blank

Allu Arjun Release | ಐಕಾನ್​ ಸ್ಟಾರ್​ನನ್ನು ಅಪ್ಪಿಕೊಂಡು ಪತ್ನಿ ಸ್ನೇಹಾ ಭಾವುಕ; ವಿಡಿಯೋ ವೈರಲ್​​

blank

ಹೈದರಾಬಾದ್​: ಇಲ್ಲಿನ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್​ನ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ನಟ ಅಲ್ಲು ಅರ್ಜುನ್(Allu Arjun)​ ಜಾಮೀನು ಮಂಜೂರಾರಿ ಹಿನ್ನೆಲೆ ಶನಿವಾರ ಬಿಡುಗಡೆಗೊಂಡಿದ್ದಾರೆ.

ಬಳಿಕ ಮನೆಗೆ ತೆರಳಿದ ಅಲ್ಲು ಅರ್ಜುನ್​ ಅವರನ್ನು ಪತ್ನಿ ಸ್ನೇಹ ಬಿಗಿದಪ್ಪಿಕೊಂಡು ಸ್ವಾಗತಿಸಿರುವ ವಿಡಿಯೋದ ಕ್ಲೀಪ್​ವೊಂದು ಇದೀಗ ಸೋಷಿಯಲ್​ ಮಿಡಿಯಾದಲ್ಲಿ ವೈರಲ್​ ಆಗುತ್ತಿದೆ.

”ವಿಡಿಯೋದಲ್ಲಿ ಸ್ನೇಹ ತನ್ನ ಪತಿ ಅಲ್ಲು ಅರ್ಜುನ್​ ಬರುವಿಕೆಗಾಗಿ ಕಾಯುತ್ತಿದ್ದಾರೆ. ಅಲ್ಲು ಬಂದ ತಕ್ಷಣ ಓಡಿದ ಸ್ನೇಹ, ಅಲ್ಲು ಹತ್ತಿವಾಗುತ್ತಿದ್ದಂತೆ ಅವರನ್ನು ಬಿಗಿ ಹಿಡಿದು ಅಪ್ಪಿಕೊಂಡಿದ್ದಾರೆ. ಬಳಿಕ ಭಾವುಕರಾದ ಕ್ಷಣಗಳು ವಿಡಿಯೋದಲ್ಲಿ ಕಾಣಸಿಗುತ್ತವೆ”

ಇದನ್ನೂ ಓದಿ: 82ರ ಹರೆಯದಲ್ಲಿಯೂ ಎಲ್ಲರನ್ನೂ ನಾಚಿಸುವಂತೆ ಡ್ಯಾನ್ಸ್​​; Viral Video ನೋಡಿ ನೆಟ್ಟಿಗರು ಫಿದಾ

ಈ ಮುಂಚೆ ಶುಕ್ರವಾರ ಅಲ್ಲು ಅವರನ್ನು ಪೊಲೀಸರು ಬಂಧಿಸುವ ವೇಳೆ ಕೂಡ ಸ್ನೇಹ ವಿಚಲಿತರಾಗಿದ್ದು ಕಂಡು ಬಂತು. ಬಳಿಕ ಅಲ್ಲು ಅರ್ಜುನ್​ ಪತ್ನಿಯ ಕೆನ್ನೆ ಸವರಿ ಸಮಧಾನ ಮಾಡಿದ್ದರು.

ಬಂಧನದ ಬಳಿಕ ಅಲ್ಲು ಅರ್ಜುನ್​ ಮಾತು..
ಜೈಲಿನಿಂದ ಹೊರಬಂದ ನಂತರ ಅಲ್ಲು ಅರ್ಜುನ್ ಮೊದಲ ಪ್ರತಿಕ್ರಿಯೆ ನೀಡಿದ್ದು, ಚಿಂತೆ ಮಾಡಲು ಏನೂ ಇಲ್ಲ. ನಾನು ಚೆನ್ನಾಗಿದ್ದೇನೆ. ನಾನು ಕಾನೂನು ಪಾಲಿಸುವ ನಾಗರಿಕ ಮತ್ತು ಸಹಕರಿಸುತ್ತೇನೆ. ಈ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Chalavadi Narayanaswamy | ಟೆಂಡರ್ ಮಾಫಿಯಾದಿಂದ ಕಳಪೆ ಆಹಾರ ಪೂರೈಕೆ ಆಗುತ್ತಿದೆ

ಅಲ್ಲದೆ, ಜೀವ ಕಳೆದುಕೊಂಡ ಅಭಿಮಾನಿಯ ಕುಟುಂಬಕ್ಕೆ ನನ್ನ ಸಂತಾಪ. ಇದೊಂದು ದುರದೃಷ್ಟಕರ ಘಟನೆ. ಸಾಧ್ಯವಿರುವ ಎಲ್ಲ ರೀತಿಯಲ್ಲಿ ಅವರ ಕುಟುಂಬವನ್ನು ಬೆಂಬಲಿಸಲು ನಾನು ಹಾಜರಾಗುತ್ತೇನೆ. ಎಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲದಿಂದ ನಾನು ಇಂದು ಇಲ್ಲಿದ್ದೇನೆ. ನಾನು ನನ್ನ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ,(ಏಜೆನ್ಸಿಸ್​).

ಧಾರ್ಮಿಕ ಉತ್ಸವಗಳಲ್ಲಿ ಕಾಲ್ತುಳಿತ ಉಂಟಾದರೆ ದೇವತೆಗಳನ್ನ ಅರೆಸ್ಟ್​ ಮಾಡ್ತೀರಾ; ಅಲ್ಲು ಅರ್ಜುನ್​ ಬಂಧಿಸಿದ್ದಕ್ಕೆ Ram Gopal Varma ಕಿಡಿ

Share This Article

ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಲಿವರ್​ ಹಾಳಾಗಲು ಶುರುವಾಗಿದೆ ಎಂದರ್ಥ! ಕೂಡಲೇ ಎಚ್ಚೆತ್ತುಕೊಳ್ಳಿ | Liver Health

Liver Health : ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡಗಳ ಜೊತೆಗೆ ಯಕೃತ್ತು ಕೂಡ ಮಾನವ ದೇಹದಲ್ಲಿ…

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ರುಚಿಕರ ಆಲೂಪೂರಿ; ಇಲ್ಲಿದೆ ಸುಲಭ ವಿಧಾನ | Recipe

ದಿನ ನಿತ್ಯ ಒಂದೇ ರೀತಿಯ ಬೆಳಗ್ಗಿನ ತಿಂಡಿ ತಿಂದು ಬೇಸರವಾಗಿರುತ್ತದೆ. ಆದರೆ ಏನಾದರೂ ವಿಶೇಷವಾದ ಬ್ರೇಕ್​ಫಾಸ್ಟ್​…

ಉಗುರಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ; ಹೇಗೆ ಅಂತೀರಾ.. ಈ ಮಾಹಿತಿ ನೋಡಿ | Health Tips

ಒಬ್ಬ ವ್ಯಕ್ತಿಯನ್ನು ನೋಡುವ ಮೂಲಕ ಅವನ ಬಗ್ಗೆ ಬಹಳಷ್ಟು ಹೇಳಬಹುದು. ಆದರೆ ಉಗುರುಗಳು ನಿಮ್ಮ ಆರೋಗ್ಯದ…