ಕಾರ್ಗಲ್: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಧರ್ಮಗಳಿಗೂ ಸಮಾನ ಸ್ಥಾನಮಾನವಿದೆ. ಎಲ್ಲ ಧಾರ್ಮಿಕ ತಾಣಗಳ ಅಭಿವೃದ್ಧಿಗೆ ಬದ್ಧ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಜೋಗದಲ್ಲಿ ನವೀಕೃತಗೊಂಡ ಬೆತೆಸ್ಥಾ ಪ್ರಾರ್ಥನಾ ಮಂದಿರವನ್ನು ಬುಧವಾರ ಉದ್ಘಾಟಿಸಿ, ಚರ್ಚ್‌ನಲ್ಲಿ ನಡೆದ ಕ್ರಿಸ್‌ಮಸ್ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಅವರವರ ಧರ್ಮಗಳನ್ನು ಆಚರಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಯಾವುದೇ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣಲಾಗುವುದು ಎಂದರು.
ಸಮಾಜದಲ್ಲಿ ಪರಸ್ಪರ ಪ್ರೀತಿ ಹಾಗೂ ವಿಶ್ವಾಸದ ಮೂಲಕ ಸಾಮರಸ್ಯದಿಂದ ಬದುಕುವ ನಿಟ್ಟಿನಲ್ಲಿ ಇಂತಹ ಪ್ರಾರ್ಥನಾ ಮಂದಿರಗಳು ಸಮಾಜಕ್ಕೆ ಸಹಕಾರಿಯಾಗಲಿ. ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳು ಶಾಂತಿಯ ಸಂಕೇತ. ಶಾಸಕನಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಯತ್ತ ಚಿಂತನೆ ಮಾಡುವುದು ನನ್ನ ಕರ್ತವ್ಯ ಎಂದು ತಿಳಿಸಿದರು.
ಬೆತೆಸ್ಥಾ ಚರ್ಚ್ ಫಾದರ್ ಪ್ರೇಮ್‌ಕುಮಾರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ನೊಮಿಟೋ ಕಾಮ್‌ದಾರ್, ಪಪಂ ಅಧ್ಯಕ್ಷ ಎಂ.ರಾಜು, ಮುಖ್ಯಾಧಿಕಾರಿ ಎಂ.ಕೆ.ಸುರೇಶ್, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ಲಕ್ಷ್ಮೀರಾಜು, ಪಿ.ಮಂಜುನಾಥ್, ಸಾಗರ ನಗರಸಭೆ ಸದಸ್ಯ ಗಣಪತಿ, ವಕೀಲರಾದ ಭೋಜರಾಜ್, ಪ್ರಮುಖರಾದ ವಿ.ಸಂತೋಷ್‌ಕುಮಾರ್, ಸೋಮಶೇಖರ್, ಎಚ್.ಎಸ್.ಸಾದಿಕ್, ಎಸ್.ಎಲ್.ರಾಜ್‌ಕುಮಾರ್, ಶ್ರೀಧರ್, ರಮೇಶ್, ಸತೀಶ್ ಮಲ್ಲಕ್ಕಿ, ಶ್ರೀಲತಾ ಸತ್ಯನ್ ಇತರರಿದ್ದರು.
ಎಲ್ಲ ಧರ್ಮಗಳಿಗೂ ಇದೆ ಸಮಾನ ಸ್ಥಾನ

You Might Also Like
ಸಂಬಳ ಸಾಲ್ತಿಲ್ಲ! ಸಾಲ ತೀರಿಸಲು ಚಿನ್ನದ ಸಾಲ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ | Gold Loan
Gold Loan: ಸಂಸ್ಥೆ ಕೊಡುತ್ತಿರುವ ಸಂಬಳ ನಮಗೆ ಮಾತ್ರವಲ್ಲ, ನಮ್ಮ ಸಾಲ ತೀರಿಸಲು ಸಹ ಸಾಲುತ್ತಿಲ್ಲ…
ಭಾರತದಲ್ಲಿ ಅನಾರೋಗ್ಯಕರ ಆಹಾರ ಸೇವನೆಯೇ ಹೆಚ್ಚು: ಶೇ. 56 ರೋಗಗಳಿಗೆ ಕೆಟ್ಟ ಆಹಾರ ಪದ್ಧತಿ ಕಾರಣವೆಂದ ಏಮ್ಸ್! Indians Food
Indians Food : ಭಾರತದಲ್ಲಿ ಬೊಜ್ಜು ಅಥವಾ ಸ್ಥೂಲಕಾಯತೆ ಇಂದು ಸಾಮಾನ್ಯ ಹಾಗೂ ಸಂಕೀರ್ಣ ಕಾಯಿಲೆಗಳಲ್ಲಿ…
ನೀವು ಚಿಕನ್ ಅಥವಾ ಮಟನ್ ಲಿವರ್ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver
Liver : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು…