ಸಿನಿಮಾ

ಅಳ್ನಾವರದಲ್ಲಿ ಆಲಿಕಲ್ಲು ಮಳೆ!

ಅಳ್ನಾವರ: ಪಟ್ಟಣದಲ್ಲಿ ಸೋಮವಾರ ಸಂಜೆ ಕೆಲ ಸಮಯ ಆಲಿಕಲ್ಲು ಮಳೆ ಸುರಿದರೂ ಪ್ರಯೋಜನಕ್ಕೆ ಬಾರದಂತಾಗಿದೆ.
ಕಳೆದ ಎರಡು ತಿಂಗಳನಿಂದ ಬಿಸಿಲಿನ ತಾಪಕ್ಕೆ ಬೇಸತ್ತು ಮಳೆ ಬಿಳುತ್ತಿದಂತೆ ಖುಷಿ ಪಡುತ್ತಿದ ಸಾರ್ವಜನಿಕರಿಗೆ ಅಲ್ಪ ಸಮಯದಲ್ಲೇ ಸ್ತಬ್ಧಗೊಂಡ ಮಳೆ ಜನರ ಬೇಸರಕ್ಕೆ ಕಾರಣವಾಯಿತು.


ತಾಲೂಕಿನಲ್ಲಿ ಈಗಾಗಲೇ ನಡೆಯಬೇಕಿದ್ದ ಕೃಷಿ ಚಟುವಟಿಕೆಗಳು ವಿಳಂಬವಾಗಿವೆ. ಕೆರೆ, ಹಳ್ಳ ಬತ್ತಿ ಹೋಗಿ ಬೋರ್‌ವೆಲ್ಗಳು ಬರಿದಾಗಿವೆ. ಲಾವಣಿ ಮಾಡಿ ಕಬ್ಬು ಬೆಳೆದ ರೈತ ನೀರು ಇಲ್ಲದೆ ಕಂಗಾಲಾಗಿದ್ದಾನೆ.

ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ. ಕೂಲಿಕಾರರು ಕೆಲಸವಿಲ್ಲದೆ ವಲಸೆ ಹೋಗುತ್ತಿದ್ದಾರೆ. ಇನ್ನು ಕೆಲವು ದಿನಗಳು ಮಳೆ ವಿಳಂಬಗೊಂಡರೆ ಬರ ಪರಿಸ್ಥಿತಿ ಎದುರಾಗುವ ಆತಂಕ ರೈತರಲ್ಲಿದೆ.

Latest Posts

ಲೈಫ್‌ಸ್ಟೈಲ್