ರೇಡಿಯೋದಲ್ಲಿ ದೇಶೀಯ ಕ್ರಿಕೆಟ್ ವೀಕ್ಷಕ ವಿವರಣೆ!

ನವದೆಹಲಿ: ಭಾರತದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪಂದ್ಯ ಗಳು ಹಾಗೂ ದೇಶೀಯ ಕ್ರಿಕೆಟ್ ಟೂರ್ನಿಗಳಿಗೆ ವೀಕ್ಷಕ ವಿವರಣೆ ನೀಡುವ ಸಲುವಾಗಿ ಆಲ್ ಇಂಡಿಯಾ ರೇಡಿಯೋ (ಎಐಆರ್) ಜತೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಿನ 2 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ.

ಇದರೊಂದಿಗೆ ಕೋಟ್ಯಂತರ ಜನರು, ಅಂತಾರಾಷ್ಟ್ರೀಯ ಕ್ರಿಕೆಟ್ ಜತೆಗೆ ದೇಶೀಯ ಪುರುಷರ ಹಾಗೂ ಮಹಿಳಾ ಕ್ರಿಕೆಟ್ ಟೂರ್ನಿಯ ಪಂದ್ಯಗಳ ನೇರ ವೀಕ್ಷಕ ವಿವರಣೆ ಕೇಳಬಹುದಾಗಿದೆ. ಸೆ. 15ರಂದು ಧರ್ಮಶಾಲಾದಲ್ಲಿ ನಡೆಯಲಿರುವ ದಕ್ಷಿಣ

ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ ದೊಂದಿಗೆ ವೀಕ್ಷಕ ವಿವರಣೆ ಆರಂಭಗೊಳ್ಳಲಿದೆ. 2019ರ ಸೆ. 10ರಿಂದ 2021ರ ಆಗಸ್ಟ್ 31 ರವರೆಗೆ ಬಿಸಿಸಿಐ ಹಾಗೂ ಎಐಆರ್ ಒಪ್ಪಂದ ಮಾಡಿಕೊಂಡಿವೆ. ಇದರಿಂದ ದೇಶೀಯ ಕ್ರಿಕೆಟ್ ಟೂರ್ನಿಯ ಪ್ರತಿಷ್ಠಿತ ರಣಜಿ ಟ್ರೋಫಿ, ಇರಾನಿ ಟ್ರೋಫಿ, ದೇವಧರ್ ಟ್ರೋಫಿ, ದುಲೀಪ್ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ಮಹಿಳಾ ಚಾಲೆಂಜರ್ಸ್ ಸರಣಿಯ ಪಂದ್ಯಗಳ ವೀಕ್ಷಕವಿವರಣೆ ಕೇಳಬಹುದಾಗಿದೆ. -ಪಿಟಿಐ

Leave a Reply

Your email address will not be published. Required fields are marked *