ಸಾಮೂಹಿಕ ವಿವಾಹ ಬಡವರಿಗೆ ವರದಾನ

ಆಲಮೇಲ: ಬಡವರ ಕಷ್ಟ, ಸುಖಗಳಲ್ಲಿ ಭಾಗಿಯಾಗಿ ಅವರ ಏಳಿಗೆಗೆ ಸಹಕರಿಸುವುದೇ ನಿಜವಾದ ಧರ್ಮ ಎಂದು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಹೇಳಿದರು.

ಪಟ್ಟಣದ ಅಳ್ಳೋಳ್ಳಿ ಹಿರೇಮಠದಲ್ಲಿ ವೇ.ರುದ್ರಯ್ಯ ಸ್ವಾಮಿಗಳ ದ್ವಾದಶ ಪುಣ್ಯಾರಾಧನೆ ನಿಮಿತ್ತ ಪುರಾಣ ಮಹಾಮಂಗಲ, ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಡವರ ಸೇವೆಯೇ ಜನಾರ್ದನ ಸೇವೆ ಎನ್ನುವ ಅಳ್ಳೋಳ್ಳಿ ಹಿರೇಮಠದ ಕಾರ್ಯ ಮೆಚ್ಚುವಂತಹದ್ದು. ಇದನ್ನು ಎಲ್ಲ ಮಠ ಮಾನ್ಯಗಳು ಮಾಡಬೇಕು. ಮಠಗಳು ಹಮ್ಮಿಕೊಳ್ಳುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಬಡವರ ಪಾಲಿಗೆ ವರದಾನವಾಗಿವೆ ಎಂದರು.

ಹೊನ್ನಕಿರಣಗಿ ಚಂದ್ರಗುಂಡ ಶಿವಾಚಾರ್ಯರು, ಗೊಳಸಾರದ ಅಭಿನವ ಪುಂಡಲಿಂಗ ಮಹಾರಾಜರು, ಚಂದ್ರಶೇಖರ ಶಿವಾಚಾರ್ಯರು, ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು, ದೇವರಗುಡ್ಡದ ಒಡೆಯರಾದ ಡಾ. ಸಂದೀಪ ಪಾಟೀಲ, ಶಂಕರಾನಂದ ಮಹಾರಾಜರು, ನಿತ್ಯಾನಂದ ಶರಣರು, ಶರಣಬಸವ ಶರಣರು, ಅರ್ಜುಣಗಿ ಮಠದ ಸಂಗನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಮಠದ ಕಾರ್ಯದರ್ಶಿ ರಮೇಶ ಭಂಟನೂರ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಕುಮಾರ ಗುಂದಗಿ, ಕಸಾಪ ಅಧ್ಯಕ್ಷ ಮಹಿಬೂಬ ಮಸಳಿ, ಗುತ್ತಿಗೆದಾರ ವಿಶ್ವನಾಥ ಗುಂದಗಿ, ಪ್ರಗತಿಪರ ರೈತ ಬಾಬು ಕೋತಂಬರಿ, ಪ್ರಭು ವಾಲಿಕಾರ, ಮುಖಂಡರಾದ ಬಸವರಾಜ ಧನಶ್ರೀ, ಅಶೋಕ ಕೊಳಾರಿ, ಪಪಂ ಸದಸ್ಯರಾದ ಮಲ್ಲು ಅಚ್ಚಲೇರಿ, ಯಲ್ಲಪ್ಪ ಬುರುಡ, ಸುನೀಲ ಉಪ್ಪಿನ ಇತರರು ಇದ್ದರು. ಇಂಜಿನಿಯರ್ ಶ್ರೀಶೈಲ ಮಠಪತಿ, ಶಿವಶರಣ ಗುಂದಗಿ ನಿರೂಪಿಸಿದರು.

11 ಜೋಡಿಗಳ ವಿವಾಹ
ಪರಸ್ಪರ ಹಾರ ಬದಲಾಯಿಸಿಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟ 11 ಜೋಡಿಗಳ ಮದುವೆ ಕಾರ್ಯಕ್ರಮಕ್ಕೆ ಅಪಾರ ಜನ ಸಾಗರವೇ ಹರಿದು ಬಂದಿತ್ತು. ಇದೇ ವೇಳೆ ಕಳೆದ 15 ದಿನಗಳಿಂದ ಸಾಗಿಬಂದಿದ್ದ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಮಹಾಮಂಗಲವಾಯಿತು. ಮುದಗಲ್‌ದ ಮಹಾಂತ ಸ್ವಾಮಿಗಳು ಪುರಾಣ ಪ್ರವಚನ ನೀಡಿದರು. ಶಿವಾನಂದ ಮಂದೇವಾಲ, ಬಸವರಾಜ ಹೊನ್ನಿಗನೂರ ಸಂಗೀತ ಸಂಯೋಜನೆ ನೀಡಿದರು.

Leave a Reply

Your email address will not be published. Required fields are marked *