More

  ಸಾವನ್ನೇ ಗೆದ್ದ ಶ್ರಮಿಕರಿಗೆ ಮನೆಗೆ ತೆರಳಲು ಅನುಮತಿ; ಸಹಜಸ್ಥಿತಿಯಲ್ಲಿ ಎಲ್ಲರ ಆರೋಗ್ಯ

  ಋಷಿಕೇಶ: ಉತ್ತರಾಖಂಡದ ಸಿಲ್ಕ್​ಯಾರಾದಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿಕೊಂಡು 17 ದಿನಗಳ ಕಾರ್ಯಾಚರಣೆ ನಂತರ ಸುರಕ್ಷಿತವಾಗಿ ಮರಳಿದ ಎಲ್ಲ 41 ಕಾರ್ವಿುಕರ ಆರೋಗ್ಯ ಸಹಜವಾಗಿದೆ. ಅವರು ತಮ್ಮ ಮನೆಗಳಿಗೆ ತೆರಳಬಹುದು ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್್ಸ) ಗುರುವಾರ ಹೇಳಿದೆ.

  ಬುಧವಾರ ಅವರನ್ನು ಏಮ್ಸ್​ಗೆ ಏರ್​ಲಿಫ್ಟ್ ಮಾಡಲಾಗಿತ್ತು. ಸಮಗ್ರ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಅವರ ರಕ್ತ ಪರೀಕ್ಷೆ, ಎಕ್ಸ್-ರೇ ಮತ್ತು ಇಸಿಜಿ ವರದಿಗಳು ಸಹಜವಾಗಿವೆ. 17 ದಿನಗಳ ನಂತರ ಸುರಂಗದಿಂದ ಹೊರಬಂದ ಕಾರಣ, ಅವರಿಗೆ ಹೊರಗಿನ ಪರಿಸರಕ್ಕೆ ಒಗ್ಗಿಕೊಳ್ಳಲು ಸಮಯ ಬೇಕಾಗಬಹುದು ಎಂದು ಏಮ್್ಸ ವೈದ್ಯ ರವಿಕಾಂತ್ ತಿಳಿಸಿದ್ದಾರೆ. ತಪಾಸಣೆಗಾಗಿ ಎರಡು ವಾರದ ನಂತರ ಸಮೀಪದ ಆಸ್ಪತ್ರೆಗಳಿಗೆ ಹೋಗುವಂತೆ ಕಾರ್ವಿುಕರಿಗೆ ಸಲಹೆ ನೀಡಲಾಗಿದೆ.

  ಸಿಎಂ ಸನ್ಮಾನ: 41 ಕಾರ್ವಿುಕರ ಪೈಕಿ ಕೆಲವರ ಕುಟುಂಬ ಸದಸ್ಯರನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ತಮ್ಮ ಮನೆಯಲ್ಲಿ ನಡೆದ ‘ಇಗಾಸ್ ಬಗ್ವಾಲ್’ ಆಚರಣೆಯಲ್ಲಿ ಸನ್ಮಾನಿಸಿದರು.

  15 ಮಂದಿ ಏಮ್ಸ್​ನಿಂದ ನಿರ್ಗಮನ: ಸುರಂಗದಿಂದ ರಕ್ಷಿಸಲ್ಪಟ್ಟ 41 ಜನರ ಪೈಕಿ 15 ಮಂದಿ ಏಮ್್ಸ ನಿಂದ ತಮ್ಮ ಊರಾದ ಜಾರ್ಖಂಡ್​ಗೆ ಹೊರಟಿದ್ದಾರೆ. ಈ 15 ಕಾರ್ವಿುಕರನ್ನು ಅವರ ಕುಟುಂಬಸ್ಥರ ಸಮೇತ ಉತ್ತರಾಖಂಡದ ಡೆಹ್ರಾಡೂನ್​ನಿಂದ ದೆಹಲಿಗೆ ಏರ್​ಲಿಫ್ಟ್ ಮಾಡಲಾಗಿದ್ದು,ಅಲ್ಲಿಂದ ಅವರನ್ನು ವಿಮಾನದಲ್ಲಿ ರಾಂಚಿ ಕಳುಹಿಸಿಕೊಡಲಾಗುತ್ತದೆ.

  ಕೇಸ್ ಸ್ಟಡಿಯ ವಿಷಯ ಎಂದ ಪ್ರಧಾನಿ: ಸುರಂಗದಿಂದ ಕೊನೆಯವರಾಗಿ ಹೊರ ಬಂದ ಫೋರ್​ವ್ಯಾನ್ ಗಬ್ಬರ್ ಸಿಂಗ್ ನೇಗಿಯ ತಾಳ್ಮೆ- ಧೈರ್ಯ ಮೆಚ್ಚಿರುವ ಪ್ರಧಾನಿ ಮೋದಿ, ಈತ ಯಾವುದೇ ವಿಶ್ವವಿದ್ಯಾಲಯದಲ್ಲಿ ಅಧ್ಯಯನದ ಒಂದು ವಿಷಯ ಆಗಬಹುದು (ಕೇಸ್ ಸ್ಟಡಿ) ಎಂದು ಅಭಿಪ್ರಾಯಪಟ್ಟಿದ್ದಾರೆ. ಸಹಕಾರ್ವಿುಕರು ಸುರಂಗದಲ್ಲಿ ಸಿಲುಕಿದ್ದಾಗ ತಾವೇ ಮುಂಚೂಣಿಯಲ್ಲಿದ್ದು ಧೈರ್ಯದಿಂದ ಇದ್ದುದಲ್ಲದೆ ಉಳಿದವರಲ್ಲೂ ಆತ್ಮಸ್ಥೈರ್ಯ ತುಂಬಿದ್ದರು ಎಂದು ಮೋದಿ ಪ್ರಶಂಸಿಸಿದ್ದಾರೆ. ‘ಗ್ರಾಮವೊಂದರ ಸಾಮಾನ್ಯ ವ್ಯಕ್ತಿಯಾದ ನೇಗಿ ಮತ್ತು ಆತನ ಸಹೋದ್ಯೋಗಿ ಸಬಾ ಅಹಮದ್, ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ತಂಡವನ್ನು ಧೃತಿಗೆಡದಂತೆ ಉಳಿಸಿಕೊಂಡಿದ್ದರು. ಯಾವುದಾದರೊಂದು ವಿಶ್ವವಿದ್ಯಾಲಯ ಅವರ ನಾಯಕತ್ವದ ಗುಣಗಳ ವಿಶ್ಲೇಷಣೆ ನಡೆಸಬೇಕು’ ಎಂದು ಮೋದಿ ಅಭಿಪ್ರಾಯಪಟ್ಟರು.

  belgaum brothers

  ಸುರಂಗ ಕಾರ್ಯಾಚರಣೆಯಲ್ಲಿ ಬೆಳಗಾವಿಯ ಇಂಜಿನಿಯರ್ಸ್: ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿದ್ದ ಕಾರ್ವಿುಕರ ಇರುವಿಕೆಯನ್ನು ಮೊದಲ ಬಾರಿಗೆ ಗುರುತಿಸಿದ್ದು ಬೆಳಗಾವಿಯ ತಜ್ಞರ ತಂಡ. ರೋಬಾಟಿಕ್ ಯಂತ್ರದೊಂದಿಗೆ ಬೆಳಗಾವಿಯಿಂದ ಉತ್ತರಕಾಶಿ ಘಟನಾ ಸ್ಥಳಕ್ಕೆ ತೆರಳಿದ್ದ ಇಬ್ಬರು ಇಂಜಿನಿಯರ್ಸ್ ಸುರಂಗದಲ್ಲಿ ಸಿಲುಕಿದ್ದ ಕಾರ್ವಿುಕರು 7 ದಿನಗಳ ನಂತರವೂ ಜೀವಂತವಾಗಿರುವ ಕುರುಹು ಕೊಟ್ಟಿದ್ದರು.

  ಬೆಳಗಾವಿಯಲ್ಲಿ ಕುಡಿಯುವ ನೀರು ಸರಬರಾಜು ಗುತ್ತಿಗೆ ಪಡೆದಿರುವ ಎಲ್ ಆಂಡ್ ಟಿ ಕಂಪನಿಯಲ್ಲಿ ನಿರ್ವಹಣಾ ಇಂಜಿನಿಯರ್ ಆಗಿರುವ ಬಾಲಚಂದ್ರ ಕಿಲಾರಿ ಮತ್ತು ಪಶ್ಚಿಮಬಂಗಾಳದ ದೌದೀಪ ಖಂಡ್ರಾ ಸುರಂಗದಲ್ಲಿ ಸಿಲುಕಿದ್ದ ಕಾರ್ವಿುಕರು ಜೀವಂತವಾಗಿರುವುದನ್ನು ಮೊದಲು ಗುರುತಿಸಿದ್ದರು. ಸಣ್ಣ ಪೈಪ್​ನಲ್ಲಿ ನುಸುಳಿ 120 ಮೀಟರ್​ವರೆಗೆ ಸಾಗುವ ಸಾಮರ್ಥ್ಯದ ರೋಬಾಟಿಕ್ ಕ್ಯಾಮರಾದೊಂದಿಗೆ ತೆರಳಿದ್ದ ಇವರು ನ. 20ರ ರಾತ್ರಿ 10ಕ್ಕೆ ಕಾರ್ಯಾಚರಣೆಗೆ ಇಳಿದಿದ್ದರು. ಸತತ 6 ಗಂಟೆಗಳ ಕಾರ್ಯಾಚರಣೆ ನಂತರ ನ. 21ರ ಬೆಳಗ್ಗೆ 3.52ಕ್ಕೆ ಕಾರ್ಯಾಚರಣೆ ಸ್ಥಳದಿಂದ 60ರಿಂದ 90 ಮೀಟರ್ ದೂರದಲ್ಲಿಯೇ ಕಾರ್ವಿುಕರು ಜೀವಂತವಾಗಿರುವುದನ್ನು ಕ್ಯಾಮರಾ ಮೂಲಕ ಪತ್ತೆ ಹಚ್ಚಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts