ಖೇಲೋ ಇಂಡಿಯಾದಲ್ಲಿ ಆಳ್ವಾಸ್‌ಗೆ 17 ಪದಕ

ಮೂಡುಬಿದಿರೆ: ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ 6 ಚಿನ್ನ, 8 ಬೆಳ್ಳಿ ಹಾಗೂ 3 ಕಂಚಿನ ಪದಕಗಳೊಂದಿಗೆ ಒಟ್ಟು 17 ಪದಕಗಳನ್ನು ಗಳಿಸಿಕೊಂಡಿದ್ದಾರೆ.

ಬಾಲಕಿಯರ ಅಥ್ಲೆಟಿಕ್ಸ್ ವಿಭಾಗದ ಹೈಜಂಪ್‌ನಲ್ಲಿ ಸುಪ್ರಿಯಾ ಚಿನ್ನ, ಅಭಿನಯ ಶೆಟ್ಟಿ ಬೆಳ್ಳಿ, ಶಾಟ್‌ಫುಟ್‌ನಲ್ಲಿ ಅನಾಮಿಕದಾಸ್ ಚಿನ್ನ, ಶುಭಾ ವಿ. ಅವರಿಗೆ 400, 200 ಮೀಟರ್‌ನಲ್ಲಿ ಚಿನ್ನ ಮತ್ತು ಬೆಳ್ಳಿ, ವೇಟ್ ಲಿಫ್ಟಿಂಗ್ 71 ಕೆ.ಜಿ. ವಿಭಾಗದಲ್ಲಿ ಲಾವಣ್ಯ ಬೆಳ್ಳಿ, 87 ಕೆ.ಜಿ. ವಿಭಾಗದಲ್ಲಿ ಭವಿಷ್ಯ ಬೆಳ್ಳಿ, ಕುಸ್ತಿ ವಿಭಾಗದಲ್ಲಿ ಲಕ್ಷ್ಮಿ ರಡೇಕರ್ ಕಂಚಿನ ಪದಕ ಗೆದ್ದಿದ್ದಾರೆ.

ಬಾಲಕರ ಅಥ್ಲೆಟಿಕ್ಸ್ ವಿಭಾಗದಲ್ಲಿ ಮನು ಡಿ.ಪಿ. ಜವಲಿನ್‌ನಲ್ಲಿ ಚಿನ್ನ, ಅಜೀತ್ ಕುಮಾರ್ 5000 ಮೀ. ಓಟದಲ್ಲಿ ಚಿನ್ನ, ದಿನೇಶ್ 10,000 ಮೀ. ಓಟದಲ್ಲಿ ಚಿನ್ನ, ಪ್ರಜ್ವಲ್ ಮಂದಣ್ಣ 100 ಮೀ. ಓಟದಲ್ಲಿ ಬೆಳ್ಳಿ, ರಿನ್ಸ್ ಜೋಸೆಫ್ 400 ಮೀ. ಓಟದಲ್ಲಿ ಬೆಳ್ಳಿ, ಸೌರವ್ ತನ್ವರ್ ಶಾಟ್‌ಫುಟ್‌ನಲ್ಲಿ ಬೆಳ್ಳಿ, ಸತ್ಯಂ ಚೌಧರಿ ಶಾಟ್‌ಫುಟ್‌ನಲ್ಲಿ ಬೆಳ್ಳಿ, ಯಮನೂರಪ್ಪ ಹ್ಯಾಮರ್ ತ್ರೋ ವಿಭಾಗದಲ್ಲಿ ಕಂಚು, ವೇಟ್‌ಲಿಫ್ಟಿಂಗ್ 109 ಕೆ.ಜಿ. ವಿಭಾಗದಲ್ಲಿ ನಿಶಾಂತ್ ಕಂಚಿನ ಪದಕ ಗಳಿಸಿ ಸಾಧನೆ ಮಾಡಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.