ವಿಜಯವಾಣಿ ಸುದ್ದಿಜಾಲ ಧಾರವಾಡ
ಕೇಳುವ, ಕೇಳಿಸಿಕೊಳ್ಳುವ ವಿವೇಕ ಸಂಸ್ಕೃತಿಯನ್ನು ಸ್ವಭಾವವಾಗಿಸಿದ್ದು ಧಾರವಾಡ ಆಕಾಶವಾಣಿ. ಹಿರಿಯರ ಅನುಭಾವದಿಂದ, ಯುವ ಕಲಾವಿದರು ಕೇಳಿ ಪಡೆದ ಅನುಭವ ಬೆಳೆಯಲು, ಆಧಾರ ಮತ್ತು ವೇದಿಕೆ ಒದಗಿಸಿದೆ ಎಂದು ಗಾಯಕ ಪಂ.ಎಂ. ವೆಂಕಟೇಶಕುಮಾರ ಹೇಳಿದರು.
ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಆಯೋಜಿಸಿದ್ದ ಕೇಂದ್ರದ ಅಮೃತ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಧಾರವಾಡಕ್ಕೆ ವಿಶಿಷ್ಟ ಮೆರಗು ತಂದಿರುವ ಆಕಾಶವಾಣಿ ಶ್ರೀಸಾಮಾನ್ಯರ ಮಾಧ್ಯಮ. ಬಹುಜನರ ಹಿತ, ಬಹುಜನರ ಸುಖ ಸಾಧಿಸುವ ಧ್ಯೇಯದ ಆಕಾಶವಾಣಿ, ಗಾಯನ ಮತ್ತು ವಾದನ ಕ್ಷೇತ್ರದ ಕಲಾವಿದರ ನೇಮಕಾತಿಗೆ ಮುಂದಾಗಲಿ ಎಂದರು.
ಡಾ.ರಾಜನ್ ದೇಶಪಾಂಡೆ ಮಾತನಾಡಿ, ವರ್ಷಗಳು ಉರುಳಿದಂತೆ ಆಕಾಶವಾಣಿ ಸದೃಢವಾಗುತ್ತ ಸಾಗಿದೆ. ಸದಭಿರುಚಿಯ ಕಾರ್ಯಕ್ರಮ ಮತ್ತು ಸಹೃದಯ ಕೇಳುಗರನ್ನು ಹೊಂದಿರುವುದು ಹೆಮ್ಮೆಯ ವಿಷಯ ಎಂದರು.
ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿದರು. ಆಕಾಶವಾಣಿ ಧಾರವಾಡ ಕೇಂದ್ರದ ಉಪ ಮಹಾನಿರ್ದೇಶಕ ಕೆ.ಅರುಣ ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ರಾಮಚಂದ್ರ ಧೋಂಗಡೆ, ಪಂ. ಬಿ.ಎಸ್. ಮಠ, ವಿದುಷಿ ಅಕ್ಕಮಹಾದೇವಿಮಠ, ಜನಾಬ್ ಅಲೀಸಾಬ್ ಒಲ್ಲೆಪ್ಪನವರ, ಪಂ. ಶ್ರೀಕಾಂತ ಕುಲಕರ್ಣಿ, ಪಂ. ರುನಾಥ ನಾಕೋಡ, ವಿದುಷಿ ರೇಣುಕಾ ನಾಕೋಡ, ಪ್ರೊ. ವೀಣಾ ಶಾಂತೇಶ್ವರ, ಪ್ರೊ.ಐ.ಜಿ. ಸನದಿ, ನಿಲಯದ ಕಲಾವಿದರು, ಇತರರು ಇದ್ದರು.
ಮಂಜುಳಾ ಪುರಾಣಿಕ ಸ್ವಾಗತಿಸಿದರು. ಶರಣಬಸವ ಚೋಳಿನ ಪ್ರಸ್ತಾವಿಕವಾಗಿ ಮಾತನಾಡಿದರು. ಮಾಯಾ ರಾಮನ್ ನಿರೂಪಿಸಿದರು.
ಕೇಳುವ ವಿವೇಕ ಸಂಸ್ಕೃತಿಯನ್ನು ಸ್ವಭಾವವಾಗಿಸಿದ್ದು ಆಕಾಶವಾಣಿ

You Might Also Like
ವಿಪರೀತ ಬೆನ್ನು ನೋವು ಇದೆಯಾ? ಮಲಗುವಾಗ ನೀವಿದನ್ನು ಮಾಡಿದ್ರೆ ಸಾಕು ಉತ್ತಮ ಪರಿಹಾರ ಸಿಗುತ್ತೆ! Back Pain
Back Pain : ಬೆನ್ನುನೋವು ಅಥವಾ ಬೆನ್ನುಮೂಳೆಯಲ್ಲಿ ನೋವು ಇದ್ದರೆ, ನೀವು ಕೆಲವು ಆಸನಗಳನ್ನು ಮಾಡಿದರೆ…
ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips
Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…
ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd
bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…