ಆಲ್ ಸ್ಟಾರ್ ಮಹಿಳಾ ವಾಲಿಬಾಲ್ ಪಂದ್ಯ

ಚೆನ್ನೈ: ಹೊಸದಾಗಿ ಆರಂಭವಾಗಿರುವ ಪ್ರೊ ವಾಲಿಬಾಲ್ ಲೀಗ್ ಪ್ರೇಕ್ಷಕರ ನಿರೀಕ್ಷೆ ಮುಟ್ಟುವಲ್ಲಿ ಯಶಸ್ವಿಯಾಗಿದ್ದರ ಹಿನ್ನೆಲೆಯಲ್ಲಿ ದೇಶದಲ್ಲಿ ಮಹಿಳಾ ವಾಲಿಬಾಲ್ ಲೀಗ್​ಅನ್ನೂ ಆರಂಭಿಸುವ ಪ್ರಯತ್ನ ಆರಂಭವಾಗಿದೆ.

ಫೆ. 22 ರಂದು ನಡೆಯಲಿರುವ ಪಿವಿಎಲ್ ಫೈನಲ್ ಪಂದ್ಯಕ್ಕೆ ಮುನ್ನ ಸಂಜೆ 5 ಗಂಟೆಗೆ ಆಲ್​ಸ್ಟಾರ್ ಮಹಿಳಾ ವಾಲಿಬಾಲ್ ಪಂದ್ಯವೂ ನಡೆಯಲಿದೆ.

ಭಾರತ ಮಹಿಳಾ ತಂಡದ ಶಕ್ತಿಯನ್ನು ದೇಶದ ಜನತೆಯ ಮುಂದಿಡುವುದು ಇದರ ಹಿಂದಿನ ಉದ್ದೇಶ. ಟೀಮ್ ಬ್ಲ್ಯೂ ಹಾಗೂ ಟೀಮ್ ಯೆಲ್ಲೋ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಅಮೆರಿಕದ ಬೀಚ್ ವಾಲಿಬಾಲ್ ಆಟಗಾರ್ತಿ ಅಲೆಕ್ಸಾ ಸ್ಟ್ರೇಂಜ್ ಹಾಗೂ ಸ್ಲೊವೇನಿಯಾದ ಮರಿನಾ ವೆಟೊನೋವಾ ಈ ಪಂದ್ಯದಲ್ಲಿ ಆಡಲಿದ್ದಾರೆ.