ಚಾಮರಾಜನಗರ: ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಯುವ ಬ್ರಿಗೇಡ್ ವತಿಯಿಂದ ಜ.10ರಿಂದ 12ರವೆಗೆ ಹಮ್ಮಿಕೊಂಡಿರುವ ವೀರ್ ಭಾರತ್ ಗುರಿಯತ್ತ ನಡೆ ಪಾದಯಾತ್ರೆ ಶುಕ್ರವಾರ ತಾಲೂಕಿನ ಅಮಚವಾಡಿಯಿಂದ ಆರಂಭಗೊಂಡಿದೆ.
ಗ್ರಾಮದ ಶ್ರೀಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ರಾಷ್ಟ್ರೀಯ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಚಾಲನೆ ನೀಡಿದರು.
ವೀರ್ ಭಾರತ್ ನಡೆಯು ಚನ್ನಪ್ಪನಪುರ, ಹೊಸೂರು, ಕೋಡಿಉಗನೆ, ಬೇವಿತಾಳಪುರ, ಬಸವಪುರ, ಅಂಕ ಶೆಟ್ಟಿಪುರ, ವೆಂಕಟಯ್ಯನ ಛತ್ರ, ಬಂಡಿಗೆರೆ, ಚಿಕ್ಕ ಮೋಳೆ, ದೊಡ್ಡ ಮೋಳ ಮಾರ್ಗವಾಗಿ ಸಾಗಿ ರಾತ್ರಿ ಹರದನ ಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಕ್ತಾಯಗೊಳ್ಳಲಿದೆ.ಜ.11 ಮತ್ತು 12ರಂದು ಪಾದಯಾತ್ರೆ ಮುಂದುವರೆಯಲಿದೆ.