ರಂಗಮಂದಿರದಲ್ಲಿ ಉಪಹಾರ ಸೇವಿಸಲು ಅವಕಾಶ

ಹಾಸನ: ನಗರದ ಮಹಾರಾಜಾ ಪಾರ್ಕ್‌ನಲ್ಲಿರುವ ರಂಗಮಂದಿರದಲ್ಲಿ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಸೇವಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ನಗರಸಭೆ ಆಯುಕ್ತೆ ರೂಪಾಶೆಟ್ಟಿ ಹೇಳಿದರು.

ನಗರದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರು ಪಾರ್ಕ್ ಹಿಂಭಾಗದ ಶೌಚಗೃಹ ಸಮೀಪದಲ್ಲೇ ನಿಂತು ಉಪಹಾರ ಸೇವಿಸಬೇಕಿತ್ತು. ಈ ಸಂಬಂಧ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ನಾಗರಾಜ್ ಹೆತ್ತೂರು ಹಾಗೂ ಅಧ್ಯಕ್ಷ ಲೋಕೇಶ್ ಉಪಹಾರ ಸ್ಥಳ ಬದಲಿಸುವಂತೆ ಸಲ್ಲಿಸಿದ್ದ ಮನವಿಗೆ ನಗರಸಭೆ ಆಯುಕ್ತರು ಸ್ಪಂದಿಸಿದ್ದಾರೆ.

ಭಾನುವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ರೂಪಾಶೆಟ್ಟಿ, ಮಹಾರಾಜಾ ಪಾರ್ಕ್‌ನಲ್ಲಿರುವ ರಂಗ ಮಂದಿರದಲ್ಲಿ ಬೆಳಗಿನ ತಿಂಡಿ ಸೇವಿಸಿ ಕೆಲಸಕ್ಕೆ ತೆರಳುವಂತೆ ಸೂಚಿಸಿದರು.

ಮಳೆ, ಬಿಸಿಲಿನಲ್ಲಿ ಪೌರ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಶೌಚಗೃಹದ ಸಮೀಪವೇ ಆಹಾರ ಸೇವನೆಯಿಂದ ದುರ್ವಾಸನೆ ಹಾಗೂ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ನಗರಸಭೆ ಆವರಣದಲ್ಲಿಯೂ ಆಹಾರ ಸೇವನೆಗೆ ಜಾಗದ ಸಮಸ್ಯೆಯಾಗಿದ್ದು, ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

Leave a Reply

Your email address will not be published. Required fields are marked *