ವಿಂಡೀಸ್ ಗುತ್ತಿಗೆ ವ್ಯಾಪ್ತಿಗೆ ಪೂರನ್

ಸೇಂಟ್​ಜೋನ್ಸ್(ಆಂಟಿಗಾ): ವಿಶ್ವಕಪ್ ಮುಗಿಸಿ ತವರಿಗೆ ವಾಪಸಾಗಿರುವ ಫ್ಯಾಬಿಯನ್ ಅಲೆನ್, ನಿಕೋಲಸ್ ಪೂರನ್ ಹಾಗೂ ಒಶಾನೆ ಥಾಮಸ್ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ಆಟಗಾರರ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜತೆಗೆ 7 ಆಟಗಾರರು ಎಲ್ಲ ಮೂರು ಮಾದರಿಯಲ್ಲೂ ಸ್ಥಾನ ಪಡೆದಿದ್ದಾರೆ. ಡರೇನ್ ಬ್ರಾವೊ, ಶಿಮ್ರೊನ್ ಹೆಟ್ಮೆಯೆರ್, ಕೀಮೊ ಪೌಲ್, ಜೆಸನ್ ಹೋಲ್ಡರ್, ಶೈ ಹೋಪ್, ಅಲ್ಜಾರಿ ಜೋಸೆಫ್ ಹಾಗೂ ಕೆಮಾರ್ ರೂಚ್ ಮೂರು ಮಾದರಿಯಲ್ಲೂ ಸ್ಥಾನ ಪಡೆದಿರುವ ಆಟಗಾರರು. ಜುಲೈ 1ರಿಂದ ಅನ್ವಯವಾಗುವಂತೆ ಮುಂದಿನ ಒಂದು ವರ್ಷದ ಅವಧಿಗೆ 19 ಆಟಗಾರರಿಗೆ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಜತೆಗೆ ಮಹಿಳೆಯರ ವಿಭಾಗದಲ್ಲಿ 15 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ವಿಶ್ವಕಪ್​ನಲ್ಲಿ ವಿಂಡೀಸ್ ತಂಡ ಸೆಮಿಫೈನಲ್​ಗೇರಲು ವಿಫಲವಾದ ನಡುವೆಯೂ ಅಲೆನ್, ಪೂರನ್ ಹಾಗೂ ಥಾಮಸ್ ಉತ್ತಮ ನಿರ್ವಹಣೆ ತೋರಿದ್ದರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಪೂರನ್, ವಿಶ್ವಕಪ್​ನಲ್ಲಿ ವಿಂಡೀಸ್ ತಂಡದ ಗರಿಷ್ಠ ರನ್​ಸ್ಕೋರರ್ (367ರನ್) ಎನಿಸಿದ್ದರು.

Leave a Reply

Your email address will not be published. Required fields are marked *