ರಾಜ್ಯಸಭೆ ಉಪಾಧ್ಯಕ್ಷ ಸ್ಥಾನ ಚುನಾವಣೆ: ವಿರೋಧ ಪಕ್ಷಗಳು ಕಣಕ್ಕಿಳಿಸಿರುವ ವಂದನಾ ಚವಾಣ್​​ ಯಾರು ಗೊತ್ತಾ?

ದೆಹಲಿ: ರಾಜ್ಯಸಭೆ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ವಿರೋಧ ಪಕ್ಷಗಳು ಎನ್​ಸಿಪಿ ಪಕ್ಷದ ರಾಜ್ಯಸಭಾ ಸದಸ್ಯೆ ವಂದನಾ ಚವಾಣ್​ ಅವರನ್ನು ಕಣಕ್ಕಿಳಿಸಿದೆ.

ಶರದ್​ ಪವಾರ್​ ಅವರ ನಾಯಕತ್ವದ ಎನ್​ಸಿಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವಂದನಾ ಅವರ ಗೆಲುವಿಗಾಗಿ ವಿರೋಧ ಪಕ್ಷಗಳು ಈಗಾಗಲೇ ಕಸರತ್ತು ಆರಂಭಿಸಿವೆ. ಈ ನಡುವೆ ಎನ್​ಡಿಎ ಕೂಡ ತನ್ನ ಅಭ್ಯರ್ಥಿ, ಜೆಡಿಯುನ ಹರಿವಂಶ್​ ನಾರಾಯಣ್​ ಅವರ ಗೆಲುವಿಗಾಗಿ ಸಕಲ ಪ್ರಯತ್ನ ನಡೆಸಿದೆ. ಬೆಳಗ್ಗಿನಿಂದಲೂ ಸಂಸತ್​ ಭವನದಲ್ಲಿ ನಿರಂತರ ಸಭೆಗಳು ನಡೆಯುತ್ತಿವೆ. ಫೋನ್​ಗಳು ರಿಂಗಣಿಸುತ್ತಿವೆ.

ಎನ್​ಡಿಎ ಅಭ್ಯರ್ಥಿ ಹರವಂಶ್​ ನಾರಾಯಣ್​ ಅವರ ಪರವಾಗಿ ಅಕಾಲಿ ದಳ ಮತ್ತು ಶಿವ ಸೇನೆ ಬೆಂಬಲ ನೀಡುತ್ತಿದೆ ಎನ್ನಲಾಗುತ್ತಿದೆ. ಆದರೆ, ಬಿಜೆಪಿಯ ಆಂತರಿಕ ಮೂಲಗಳು ಹೇಳುವ ಪ್ರಕಾರ ಈ ಎರಡೂ ಪಕ್ಷಗಳೂ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ. ಬಿಜೆಡಿಯ ನವೀನ್​ ಪಟ್ನಾಯಕ್​ ಅವರೂ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

ಯಾರಿವರು ವಂದನಾ ಚವಾಣ್?

  1. ವಂದನಾ ಮಹಾರಾಷ್ಟ್ರದ ಮಹಿಳೆ. ಆದ ಕಾರಣಕ್ಕೇ, ಸದ್ಯ ಎನ್​ಡಿಎ ಮೈತ್ರಿ ಕೂಟದಲ್ಲಿರುವ ಶಿವಸೇನೆಯು ವಂದನಾ ಅವರ ಪರವಾಗಿ ನಿಲ್ಲುವ ಚಿಂತನೆಯಲ್ಲಿದೆ.
  2. 2012ರಿಂದ ಅವರು ಎನ್​ಸಿಪಿ ಮೂಲಕ ರಾಜ್ಯಸಭೆಗೆ ಆಯ್ಕಯಾಗುತ್ತಿದ್ದಾರೆ.
  3. ಸದ್ಯ 57 ವರ್ಷ ವಯಸ್ಸಿನ ವಂದನಾ ಚವಾಣ್​ , ಮಹಾರಾಷ್ಟ್ರದ ಪುಣೆ ಮಹಾನಗರ ಪಾಲಿಕೆಗೆ 1992 ಮತ್ತು 2007ರ ವರೆಗೆ ಕಾರ್ಪೊರೇಟರ್​ ಆಗಿದ್ದರು.
  4. 1997-98ರ ಅವಧಿಗೆ ಅವರು ಪುಣೆಯ ಮಹಾನಗರ ಪಾಲಿಕೆಗೆ ಮೇಯರ್​ ಕೂಡ ಆಗಿದ್ದರು.