ಕಲಾದಗಿ: ಬೆಂಗಳೂರಿನಲ್ಲಿ ಜ.18, 19 ರಂದು ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸುವರ್ಣ ಸಂಭ್ರಮ ಹಾಗೂ ಬ್ರಾಹ್ಮಣ ಮಹಾ ಸಮ್ಮೇಳನದಲ್ಲಿ ವಿಪ್ರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮಹಾಸಭಾ ಸಂಘಟನಾ ಕಾರ್ಯದರ್ಶಿ ವಿಜಯ ನಾಡಜೋಷಿ ಮನವಿ ಮಾಡಿದರು.
ಗ್ರಾಮದ ಶ್ರೀ ಚಿದಂಬರೇಶ್ವರ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಎರಡು ದಿನಗಳವರೆಗೆ ನಡೆಯುವ ಸಮ್ಮೇಳನದಲ್ಲಿ ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು, ವಿಚಾರ ವಿನಿಮಯ ಮಾಡಿಕೊಳ್ಳಲು, ಹಲವಾರು ಒಮ್ಮತದ ನಿರ್ಣಯ ಮಾಡಲು ಹಾಗೂ ಮುಖ್ಯವಾಗಿ ಸಮಾಜದಲ್ಲಿ ಗಟ್ಟಿಯಾಗಿ ಮೇಲೇಳಲು ಪೂರಕವಾಗಲಿದೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಡಾ. ಗಿರೀಶ ಮಾಸೂರಕರ ಮಾತನಾಡಿ, ಅವಶ್ಯಕತೆ ಇದ್ದಾಗ ನಮ್ಮನ್ನು ಬಳಸಿಕೊಂಡು ನಂತರ ದೂರ ಇಡುವವರಿಗೆಲ್ಲರಿಗೂ ಬುದ್ಧಿ ಕಲಿಸಲು ಸಂಘಟನೆ ಅವಶ್ಯಕತೆ ಇದೆ. ನಾವು ಒಗ್ಗಟ್ಟಾದರೆ ಮಾತ್ರ ಸಾಮಾಜಿಕವಾಗಿ ಬೆಳೆಯಲು ಸಾಧ್ಯ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಭೆಯ ಜಿಲ್ಲಾಧ್ಯಕ್ಷ ನರಸಿಂಹ ಆಲೂರ ಮಾತನಾಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಭೆಯ ಪ್ರಾಂತ್ಯ ಕಾರ್ಯದರ್ಶಿ ವಿನಾಯಕ ತಾಳಿಕೋಟಿ, ಕಾರ್ಯದರ್ಶಿ ಎಸ್.ಕೆ. ಕುಲಕರ್ಣಿ, ಕಿರಣ ಕುಲಕರ್ಣಿ, ಮೋಹನ ದೇಶಪಾಂಡೆ, ವಿನಾಯಕ ಬೋಕರೆ, ವಿಜಯಕುಮಾರ ಕುಲಕರ್ಣಿ, ಆನಂದ ಮನಗೂಳಿ, ಕೇಶವ ಕುಲಕರ್ಣಿ, ಗಿರೀಶ ಆಶ್ರೀತ, ವಿಠಲ ಕುಲಕರ್ಣಿ, ಸ್ಥಳೀಯ ಚಿದಂಬರೇಶ್ವರ ಸೇವಾ ಸಮಿತಿ ಅಧ್ಯಕ್ಷ ರಮೇಶ ಮಠ, ಕಾರ್ಯದರ್ಶಿ ಅಜಯ ಕುಲಕರ್ಣಿ, ಬಾಬೂರಾವ ಕಲಕರ್ಣಿ, ವಿ.ಜಿ. ದೇಶಪಾಂಡೆ, ಪ್ರಮೋದ ಅಂಕಲಗಿ, ಬಾಳು ಕುಲಕರ್ಣಿ ಇತರರಿದ್ದರು.