ತೇರದಾಳ: ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ನಿರ್ಮಿಸಿದ ಅನುಭವ ಮಂಟಪದ ಪೀಠಾಧ್ಯಕ್ಷರಾದ ಅಲ್ಲಮಪ್ರಭು ದೇವರು ನಮ್ಮೂರಿನ ಕ್ಷೇತ್ರಾಧಿಪತಿ ಆಗಿರುವುದು ನಮ್ಮೆಲ್ಲರ ಪುಣ್ಯ. ಅಂತಹ ಮಹಾನುಭಾವರ ನೂತನ ದೇವಸ್ಥಾನ ಪೂರ್ಣಗೊಳ್ಳುತ್ತಿರುವುದು ಐತಿಹಾಸಿಕ ಇತಿಹಾಸ ಎಂದು ಹಿರೇಮಠದ ಗಂಗಾಧರ ದೇವರು ಹೇಳಿದರು.
ನೂತನ ದೇವಸ್ಥಾನದ ಚೌಕಟ್ಟಿಗೆ ಬನಹಟ್ಟಿಯ ಭಾರತಿ ರುದ್ರಪ್ಪ ಆಸಂಗಿ ಅವರು ನೀಡಿದ 47 ಕೆಜಿ ಹಾಗೂ ಬಾಗಿಲಿಗೆ ಜಯಶ್ರೀ ಪಾರ್ಶ್ವನಾಥ ನಾಡಗೌಡ ಕುಟುಂಬದವರು ನೀಡಿದ 26 ಕೆಜಿ ಬೆಳ್ಳಿ ಸಮರ್ಪಣಾ ಸಮಾರಂಭದಲ್ಲಿ ಶ್ರೀಗಳು ಮಾತನಾಡಿ, ದಾನಿಗಳ ಸೇವೆಯನ್ನು ಶ್ಲಾಘಿಸಿದರು.
ಪ್ರವೀಣ ನಾಡಗೌಡ ಮಾತನಾಡಿ, ಅಲ್ಲಮ ಪ್ರಭುದೇವರ ಶಕ್ತಿ ಪವಾಡ ಹೇಳತೀರದು. ದೇವರಿಗೆ ದೇಣಿಗೆ ನೀಡುವಷ್ಟು ದೊಡ್ಡವರು ಯಾರೂ ಇಲ್ಲ. ನಮಗಿಂತ ಮೊದಲು ಪಟ್ಟಣದ ಹಿರಿಯ ಜೀವಿ ಮಲ್ಲಪ್ಪಣ್ಣ ಜಮಖಂಡಿ ಹಾಗೂ ತರಕಾರಿ ಮಾರುವ ಚಂದ್ರವ್ವ ಜಗದಾಳ ಕೂಡ ಗರ್ಭ ಗುಡಿಗೆ ಬೆಳ್ಳಿಗೆ ಚೌಕಟ್ಟು ಹಾಗೂ ಬಾಗಿಲು ದೇಣಿಗೆ ನೀಡಿದ್ದಾರೆ. ದಾನ ಮಾಡುವುದರಲ್ಲಿನ ತೃಪ್ತಿ ಬಹಳ ದೊಡ್ಡದು ಎಂದು ಹೇಳಿದರು.
ದೇವಸ್ಥಾನದಲ್ಲಿ ಅರ್ಚಕ ಪರಯ್ಯ ತೆಳಗಿನಮನಿ ಅವರಿಂದ ಪ್ರಭುದೇವರ ಗದ್ದುಗೆಗೆ ವಿಶೇಷ ಪೂಜೆ, ಆರುತಿ, ಮಂಗಳಾರುತಿ ಕಾರ್ಯಕ್ರಮಗಳನ್ನು ನೆರವೇರಿಸಿದರು. ದಾನಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಗುಹೇಶ್ವರ ಪುರಾಣಿಕಮಠ, ವಿಜಯ ಮಹಾಂತೇಶ ನಾಡಗೌಡ, ಭೀಮಗೊಂಡ ಸದಲಗಿ, ಅಲ್ಲಯ್ಯ ದೊಡಮನಿ, ಸುನೀಲ ತೆಳಗಿನಮನಿ, ಮಲ್ಲಪ್ಪಣ್ಣ ಜಮಖಂಡಿ, ಈಶ್ವರ ಯಲ್ಲಟ್ಟಿ, ಶಂಕರ ಅಥಣಿ, ವರ್ಧಮಾನ ಕಡಹಟ್ಟಿ, ಶೇಖರ ಸಲಬನ್ನವರ, ಸತ್ಯಪ್ಪ ಮುಕುಂದ, ಗಿರೀಶ, ಶಿವಾನಂದ ವಾಲಿ, ಮಹಾದೇವ ಬಿಜ್ಜರಗಿ, ಗುಹೇಶ್ವರ ಬಾವಿ, ಆನಂದ ಹಿತ್ತಲಮನಿ, ಮಹಾವೀರ ಮಗದುಂ, ಮೃತ್ಯುಂಜಯ ತೆಳಗಿನಮನಿ, ಎಂ.ಸಿ. ಕುಂಚಕನೂರ, ಪ್ರಕಾಶ ಕಾಲತಿಪ್ಪಿ ಇತರರಿದ್ದರು.