ಮುಂಬೈ: ಫ್ಯಾಷನ್ ಎಂದರೆ ಮತ್ತೊಂದು ಹೆಸರೇ ಸಿನಿಮಾ ಜಗತ್ತು. ಇಲ್ಲಿ ಧರಿಸುವ ಉಡುಗೆ ತೊಡುಗೆಗಳೆಲ್ಲವೂ ಫ್ಯಾಷನ್. ಇದೇ ಒಮ್ಮೊಮ್ಮೆ ಅತಿರೇಕಕ್ಕೇ ಹೋಗುವುದು ಉಂಟು.
ಬಾಲಿವುಡ್ ನಟಿಯರು ಧರಿಸುವ ಬಟ್ಟೆಗಳು ಕೆಲವೊಮ್ಮೆ ಪ್ರಶಂಸೆಗೆ ಪಾತ್ರವಾದರೆ. ಮತ್ತೊಮ್ಮೆ ಟೀಕೆಗೆ ಗುರಿಯಾಗುತ್ತಲೇ ಇರುತ್ತವೆ. ಇಂತಹ ಸಾಲಿನಲ್ಲಿ ಇತ್ತೀಚೆಗೆ ಹಸೆಮಣೆಯೇರಿದ ನಟಿ ಆಲಿಯಾ ಭಟ್ ಕೂಡ ಸೇರಿದ್ದಾರೆ.ರಣಬೀರ್ ಕಪೂರ್ ಜತೆ ವಿವಾಹ ಮಾಡಿಕೊಂಡ ಕೆಲವೇ ದಿನದಲ್ಲಿ ಆಲಿಯಾ ಭಟ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಕಾರಣ ಏನಂತೀರಾ… ಅದೇ ಆಲಿಯಾ ಭಟ್ ಧರಿಸಿರುವ ಬಟ್ಟೆ. ಸಹಜವಾಗಿ ಅಭಿಮಾನಿ ಬಳಗವನ್ನು ಹೆಚ್ಚು ಹೊಂದಿರುವ ನಟಿ ಆಲಿಯಾಭಟ್ ಹೊರಬಂದಲ್ಲೆಲ್ಲಾ ಅವರನ್ನು ವೀಕ್ಷಿಸುವವರ ಸಂಖ್ಯೆಯೂ ಹೆಚ್ಚಿದೆ. ಈ ಬಾರಿ ಅವರು ಧರಿಸಿರುವ ಉಡುಗೆಯಿಂದ ಭಾರೀಟ್ರೋಲ್ ಆಗಿದ್ದಾರೆ.
ಆದಿತ್ಯ ಸೀಲ್ ಮತ್ತು ಅನುಷ್ಕಾ ರಂಜನ್ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಆಲಿಯಾ ಭಟ್ ಹಸಿರು ಲೆಹೆಂಗಾ ಧರಿಸಿದ್ದರು. ಆದರೆ ಮೇಲುಡುಪಿನಿಂದಾಗಿ ಭಾರೀ ಟೀಕೆಯನ್ನೇ ಎದುರಿಸುವಂತಾಗಿದೆ.
ಓರ್ವ ಟ್ವಿಟಿಗ ಇದು ಈ ವರ್ಷದ ಕಳಪೆ ಫ್ಯಾಷನ್ ಎಂದು ಹೇಳಿದ್ದು, ಸ್ವಲ್ಪವೂ ಚೆನ್ನಾಗಿಲ್ಲ, ನೀವು ಸಂಪ್ರದಾಯದಂತೆ ಬಟ್ಟೆ ಧರಿಸಬೇಕಿತ್ತು ಎಂಬೆಲ್ಲಾ ಕಾಮೆಂಟ್ ನೀಡಿದ್ದಾರೆ. ಮತ್ತೋರ್ವ ಟ್ವಿಟ್ಟಿಗ ಮತ್ತೋರ್ವ ಊರ್ಫಿ ಜಾವೆದ್ ಎಂದು ಹೇಳಿದ್ದು, ಆಕೆಯನ್ನೇ ನಕಲು ಮಾಡಿದ್ದಾರೆ ಎಂದಿದ್ದಾರೆ.
ಇನ್ನು ಈ ಸಮಾರಂಭದಲ್ಲಿ ಅಲಿಗೊನಿ, ರವೀನಾ ಟಂಡನ್, ಭಾಗ್ಯ ಶ್ರೀ, ಭೂಮಿ ಪಡ್ನೇಕರ್, ಅನು ಮಲ್ಲಿಕ್ ಸೇರಿದಂತೆ ಹಲವು ಬಾಲಿವುಡ್ ಖ್ಯಾತನಾಮರು ಪಾಲ್ಗೊಂಡಿದ್ದರು.(ಏಜೆನ್ಸೀಸ್)