ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಪ್ರತಿಭಟನೆ

1 Min Read
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಪ್ರತಿಭಟನೆ

ಮೈಸೂರು: ರಾಜ್ಯ ಸರ್ಕಾರ ಏರಿಕೆ ಮಾಡಿರುವ ಇಂಧನ ಬೆಲೆ ಇಳಿಸುವಂತೆ ಒತ್ತಾಯಿಸಿರುವ ಅಖಿಲ ಭಾರತೀಯ ಗ್ರಾಹಕ ಪಂಚಾಯತ್, ರಾಜ್ಯಪಾಲರು ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದೆ.
ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಚಾಮುಂಡಿಪುರಂನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ ಪಂಚಾಯತ್ ಮುಖಂಡರು, ರಾಜ್ಯಪಾಲರಿಗೆ ಇಂಧನ ಬೆಲೆ ಇಳಿಸಲು ರಾಜ್ಯಪಾಲರು ಮಧ್ಯ ಪ್ರವೇಶಿಸುವಂತೆ ಕೋರಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ.ಎಸ್.ಚಂದ್ರಶೇಖರ್ ಮಾತನಾಡಿ, ಲೋಕಸಭಾ ಚುನಾವಣೆ ನಂತರ ರಾಜ್ಯದ ವಾಹನ ಸವಾರರಿಗೆ ಕರ್ನಾಟಕ ರಾಜ್ಯ ಸರ್ಕಾರ ಪೆಟ್ರೋಲ್ 3 ರೂ., ಡೀಸೆಲ್ 3.50 ರೂ. ಹೆಚ್ಚಳ ಮೂಲಕ ಗ್ಯಾರಂಟಿ ಬರೆ ಹಾಕಿದೆ ಎಂದು ದೂರಿದರು.
ಅಂತಾರಾಷ್ಟ್ರೀಯ ತೈಲ ಬೆಲೆ ಕಂಪನಿಗಳು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೊಸ ಭಾರತೀಯ ತೈಲಬೆಲೆಗಳನ್ನು ಬಿಡುಗಡೆ ಮಾಡುತ್ತವೆ. ಇಲ್ಲಿ ಯಾವುದೇ ಏರಿಕೆಗಳು ಇಲ್ಲದಿದ್ದರೂ ರಾಜ್ಯ ಸರ್ಕಾರ ಏಕಾಏಕಿ ಬೆಲೆ ಏರಿಸುವ ಮೂಲಕ ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಕಿಡಿಕಾರಿದರು.
ಒಂದು ಕಡೆ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಇನ್ನೊಂದು ಕಡೆ ಗ್ರಾಹಕರ ಜೇಬಿಗೆ ಕತ್ತರಿ ಹಾಕೋ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದ್ದು ಇದು ಅವೈಜ್ಞಾನಿಕವಾಗಿದೆ. ಗ್ರಾಹಕರು ಬೀದಿಗಿಳಿಯುವ ಮುಂಚೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದರು
ಹಿರಿಯ ವಕೀಲರಾದ ರವೀಂದ್ರ, ಪಂಚಾಯತ್ ಮುಖಂಡರಾದ ಅಪೂರ್ವ ಸುರೇಶ್, ಸಚಿನ್‌ನಾಯಕ್, ಜಯರಾಮ್, ದಯಾನಂದ್, ಸುಚಿತ್ರ, ಆದರ್ಶ, ಚಕ್ರಪಾಣಿ, ಶ್ರೀನಿವಾಸ್, ಮೋಹನ್ ಕುಮಾರ್ ಇತರರು ಇದ್ದರು.

See also  ಕಾರ್ಮಿಕ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ
Share This Article