್ತಿದ್ದಾರೆ.

ಟೀಸರ್​ನಲ್ಲಿ ನಟಿ ಅಮಲಾ ಪೌಲ್​ ನಗ್ನ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು, ಅದನ್ನು ನೋಡಿದವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಅಮಲಾ ಅವರ ನಟನೆಯನ್ನು ಕೊಂಡಾಡಿದ್ದರೆ, ಇನ್ನು ಕೆಲವರು ನಗ್ನ ದೃಶ್ಯದಲ್ಲಿ ಕಾಣಿಸಿಕೊಂಡಿರುವುದಕ್ಕೆ ಗರಂ ಆಗಿದ್ದಾರೆ.

ಟೀಸರ್​ ವೀಕ್ಷಣೆ ಮಾಡಿರುವ ಅನೇಕ ನಟ-ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ಸಮಂತಾ, ಬಾಲಿವುಡ್​ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ಹಾಗೂ ನಟ ವಿಶಾಲ್ ಮುಂತಾದವರು ಟ್ವೀಟ್​ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಆಡೈ ಚಿತ್ರಕ್ಕೆ ರತ್ನಕುಮಾರ್​ ಎಂಬುವರು ನಿರ್ದೇಶನ ಮಾಡಿದ್ದು, ವಿ ಸ್ಟುಡಿಯೋಸ್​, ಊರ್ಕಾ ಮತ್ತು ವಿಜಯ್​ ಕಾರ್ತಿಕ್​ ಬಂಡವಾಳ ಹೂಡಿದ್ದಾರೆ. ಇದೊಂದು ಪ್ರಯೋಗಾತ್ಮಕ ಚಿತ್ರ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *