4 ಕಾಲು, 2 ತಲೆ ಇರುವ ವಿಚಿತ್ರ ಮಗು ಮೈತ್ರಿ ಸರ್ಕಾರ: ಸಿ.ಟಿ.ರವಿ ಟಾಂಗ್​

ಬೆಂಗಳೂರು: ತನ್ನನ್ನು ತಾನು ಸಾಂದರ್ಭಿಕ ಶಿಶು ಎಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಶಾಸಕ ಸಿ.ಟಿ.ರವಿ ಟಾಂಗ್​ ನೀಡಿದ್ದಾರೆ. ಕಾಂಗ್ರೆಸ್​, ಜೆಡಿಎಸ್​ ಮೈತ್ರಿ ಸರ್ಕಾರ ವಿಚಿತ್ರ ಮಗು ಇದ್ದಂಗೆ ಎಂದು ಲೇವಡಿ ಮಾಡಿದ್ದಾರೆ.

ಶಾಂಗ್ರಿಲಾ ಹೋಟೆಲ್​ನಲ್ಲಿ ಏರ್ಪಡಿಸಿದ್ದ ಸಭೆಯ ವೇಳೆ ಮಾತನಾಡಿದ ಅವರು, ಈಗಿನ ಸರ್ಕಾರ ವಿಚಿತ್ರ ಮಗು. ನಾಲ್ಕು ಕಾಲು, ಎರಡು ತಲೆ ಇದೆ. ಅದನ್ನು ನೋಡಲೆಂದೇ ಇಷ್ಟೊಂದು ಜನ ಸೇರಿದ್ದಾರೆ. ಆದರೆ, ಈ ಮಗುವಿಗೆ ಯಾರ ಪ್ರೀತಿಯೂ ಸಿಗಲಾರದು ಎಂದರು.

ಸಾಂದರ್ಭಿಕ ಶಿಶುವಿಗೇ ಇಷ್ಟು ಸೊಕ್ಕು ಇರಬೇಕಾದರೆ 22 ರಾಜ್ಯಗಳಲ್ಲಿ ಅಧಿಕಾರ ಹಿಡಿದ ನಮಗೆ ಇನ್ನೆಷ್ಟು ಸೊಕ್ಕು ಇರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *