More

    ಇರಾನ್​ನಲ್ಲಿ ಉಕ್ರೇನ್​ ವಿಮಾನ ಪತನ ಪ್ರಕರಣ: ಸಿಬ್ಬಂದಿ ಸೇರಿ 170 ಪ್ರಯಾಣಿಕರ ದಾರುಣ ಸಾವು

    ದುಬೈ: 170 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಉಕ್ರೇನ್​ ವಿಮಾನವು ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಇರಾನ್​ನಲ್ಲಿ ಪತನಗೊಂಡಿರುವುದಾಗಿ ಬುಧವಾರ ಬೆಳಗ್ಗೆ ವರದಿಯಾಗಿತ್ತು. ಇದೀಗ ವಿಮಾನದಲ್ಲಿದ್ದ ಸಿಬ್ಬಂದಿ ಸೇರಿದಂತೆ 170 ಪ್ರಯಾಣಿಕರು ಸಾವಿಗೀಡಾಗಿರುವುದಾಗಿ ಉಕ್ರೇನಿಯನ್​ ಅಧಿಕಾರಿಗಳು ಅಧಿಕೃತವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಬೋಯಿಂಗ್ 737 ಹೆಸರಿನ​ ಉಕ್ರೇನಿಯನ್​ ವಿಮಾನ ಬುಧವಾರ ಬೆಳಗ್ಗೆ ಇರಾನ್​ನ ತೆಹ್ರಾನ್​ ಇಮಾಮ್​ ಖೊಮೆನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಟ್ಟು ಉಕ್ರೇನ್​ನ ಕೈವ್‌ ಬೋರಿಸ್‌ಪಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಏರ್​ಪೋರ್ಟ್​ ಬಳಿ ಪತನಗೊಂಡಿದೆ. ಸ್ಫೋಟಗೊಂಡ ಪರಿಣಾಮ ವಿಮಾನದಲ್ಲಿದ್ದವರೆಲ್ಲಾ ಮೃತರಾಗಿರುವುದುದಾಗಿ ಉಕ್ರೇನ್​ ವಿದೇಶಾಂಗ ಸಚಿವಾಲಯದ ಅಧಿಕಾರಿ ಕೀವ್​ ತಿಳಿಸಿದ್ದಾರೆ.

    ಬೆಂಕಿಯ ಜ್ವಾಲೆ ಅಧಿಕವಾಗಿದ್ದರಿಂದ ಯಾವುದೇ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಘಟನಾ ಸ್ಥಳದಲ್ಲಿ 22 ಆಂಬುಲೆನ್ಸ್​, 4 ಬಸ್​ ಆಂಬುಲೆನ್ಸ್​ ಮತ್ತು ಒಂದು ಹೆಲಿಕಾಪ್ಟರ್​ ನಿಯೋಜನೆಗೊಂಡಿದ್ದವು. ಆದರೂ ಯಾರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಇರಾನ್​ನ ತುರ್ತುಸೇವಾ ಮುಖ್ಯಸ್ಥ ಪಿರ್ಹೊಸ್ಸೈನ್​ ಕೌಲಿವ್ಯಂಡ್​ ಮರುಕ ವ್ಯಕ್ತಪಡಿಸಿದ್ದಾರೆ.

    ಏರ್​ ಟ್ರ್ಯಾಕಿಂಗ್​ ಸರ್ವೀಸ್​ ಫ್ಲೈಟ್​ ರಾಡರ್​ 24 ಪ್ರಕಾರ ಪತನಗೊಂಡ ವಿಮಾನ ಪಿಎಸ್​ 752 ಆಗಿದ್ದು, ಉಕ್ರೇನ್​ನ ಕೀವ್​ಗೆ ತೆರಳುತ್ತಿತ್ತು.​ ವಿಮಾನವು ಮೂರು ವರ್ಷ ಹಳೆಯದು ಮತ್ತು ಬೋಯಿಂಗ್​ 737 ಎನ್​ಜಿ ಆಗಿದೆ ಎಂದು ತಿಳಿಸಿದೆ.


    ಬೆಳಗಿನ ಪ್ರಾಥಮಿಕ ವರದಿಯ ಪ್ರಕಾರ ಸಿಬ್ಬಂದಿ ಸೇರಿ ವಿಮಾನದಲ್ಲಿ 180 ಪ್ರಯಾಣಿಕರಿದ್ದರು ಎನ್ನಲಾಗಿತ್ತು. ಆದರೆ, ಇದೀಗ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ವಿಮಾನದಲ್ಲಿ ಸಿಬ್ಬಂದಿ ಸೇರಿ 170 ಪ್ರಯಾಣಿಕರಿದ್ದು, ಎಲ್ಲರು ಮೃತರಾಗಿದ್ದಾರೆ. (ಏಜೆನ್ಸೀಸ್​)

    ಸಿಬ್ಬಂದಿ ಸೇರಿ 180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಇರಾನ್​ನಲ್ಲಿ ಪತನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts