Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಥಾಯ್ಲೆಂಡ್​ ಗುಹೆಯಲ್ಲಿ ಸಿಲುಕಿದ್ದ ಕೋಚ್​ ಸೇರಿ ಎಲ್ಲ ಬಾಲಕರ ರಕ್ಷಣೆ

Tuesday, 10.07.2018, 5:31 PM       No Comments

ಮೈ ಸಾಯ್​ (ಥಾಯ್ಲೆಂಡ್​): ಪ್ರವಾಹ ಪೀಡಿತ ಗುಹೆಯಲ್ಲಿ ಸಿಲುಕಿದ್ದ ಎಲ್ಲ 12 ಬಾಲಕರು ಮತ್ತು ಕೋಚ್​ ಅನ್ನು ಗುಹೆಯಿಂದ ಹೊರ ತರುವಲ್ಲಿ ರಕ್ಷಣಾ ಸಿಬ್ಬಂದಿ ಇಂದು ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಕಳೆದ ಎರಡು ವಾರಗಳಿಂದ ವಿಶ್ವಾದ್ಯಂತ ಮನೆ ಮಾಡಿದ್ದ ದುಗುಡ ಅಂತ್ಯಗೊಂಡಿದೆ.

ಎಲ್ಲರನ್ನೂ ಇಂದು ಹೊರಗೆ ಕರೆತರಲಾಗುವುದು ಎಂದು ಥಾಯ್ಲೆಂಡ್​ನ ರಕ್ಷಣಾ ಕಾರ್ಯಾಚರಣೆಯ ಮುಖ್ಯಸ್ಥರು ಮಂಗಳವಾರ ನೀಡಿದ್ದ ಹೇಳಿಕೆ ಕೊನೆಗೂ ನಿಜವಾಗಿದೆ.

ಕಳೆದ ಎರಡು ವಾರಗಳ ಹಿಂದೆ 12 ಮಂದಿ ಫುಟ್ಬಾಲ್​ ಆಟಗಾರ ಬಾಲಕರು ಮತ್ತು ತಂಡದ ಕೋಚ್​ ಗುಹೆಯಲ್ಲಿ ಸಿಲುಕಿದ್ದರು. ಅವರ ಸುರಕ್ಷಿತ ವಾಪಸಾತಿಗಾಗಿ ಇಡೀ ವಿಶ್ವವೇ ಹಾರೈಸುತ್ತಿತ್ತು. ಈಗ ಆ ಹಾರೈಕೆಗಳು ಫಲ ನೀಡಿದ್ದು ಎಲ್ಲರೂ ಹೊರಬಂದಿದ್ದಾರೆ.  ರಕ್ಷಣಾ ಕಾರ್ಯಾಚರಣೆ ಅಂತ್ಯ ಕಂಡಿದೆ.

ಇಂದು ಆರಂಭವಾದ ಮೂರನೇ ದಿನದ ರಕ್ಷಣಾ ಕಾರ್ಯಾಚರಣೆಯಲ್ಲಿ ಆರಂಭದಲ್ಲಿ ಓರ್ವ ಬಾಲಕನನ್ನು ಸ್ಟ್ರೆಚರ್​ ಮೂಲಕ ಹೊರತರಲಾಯಿತು. ಇದಾದ ಕೆಲವೇ ಗಂಟೆಗಳಲ್ಲಿ ಮತ್ತೊಬ್ಬ ಬಾಲಕನ್ನೂ ರಕ್ಷಿಸಲಾಯಿತು. ಅದಾದ ಕೆಲವೇ ಹೊತ್ತಿನಲ್ಲಿ ಕೋಚ್​ ಸೇರಿ ಎಲ್ಲರನ್ನೂ ರಕ್ಷಿಸಲಾಗಿದೆ.

ಭಾನುವಾರ ಆರಂಭವಾದ ರಕ್ಷಣಾ ಕಾರ್ಯಾಚರಣೆಯಲ್ಲಿ ಸೋಮವಾರ ಸಂಜೆಯ ಹೊತ್ತಿಗೆ 8 ಮಂದಿಯನ್ನು ರಕ್ಷಿಸಲಾಗಿತ್ತು. ಭಾನುವಾರ ನಾಲ್ವರು , ಸೋಮವಾರ ನಾಲ್ವರನ್ನು ಗುಹೆಯಿಂದ ಹೊರಗೆ ತರಲಾಗಿತ್ತು.

ಇದನ್ನೂ ಓದಿ

Leave a Reply

Your email address will not be published. Required fields are marked *

Back To Top