ವಾಟೆಹೊಳೆ ಜಲಾಶಯದಿಂದ ನೀರು ಹರಿಸಿ

ಆಲೂರು: ಪಟ್ಟಣದ 11 ವಾರ್ಡ್‌ಗಳಿಗೆ ಕುಡಿಯುವ ನೀರನ್ನು ಒದಗಿಸುವ ಯಗಚಿ ನದಿಯ ಒಳಹರಿವು ಸಂಪೂರ್ಣವಾಗಿ ಕುಸಿದಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ವಾಟೆಹೊಳೆ ಜಲಾಶಯದಿಂದ ನೀರು ಹರಿಸಬೇಕು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮನವಿ ಮಾಡಿಕೊಂಡರು.

ತಾಲೂಕಿನ ಹುಣಸುವಳ್ಳಿ ಬಳಿ ಹಾದುಹೋಗಿರುವ ಯಗಚಿ ನದಿಯ ಒಳಹರಿವಿನ ಸ್ಥಿತಿಯನ್ನು ವೀಕ್ಷಿಸಿ ಮಾತನಾಡಿದರು.

ಯಗಚಿ ನದಿಯಲ್ಲಿ ನೀರು ಬತ್ತಿಹೋಗಿದ್ದು, ಮೋಟಾರ್‌ಗೆ ನೀರು ಎಟುಕದ ಕಾರಣ ಆಲೂರು ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗದೆ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಾಟೆಹೊಳೆ ಜಲಾಶಯದಿಂದ ಸ್ವಲ್ಪ ಮಟ್ಟಿಗೆ ನೀರನ್ನು ಬಿಟ್ಟರೆ ಜನತೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್, ಸದಸ್ಯರಾದ ಡಿ.ಎಸ್.ಜಯಣ್ಣ, ಮುಖ್ಯಾಧಿಕಾರಿ ಕಲಾವತಿ, ಇಂಜಿನಿಯರ್ ಚನ್ನಕೇಶವ, ಆರೋಗ್ಯಾಧಿಕಾರಿ ಮಂಜುನಾಥ್, ಪಪಂ ಮಾಜಿ ಅಧ್ಯಕ್ಷ ತೌಸಿಫ್ ಅಹಮದ್, ಮುಖಂಡರಾದ ಮಲ್ಲಿಕಾರ್ಜುನ ಹಾಜರಿದ್ದರು.