ಪಂಜಾಬಿ ಹಾಡಿಗೆ ಆಲಿಯಾ ಡಾನ್ಸ್

ಬಾಲಿವುಡ್​ನ ಬಹುಬೇಡಿಕೆಯ ನಟಿ ಆಲಿಯಾ ಭಟ್ ಹೊಸದನ್ನು ಮಾಡುವ ವಿಚಾರದಲ್ಲಿ ಸದಾ ಮುಂದಿರುತ್ತಾರೆ. ನಟನೆಯೊಂದಿಗೆ ಹಾಡುವುದಕ್ಕೂ ಸೈ ಎನಿಸಿಕೊಂಡಿರುವ ಆಲಿಯಾ ಈಗ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇನೆಂದರೆ, ಮೊದಲ ಬಾರಿ ಪಂಜಾಬಿ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ‘ಪ್ರದಾ’ ಎಂಬ ಹಾಡಿನ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.

ಬಿಡುಗಡೆಯಾದ ಕೆಲವಢೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ. ಜನಪ್ರಿಯ ಪಂಜಾಬಿ ಗೀತೆ ‘ಲಂಬೆರ್ಗಿನಿ…’ ಖ್ಯಾತಿಯ ದಿ ದೂರ್ಬಿನ್ ಜತೆ ಆಲಿಯಾ ಆಕರ್ಷಕ ಲುಕ್ ಮತ್ತು ಡಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ದಿ ದೂರ್ಬಿನ್ ಮತ್ತು ಶ್ರೇಯಾ ಶರ್ಮಾ ಧ್ವನಿಯಲ್ಲಿ ಈ ಪಂಜಾಬಿ ಡುಯೆಟ್ ಗೀತೆ ಮೂಡಿ ಬಂದಿದೆ.

ಸಿನಿಮಾ ವಿಚಾರಕ್ಕೆ ಬಂದರೆ ಆಲಿಯಾ ಈಗ ಆಯನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರ’ದಲ್ಲಿ ಬಿಜಿಯಾಗಿದ್ದಾರೆ. ಅಮಿತಾಬ್ ಬಚ್ಚನ್, ರಣ್​ಬೀರ್ ಕಪೂರ್, ನಾಗಾರ್ಜುನ ಅಕ್ಕಿನೇನಿ, ಮೌನಿ ರಾಯ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರ ಡಿಸೆಂಬರ್​ನಲ್ಲಿ ತೆರೆ ಕಾಣಲಿದೆ. ಇದಲ್ಲದೆ ತಂದೆ ಮಹೇಶ್ ಭಟ್ ಆಕ್ಷನ್-ಕಟ್ ಹೇಳಲಿರುವ ‘ಸಡಕ್ 2’ ಹಾಗೂ ಕರಣ್ ಜೋಹರ್ ನಿರ್ದೇಶನದ ‘ತಕ್ತ್’ ಚಿತ್ರಗಳು ಆಲಿಯಾ ಕೈಯಲ್ಲಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *