More

    ಎಲ್ಲ ತರಹದ ವೈದ್ಯಕೀಯ ಚಿಕಿತ್ಸೆಗಳು ದುಬಾರಿ: ಪ್ರೊ.ರಾಮಕೃಷ್ಣ ಬೇಸರ

    ಮೈಸೂರು: ನಗರದ ವಿಜಯನಗರ ಸಾಂಸ್ಕೃತಿಕ ಸಂಸ್ಥೆ, ಪಡುವಾರಹಳ್ಳಿ ಗ್ರಾಮಾಭ್ಯುದಯ ಟ್ರಸ್ಟ್, ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಕಣ್ಣಿನ ಆಸ್ಪತ್ರೆ, ಮೈಸೂರು ರೋಟರಿ ಪಂಚಶೀಲ ಮತ್ತು ಮೈಸೂರು ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆಯಿಂದ ಬಿ.ಎಂ.ಮರಿಗೌಡರ ಸ್ಮರಣಾರ್ಥ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಪಡುವಾರಹಳ್ಳಿಯ ಶ್ರೀವರಸಿದ್ಧಿ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಬಿರಕ್ಕೆ ಚಾಲನೆ ನೀಡಿದ ಡಿಎಫ್‌ಆರ್‌ಎಲ್ ಶಾಲೆಯ ನಿವೃತ್ತ ಪ್ರಾಂಶುಪಾಲ ಪ್ರೊ.ರಾಮಕೃಷ್ಣ ಮಾತನಾಡಿ, ಪ್ರಸ್ತುತ ಆಧುನಿಕ ಯುಗದಲ್ಲಿ ಎಲ್ಲ ತರಹದ ವೈದ್ಯಕೀಯ ಚಿಕಿತ್ಸಾ ವೆಚ್ಚಗಳು ತುಂಬಾ ದುಬಾರಿಯಾಗಿವೆ. ಈ ರೀತಿಯಾದ ಉಚಿತ ಶಿಬಿರಗಳು ನಾಗರಿಕ ಸಮಾಜಕ್ಕೆ ತುಂಬ ಅವಶ್ಯಕತೆ ಇದೆ ಎಂದರು.
    ಅಂಧತ್ವ ಎದುರಾಗಲು ನಮ್ಮ ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯೇ ಮೂಲ ಕಾರಣ. ಅಂಧತ್ವದಿಂದ ಹೊರಬರಲು ಪೌಷ್ಟಿಕಾಂಶಯುಕ್ತ ಆಹಾರವನ್ನು ಹೆಚ್ಚು ಸೇವಿಸಬೇಕು. ಈ ರೀತಿಯ ಉಚಿತ ಶಿಬಿರಗಳನ್ನು ನಾಗರಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದರು.
    ಶಿಬಿರದಲ್ಲಿ ಒಟ್ಟು 85 ಶಿಬಿರಾರ್ಥಿಗಳು ತಪಾಸಣೆಗೆ ಒಳಗಾಗಿದ್ದು, 22 ಜನರನ್ನು ಎಂ.ಆರ್.ಸಿ. ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.
    ವಿಜಯನಗರ ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ರಾಮಕೃಷ್ಣ, ಪತ್ರಿಕಾ ಕಾರ್ಯದರ್ಶಿ ಪಡುವಾರಹಳ್ಳಿ ಬಿ.ಶ್ರೀನಿವಾಸ್, ಸಹ ಕಾರ್ಯದರ್ಶಿ ಆರ್.ರವೀಂದ್ರ, ನ್ಯಾಯಬೆಲೆ ಅಂಗಡಿ ಗೋಕುಲಂ ಧರ್ಮರಾಜು, ನಗರಪಾಲಿಕೆ ಮಾಜಿ ಸದಸ್ಯರಾದ ಸುಶೀಲಾ ಮರೀಗೌಡ, ವಸಂತ ಶ್ರೀಕಂಠ, ಬಿ.ಎಂ.ನಾಗೇಶ್, ಪಡುವಾರಹಳ್ಳಿ ಗ್ರಾಮಾಭ್ಯುದಯ ಟ್ರಸ್ಟ್ ಅಧ್ಯಕ್ಷ ಮೆಲ್ಲಹಳ್ಳಿ ಮಹದೇವಸ್ವಾಮಿ, ವೆಲ್ಡಿಂಗ್ ಶ್ರೀನಿವಾಸ್, ಇಂದಿರಾಗಾಂಧಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಚೇಗೌಡನಕೊಪ್ಪಲು ರವಿ, ಮುಖಂಡ ಬಿ.ಕುಮಾರ್ ಇತರರು ಇದ್ದರು.

    See also  ಜೆಡಿಎಸ್ ಬೆಂಬಲಿತ 9 ಸದಸ್ಯರ ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts