25.9 C
Bengaluru
Wednesday, January 22, 2020

ಹುಣಸೂರು ಉಪಕದನ ಬಹುತೇಕ ಶಾಂತಿಯುತ

Latest News

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಕರೋನಾ ವೈರಸ್​ ಪತ್ತೆ ಮಾಡಲು ಕೇರಳದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಕೇಂದ್ರಗಳ ಸ್ಥಾಪನೆ

ತಿರುವನಂತಪುರ: ಕರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಲಹೆ ಮೇರೆಗೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ವೈರಸ್​ ಪತ್ತೆ ಮಾಡುವ ಸ್ಕ್ರೀನಿಂಗ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ...

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ.

2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.77.24ರಷ್ಟು ಮತದಾನವಾಗಿತ್ತು. ಪ್ರತಿ ಚುನಾವಣೆಯಲ್ಲೂ ಇಲ್ಲಿ ಉತ್ತಮ ಮತದಾನವಾ ಗಿದ್ದು, ಈ ಬಾರಿಯೂ ಅದು ಪುನರಾವರ್ತನೆಯಾಗಿದೆ.

ಸಣ್ಣಪುಟ್ಟ ಗೊಂದಲ ಹೊರತುಪಡಿಸಿ ಮತದಾನ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ. ಎಲ್ಲೆಡೆ ಸುಸೂತ್ರವಾಗಿ ಮತ ಚಲಾವಣೆಯಾಗಿದೆ. ಆರಂಭದಲ್ಲಿ ನೀರಸವಾಗಿ ಸಾಗಿದ ಮತದಾನ ಮಧ್ಯಾಹ್ನದ ಬಳಿಕ ಚುರುಕು ಪಡೆದುಕೊಂಡು, ಸಂಜೆ ಹೊತ್ತಿಗೆ ವೇಗದಿಂದ ನಡೆಯಿತು.

ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಮತ್ತು ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ನಡುವೆ ನೇರ ಹಣಾಹಣಿ ಕಂಡು ಬಂದಿದ್ದು, ಮತದಾರರು ಒಟ್ಟು 10 ಅಭ್ಯರ್ಥಿಗಳ ಹಣೆ ಬರಹವನ್ನು ಮತಯಂತ್ರದಲ್ಲಿ ದಾಖಲಿಸಿದ್ದಾರೆ. ಡಿ.9ರಂದು ಫಲಿತಾಂಶ ಹೊರ ಬೀಳಲಿದೆ.

ನಿಗದಿಯಂತೆ ಬೆಳಗ್ಗೆ 7ಗಂಟೆಗೆ ಮತದಾನ ಶುರುವಾಯಿತು. ಆರಂಭದಲ್ಲಿ ಬಹಳ ಮಂದಗತಿಯಲ್ಲಿ ಸಾಗಿತು. 9ಗಂಟೆ ಹೊತ್ತಿಗೆ ಶೇ.6.18ರಷ್ಟು ಜನರು ಮಾತ್ರ ತಮ್ಮ ಹಕ್ಕು ಚಲಾವಣೆ ಮಾಡಿದರು. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ. ಇದರಿಂದ ಬೆಳಗ್ಗೆ 11ರ ಹೊತ್ತಿಗೆ ಶೇ.19.12ರಷ್ಟು ಮತದಾನ ದಾಖಲಾಯಿತು. ಸೂರ್ಯ ನೆತ್ತಿ ಮೇಲೆ ಬರುತ್ತಿದ್ದಂತೆ ನಿಧಾನಗತಿಯಲ್ಲಿ ಸಾಗುತ್ತಿದ್ದ ಮತದಾನ ಬಿರುಸು ಪಡೆಯಿತು. ಮಧ್ಯಾಹ್ನ 1ಗಂಟೆಗೆ ಶೇ.38.20ರಷ್ಟು ಜನರು ತಮ್ಮ ಮತವನ್ನು ಚಲಾಯಿಸಿದರು.

ತಂಡೋಪತಂಡವಾಗಿ ಜನರು ಮತಗಟ್ಟೆಗೆ ಆಗಮಿಸಲು ಶುರು ಮಾಡಿದರು. ಬೆಳಗಿನ ಕೆಲಸವನ್ನು ಮುಗಿಸಿಕೊಂಡು ಜನರು ಮತಗಟ್ಟೆಯತ್ತ ಹೆಜ್ಜೆ ಹಾಕಿದರು. ಸರದಿ ಸಾಲಿನಲ್ಲಿ ನಿಂತು ಮತ ಹಾಕಲು ಉತ್ಸಾಹ ತೋರಿದರು. ಇದರಿಂದಾಗಿ ಮಧ್ಯಾಹ್ನ 3ಗಂಟೆ ವೇಳೆಗೆ ಶೇ.57ರಷ್ಟು ಮತದಾನವಾಯಿತು. ಹೀಗೆ ಬಹಳ ಚುರುಕಿನಿಂದ ನಡೆದಿದ್ದರಿಂದ ಸಂಜೆ 5ಗಂಟೆಗೆ ಶೇ.74.47ರಷ್ಟು ಮತದಾನ ದಾಖಲಾಯಿತು.

ಬಿಳಿಕೆರೆ, ಹನಗೋಡು, ಬೋಳನಹಳ್ಳಿ, ಹೊಸರಾಮನಹಳ್ಳಿ, ಹುಣಸೂರು ನಗರ ಪ್ರದೇಶದಲ್ಲಿ ಮತದಾನ ಬಿರುಸಿನಿಂದ ಕೂಡಿತ್ತು. ಕಾಡಂಚಿನ ಗ್ರಾಮಗಳಲ್ಲಿ ಮತದಾನ ಮಂದಗತಿಯಲ್ಲಿ ಸಾಗಿತ್ತು. ನಾಗರಹೊಳೆ ಅರಣ್ಯ ವ್ಯಾಪ್ತಿಯ ಗಿರಿಜನರು ಇರುವ ನಾಗಪುರ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಬಹಳ ಸಪ್ಪೆಯಾಗಿತ್ತು. ಇಲ್ಲಿ ಗಜಿಬಿಜಿ ಇರಲಿಲ್ಲ. ಮತ ಹಾಕಲು ಒಬ್ಬರು, ಇಬ್ಬರು ಮಾತ್ರ ಇದ್ದರು. ಯುವಕರು ಬೈಕ್‌ನಲ್ಲಿ ಹಿರಿಯರನ್ನು ಕರೆತಂದರು. ಇಲ್ಲಿ ಬೆಳಗ್ಗೆ 11ಗಂಟೆಗೆ 891 ಮತಗಳ ಪೈಕಿ ಕೇವಲ 75 ಜನರು ಮಾತ್ರ ಮತ ಹಾಕಿದ್ದರು.

‘ಬೆಳಗ್ಗೆ ಗಿರಿಜನರು ಕೆಲಸಕ್ಕೆ ಹೋಗಿರುತ್ತಾರೆ. ಮಧ್ಯಾಹ್ನ ಬಳಿಕ ಬಂದು ಮತಚಲಾಯಿಸುತ್ತಾರೆ. ಇದು ಪ್ರತಿ ಚುನಾವಣೆಯಲ್ಲೂ ಹೀಗೆ ಆಗುತ್ತದೆ. ನಾವುಗಳೆಲ್ಲ 2 ಕಿ.ಮೀ.ದೂರದಿಂದ ಇಲ್ಲಿಗೆ ಬರಬೇಕು. ಆದರೆ, ನಮ್ಮ ಹಕ್ಕು ಚಲಾವಣೆಯಿಂದ ದೂರ ಸರಿಯುವುದಿಲ್ಲ’ ಎಂದು ಆದಿವಾಸಿ ಸಮುದಾಯದ 63 ವರ್ಷದ ಸಣ್ಣಪ್ಪ ಹೇಳಿದರು.
ಹೋಬಳಿ ಕೇಂದ್ರ ಹನಗೋಡು ಗ್ರಾಮದಲ್ಲೂ ಮತದಾನಕ್ಕೆ ಉತ್ತಮ ಪ್ರಕ್ರಿಯೆ ದೊರೆಯಿತು. 85 ವರ್ಷದ ಅನಂತರಾಜ್ ವ್ಹೀಲ್ ಚೇರ್ ಮೇಲೆ ಆಗಮಿಸಿ ಮತದಾನ ಮಾಡಿ ಗಮನ ಸೆಳೆದರು.

ಮತದಾನದ ಅನುಕೂಲಕ್ಕಾಗಿ ಕ್ಷೇತ್ಯಾದ್ಯಂತ 274 ಮತಗಟ್ಟೆ ತೆರೆಯಲಾಗಿತ್ತು. ಅಂಗವಿಕಲ ಹಾಗೂ ಹಿರಿಯ ಮತದಾರರನ್ನು ಮನೆಯಿಂದ ಕರೆತಂದು ಮತದಾನ ಮಾಡಿದ ಬಳಿಕ ಮರಳಿ ಮನೆಗೆ ಬಿಡಲು ಜಿಲ್ಲಾಡಳಿತದಿಂದಲೇ ವಾಹನ ವ್ಯವಸ್ಥೆ ಮಾಡಲಾಗಿತ್ತು.

ಅಂತೆಯೆ, ಈ ಮತದಾರರ ಅನುಕೂಲಕ್ಕಾಗಿ ಪ್ರತಿ ಮತಗಟ್ಟೆಯಲ್ಲಿ ತಲಾ ಒಂದು ವ್ಹೀಲ್‌ಚೇರ್ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು. ಚುನಾವಣಾ ಕೆಲಸಕ್ಕೆ ಒಟ್ಟು 1316 ಸಿಬ್ಬಂದಿಯನ್ನು ನೇಮಿಸಲಾಗಿತ್ತು.

ಶಾಂತಿ, ಸುವ್ಯವಸ್ಥೆಯ ಮತದಾನಕ್ಕಾಗಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಕೇಂದ್ರ ಭದ್ರತಾ ಪಡೆಯ ನಾಲ್ಕು ಕಂಪನಿಗಳು, ಕೆಎಸ್‌ಆರ್‌ಪಿಯ 6 ತುಕಡಿ, 900 ಪೊಲೀಸ್ ಸಿಬ್ಬಂದಿ, 21 ಸೆಕ್ಟರ್ ಮೊಬೈಲ್‌ಗಳನ್ನು ನಿಯೋಜಿಸಲಾಗಿತ್ತು.

ಮತಯಂತ್ರಗಳು ಭದ್ರ:
ಮತದಾನ ಮುಗಿದ ಬಳಿಕ ಹುಣಸೂರಿನ ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನುಇರಿಸಲಾಗಿದೆ. ಇಲ್ಲಿ ಮೂರು ಸುತ್ತಿನ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...