More

    ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಬೇಡಿ

    ಆಲಮೇಲ: ಪಾಲಕರು, ಪೋಷಕರು ಮಕ್ಕಳಿಗೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ, ಶಿಕ್ಷಣ ಮಗುವಿನ ಮೂಲಭೂತ ಹಕ್ಕು ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್.ಕೆ. ಗುಗ್ಗರಿ ಹೇಳಿದರು.
    ಪಟ್ಟಣದಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ 6 ರಿಂದ 14 ವರ್ಷ ವಯಸ್ಸಿನ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷಾ ಕಾರ್ಯಕ್ರಮದ ನೇತ್ರತ್ವ ವಹಿಸಿ ಅವರು ಮಾತನಾಡಿದರು.
    ಪಟ್ಟಣದ ಬಸ್ ನಿಲ್ದಾಣ ಎದುರಿನ ವೈಭವ ಹೋಟೆಲ್‌ಕ್ಕೆ ಭೇಟಿ ನೀಡಿ ಹೊಟೇಲ್ ಮಾಲೀಕರಿಗೆ ಕರಪತ್ರ ನೀಡಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ, ಸಾಧ್ಯವಾದರೆ ಅವರಿಗೆ ಶಿಕ್ಷಣ ಒದಗಿಸಲು ಪ್ರಯತ್ನಿಸಿ ಎಂದು ವಿನಂತಿಸಿದರು.
    ಆಲಮೇಲ ಕ್ಲಸ್ಟರ್‌ಮಟ್ಟದ ಶಿಕ್ಷಣ ಸಂಯೋಜಕ ಎಸ್.ಎಂ. ಕೂಡಗಿ ಮಾತನಾಡಿ, ಪಾಲಕ-ಪೋಷಕರು ಮತ್ತು ಶಿಕ್ಷಣ ಪ್ರೇಮಿಗಳು ಭಾರತ ಸಂವಿಧಾನದ ಕಲಂ 21(ಎ) ಯು 6 ರಿಂದ 14 ವರ್ಷದ ಮಕ್ಕಳ ಪ್ರಾಥಮಿಕ ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು. ಆದ್ದರಿಂದ ಪ್ರತಿ ಮಗುವಿಗೆ ಪ್ರಾಥಮಿಕ ಶಾಲೆ ಶಿಕ್ಷಣ ಒದಗಿಸುವುದು ಪಾಲಕರ ಕರ್ತವ್ಯವಾಗಿದೆ ಎಂದರು.
    ಶಿಕ್ಷಣ ಸಂಯೋಜಕ ಎ.ಕೆ. ಬಿರಾದಾರ, ಎಸ್.ಎಂ. ಕೂಡಗಿ, ಎಸ್.ಎಂ. ಕುಂಬಾರ, ಯುಜಿಎಸ್ ಶಾಲೆ ಮುಖ್ಯಗುರು ಅಯ್ಯೂಬ್ ಪಟ್ಟೇದ, ಎಂಪಿಎಸ್ ಶಾಲೆ ಶಿಕ್ಷಕರಾದ ಮೈನುದ್ದೀನ್ ಮುಲ್ಲಾ, ಎಸ್.ಎಂ. ತೆಲ್ಲೂರ, ಸಂದೀಪ ಹೂಗಾರ, ಪಾಲಕ ಪ್ರತಿನಿಧಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts