ರಾಜಮೌಳಿ ಮೇಲೆ ಅಸಮಾಧಾನ: ಗಾಸಿಪ್​ಗೆ ತುಪ್ಪ ಸುರಿದ ನಟಿ ಆಲಿಯಾ ಭಟ್

ಒಂದು ಕಡೆ ಭಾರತ ದೇಶದ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ಒಬ್ಬರಾದ ಎಸ್ ಎಸ್.ರಾಜಮೌಳಿ. ಮತ್ತೊಂದು ಕಡೆ ಇಡೀ ದೇಶ ಮೆಚ್ಚಿದ ಗುಳಿ ಕೆನ್ನೆ ಹಾಗೂ ತುಂಬಾ ಮಲ್ಟಿ ಟ್ಯಾಲೆಂಟ್ಡ್ ನಟಿ ಆಲಿಯಾ ಭಟ್. ‘ಬಾಹುಬಲಿಎಂಬ ಒಂದು ಸಿನಿಮಾ ನಿರ್ದೇಶಕ ಎಸ್ ಎಸ್.ರಾಜಮೌಳಿಯನ್ನು ಇಡೀ ದೇಶವೇ ಫಾಲೋ ಮಾಡುವಂತೆ ಮಾಡಿತು. ಹಾಗೆಯೇ, ತಾನು ಮಾಡಿದ ಪ್ರತಿ ಸಿನಿಮಾ ಹಿಟ್ ಆಗುವ ಮೂಲಕ ಸೂಪರ್ ಹಿಟ್ ನಟಿ ಎಂದೇ ಖ್ಯಾತಿ ಪಡೆದಿದ್ದಾರೆ ಆಲಿಯಾ ಭಟ್. ಇನ್ನು, ಎಸ್ ಎಸ್.ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದಾರೆ. ‘RRR’ ಸಿನಿಮಾಗೆ ವಿಶ್ವಾದ್ಯಂತ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದಲ್ಲದೇ, ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಎಲ್ಲೆಡೆ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಹೀಗಾಗಿ, ಚಿತ್ರತಂಡ ಖುಷಿಯಾಗಿದ್ದು, ರಾಜಮೌಳಿ ಅವರ 5 ವರ್ಷಗಳ ಕಷ್ಟಕ್ಕೆ ಫಲ ದೊರಕಿದಂತಿದೆ. ಆದರೆ, ಎಸ್ ಎಸ್.ರಾಜಮೌಳಿ ಮತ್ತು ಆಲಿಯಾ ಭಟ್ ಅವರ ನಡುವೆ ಮಾತ್ರ ಏನೋ ಅಸಮಾಧಾನ ಇದ್ದಂತಿದೆ. ಹೌದು, ಈ ಚಿತ್ರತಂಡದ ಬಗ್ಗೆ ಸದ್ಯ ಹಲವು ಗುಸುಗುಸುಗಳು ಕೇಳಿಬರುತ್ತಿವೆ. ‘ಆರ್​ಆರ್​ಆರ್’ ಚಿತ್ರದಲ್ಲಿ ನಟಿ ಆಲಿಯಾ ಭಟ್ ನಟಿಸುತ್ತಾರೆ ಎಂದು ಘೋಷಣೆಯಾದ ನಂತರವೇ ಉತ್ತರ ಭಾರತದಲ್ಲಿ ಈ ಚಿತ್ರಕ್ಕೆ ಮೈಲೇಜ್ ಹೆಚ್ಚಿತ್ತು. ಆದರೆ, ‘ಆರ್​ಆರ್​ಆರ್’ ಚಿತ್ರದಲ್ಲಿ ನಟಿ ಆಲಿಯಾಗೆ ಹೇಳಿಕೊಳ್ಳುವಂತಹ ಪಾತ್ರ ಸಿಕ್ಕಿಲ್ಲ ಎಂಬ ಸುದ್ದಿಗಳು ಈಗಲೂ ಕೇಳಿಬರುತ್ತಿವೆ. ಒಂದು ದೀರ್ಘ ಅವಧಿಯ ಚಿತ್ರದಲ್ಲಿ ನಟಿ ಆಲಿಯಾಗೆ ಇದ್ದ ಸ್ಕ್ರೀನ್ ಸ್ಪೇಸ್ ಕೇವಲ 8 ನಿಮಿಷಗಳಂತೆ. ಇನ್ನು, ಸಿನಿಮಾ ರಿಲೀಸ್ ಆದ ಬಳಿಕ ಚಿತ್ರವನ್ನು ನೋಡಿದ ಆಲಿಯಾಗೆ ಇದರಿಂದ ಬಹಳಷ್ಟು ಅಸಮಾಧಾನವಾಗಿದೆ ಎನ್ನಲಾಗಿದೆ. ‘
ಆದರೆ, ಈ ಮಾತುಗಳು ಸುಳ್ಳು ಸುದ್ದಿಗಳು ಎನ್ನಲಾಗಿತ್ತು. ಬಟ್, ಈಗ ನಟಿ ಆಲಿಯಾ ಅವರ ಅಸಮಾಧಾನ ಎಲ್ಲರಿಗೂ ಎದ್ದು ಕಾಣುವಂತಿದೆ. ಕಾರಣ, ನಟಿ ಅವರ ಇನ್​ಸ್ಟಾಗ್ರಾಂನಲ್ಲಿ ‘ಆರ್​ಆರ್​ಆರ್’ ಕುರಿತು ಹಲವು ಪೋಸ್ಟ್​ಗಳನ್ನೂ ಮಾಡಿದ್ದರು. ಈಗ ಅದರಲ್ಲಿ ಕೆಲವು ಪೋಸ್ಟ್​ಗಳನ್ನ ಡಿಲೀಟ್ ಮಾಡಿದ್ದಾರೆ ಎಂದು ಕೆಲ ವರದಿಗಳು ಹೇಳುತ್ತಿವೆ. ಅಷ್ಟೇ ಅಲ್ಲ, ಇಡೀ ದೇಶವೆ ತನ್ನನ್ನು ಫಾಲೋ ಮಾಡುವಂತೆ ಮಾಡಿದ ರಾಜಮೌಳಿಯನ್ನು ನಟಿ ಆಲಿಯಾ ಭಟ್ ಇನ್​ಸ್ಟಾಗ್ರಾಂನಲ್ಲಿ ಅನ್​ಫಾಲೋ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ನಟಿ ಆಲಿಯಾ ಭಟ್ ಅವರು ಚಿತ್ರದ ನಟರಾದ ಜ್ಯೂ.ಎನ್​ಟಿಆರ್ ಹಾಗೂ ರಾಮ್ ಚರಣ್​ರನ್ನು ಮಾತ್ರ ಇನ್ನೂ ಫಾಲೋ ಮಾಡುತ್ತಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.
ಈ ಮೂಲಕ ಇಷ್ಟು ದಿನ ಆಲಿಯಾ ಅವರಿಗೆ ರಾಜಮೌಳಿ ಅವರ ಮೇಲಿದ್ದ ಅಸಮಾಧಾನ ಎಂಬ ಗಾಸಿಪ್​ಗೆ ಅವರೇ ತುಪ್ಪ ಸುರಿದಂತಿದೆ. ಜತೆಗೆ, ನಟಿ ಆಲಿಯಾ ಭಟ್ ಚಿತ್ರದ ರಿಲೀಸ್​ಗೂ ಮುನ್ನ ಚಿತ್ರತಂಡದೊಂದಿಗೆ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿ ಭಾಗಿಯಾಗಿದ್ದರೂ, ಚಿತ್ರದ ರಿಲೀಸ್ ನಂತರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಹೌದು, ಸಿನಿಮಾ ರಿಲೀಸ್ ಆದ ನಂತರ ನಡೆದ ದೊಡ್ಡ ಕಾರ್ಯಕ್ರಮವೊಂದರಲ್ಲಿ ಮಾತ್ರ ನಟಿ ಆಲಿಯಾ ಕಾಣಿಸಿಕೊಂಡಿದ್ದರು. ಅದರ ಹೊರತಾಗಿ ಅವರು ಮತ್ತೆಲ್ಲೂ ಕಾಣಿಸಿಕೊಂಡಿಲ್ಲ. ಇನ್ನು, ಸದ್ಯ ನಟಿ ಆಲಿಯಾ ಇನ್​ಸ್ಟಾಗ್ರಾಂ ಫೀಡ್​ನಲ್ಲಿ ಗಂಗೂಬಾಯಿ ಕಾಠಿಯಾವಾಡಿಚಿತ್ರದ ಪ್ರಚಾರ ಹಾಗೂ ಆ ಚಿತ್ರದ ಕುರಿತ ಪೋಸ್ಟ್​ಗಳು ಹೆಚ್ಚಿವೆ.
ಆರ್​ಆರ್​ಆರ್’ ಬಗ್ಗೆ ಇರುವುದು ತೀರಾ ಬೆರಳಣಿಕೆಯಷ್ಟು ಪೋಸ್ಟ್​ಗಳು ಮಾತ್ರ. ಮತ್ತೊಂದೆಡೆ, ನಟಿ ಆಲಿಯಾ ಭಟ್ ಅವರ ಮುಂಬರುವ ‘ಬ್ರಹ್ಮಾಸ್ತ್ರ’ ಸಿನಿಮಾದ ಶೂಟಿಂಗ್ ಅಂತಿಮ ಹಂತದಲ್ಲರುವ ಕಾರಣ, ಇದರಿಂದ ಅವರು ಬ್ಯುಸಿಯಾಗಿರಬಹುದು ಎಂದು ಹಲವರು ಹೇಳುತ್ತಿದ್ದಾರೆ. ಹೀಗಾಗಿ, ಆಲಿಯಾ ಅವರು ‘ಆರ್​ಆರ್​ಆರ್’ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಅದೇನೇ ಇರಲಿ, ಕೇವಲ ಮೂರು ದಿನಗಳಲ್ಲಿ 500 ಕೋಟಿ ಗಳಿಸಿರುವ ‘ಆರ್​ಆರ್​ಆರ್’ ಸಿನಿಮಾ ಮಾತ್ರ ಗಲ್ಲಾಪೆಟ್ಟಿಗೆಯನ್ನು ಇನ್ನೂ ಉಕ್ಕಿ ಹರಿತುವಂತೆ ಮಾಡುತ್ತಾ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿದೆ.

ಪುನೀತ್ ಹೆಸರಲ್ಲಿ ಪ್ರಕಾಶ್ ರಾಜ್ ಮಾಡುತ್ತಿರುವುದೇನು?

Contents
ಒಂದು ಕಡೆ ಭಾರತ ದೇಶದ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ಒಬ್ಬರಾದ ಎಸ್ ಎಸ್.ರಾಜಮೌಳಿ. ಮತ್ತೊಂದು ಕಡೆ ಇಡೀ ದೇಶ ಮೆಚ್ಚಿದ ಗುಳಿ ಕೆನ್ನೆ ಹಾಗೂ ತುಂಬಾ ಮಲ್ಟಿ ಟ್ಯಾಲೆಂಟ್ಡ್ ನಟಿ ಆಲಿಯಾ ಭಟ್. ‘ಬಾಹುಬಲಿ‘ ಎಂಬ ಒಂದು ಸಿನಿಮಾ ನಿರ್ದೇಶಕ ಎಸ್ ಎಸ್.ರಾಜಮೌಳಿಯನ್ನು ಇಡೀ ದೇಶವೇ ಫಾಲೋ ಮಾಡುವಂತೆ ಮಾಡಿತು. ಹಾಗೆಯೇ, ತಾನು ಮಾಡಿದ ಪ್ರತಿ ಸಿನಿಮಾ ಹಿಟ್ ಆಗುವ ಮೂಲಕ ಸೂಪರ್ ಹಿಟ್ ನಟಿ ಎಂದೇ ಖ್ಯಾತಿ ಪಡೆದಿದ್ದಾರೆ ಆಲಿಯಾ ಭಟ್. ಇನ್ನು, ಎಸ್ ಎಸ್.ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್‘ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ‘RRR’ ಸಿನಿಮಾಗೆ ವಿಶ್ವಾದ್ಯಂತ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದಲ್ಲದೇ, ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಎಲ್ಲೆಡೆ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.ಹೀಗಾಗಿ, ಚಿತ್ರತಂಡ ಖುಷಿಯಾಗಿದ್ದು, ರಾಜಮೌಳಿ ಅವರ 5 ವರ್ಷಗಳ ಕಷ್ಟಕ್ಕೆ ಫಲ ದೊರಕಿದಂತಿದೆ. ಆದರೆ, ಎಸ್ ಎಸ್.ರಾಜಮೌಳಿ ಮತ್ತು ಆಲಿಯಾ ಭಟ್ ಅವರ ನಡುವೆ ಮಾತ್ರ ಏನೋ ಅಸಮಾಧಾನ ಇದ್ದಂತಿದೆ. ಹೌದು, ಈ ಚಿತ್ರತಂಡದ ಬಗ್ಗೆ ಸದ್ಯ ಹಲವು ಗುಸುಗುಸುಗಳು ಕೇಳಿಬರುತ್ತಿವೆ. ‘ಆರ್​ಆರ್​ಆರ್’ ಚಿತ್ರದಲ್ಲಿ ನಟಿ ಆಲಿಯಾ ಭಟ್ ನಟಿಸುತ್ತಾರೆ ಎಂದು ಘೋಷಣೆಯಾದ ನಂತರವೇ ಉತ್ತರ ಭಾರತದಲ್ಲಿ ಈ ಚಿತ್ರಕ್ಕೆ ಮೈಲೇಜ್ ಹೆಚ್ಚಿತ್ತು. ಆದರೆ, ‘ಆರ್​ಆರ್​ಆರ್’ ಚಿತ್ರದಲ್ಲಿ ನಟಿ ಆಲಿಯಾಗೆ ಹೇಳಿಕೊಳ್ಳುವಂತಹ ಪಾತ್ರ ಸಿಕ್ಕಿಲ್ಲ ಎಂಬ ಸುದ್ದಿಗಳು ಈಗಲೂ ಕೇಳಿಬರುತ್ತಿವೆ. ಒಂದು ದೀರ್ಘ ಅವಧಿಯ ಚಿತ್ರದಲ್ಲಿ ನಟಿ ಆಲಿಯಾಗೆ ಇದ್ದ ಸ್ಕ್ರೀನ್ ಸ್ಪೇಸ್ ಕೇವಲ 8 ನಿಮಿಷಗಳಂತೆ. ಇನ್ನು, ಸಿನಿಮಾ ರಿಲೀಸ್ ಆದ ಬಳಿಕ ಚಿತ್ರವನ್ನು ನೋಡಿದ ಆಲಿಯಾಗೆ ಇದರಿಂದ ಬಹಳಷ್ಟು ಅಸಮಾಧಾನವಾಗಿದೆ ಎನ್ನಲಾಗಿದೆ. ‘ಆದರೆ, ಈ ಮಾತುಗಳು ಸುಳ್ಳು ಸುದ್ದಿಗಳು ಎನ್ನಲಾಗಿತ್ತು. ಬಟ್, ಈಗ ನಟಿ ಆಲಿಯಾ ಅವರ ಅಸಮಾಧಾನ ಎಲ್ಲರಿಗೂ ಎದ್ದು ಕಾಣುವಂತಿದೆ. ಕಾರಣ, ನಟಿ ಅವರ ಇನ್​ಸ್ಟಾಗ್ರಾಂನಲ್ಲಿ ‘ಆರ್​ಆರ್​ಆರ್’ ಕುರಿತು ಹಲವು ಪೋಸ್ಟ್​ಗಳನ್ನೂ ಮಾಡಿದ್ದರು. ಈಗ ಅದರಲ್ಲಿ ಕೆಲವು ಪೋಸ್ಟ್​ಗಳನ್ನ ಡಿಲೀಟ್ ಮಾಡಿದ್ದಾರೆ ಎಂದು ಕೆಲ ವರದಿಗಳು ಹೇಳುತ್ತಿವೆ. ಅಷ್ಟೇ ಅಲ್ಲ, ಇಡೀ ದೇಶವೆ ತನ್ನನ್ನು ಫಾಲೋ ಮಾಡುವಂತೆ ಮಾಡಿದ ರಾಜಮೌಳಿಯನ್ನು ನಟಿ ಆಲಿಯಾ ಭಟ್ ಇನ್​ಸ್ಟಾಗ್ರಾಂನಲ್ಲಿ ಅನ್​ಫಾಲೋ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ನಟಿ ಆಲಿಯಾ ಭಟ್ ಅವರು ಚಿತ್ರದ ನಟರಾದ ಜ್ಯೂ.ಎನ್​ಟಿಆರ್ ಹಾಗೂ ರಾಮ್ ಚರಣ್​ರನ್ನು ಮಾತ್ರ ಇನ್ನೂ ಫಾಲೋ ಮಾಡುತ್ತಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.ಈ ಮೂಲಕ ಇಷ್ಟು ದಿನ ಆಲಿಯಾ ಅವರಿಗೆ ರಾಜಮೌಳಿ ಅವರ ಮೇಲಿದ್ದ ಅಸಮಾಧಾನ ಎಂಬ ಗಾಸಿಪ್​ಗೆ ಅವರೇ ತುಪ್ಪ ಸುರಿದಂತಿದೆ. ಜತೆಗೆ, ನಟಿ ಆಲಿಯಾ ಭಟ್ ಚಿತ್ರದ ರಿಲೀಸ್​ಗೂ ಮುನ್ನ ಚಿತ್ರತಂಡದೊಂದಿಗೆ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿ ಭಾಗಿಯಾಗಿದ್ದರೂ, ಚಿತ್ರದ ರಿಲೀಸ್ ನಂತರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಹೌದು, ಸಿನಿಮಾ ರಿಲೀಸ್ ಆದ ನಂತರ ನಡೆದ ದೊಡ್ಡ ಕಾರ್ಯಕ್ರಮವೊಂದರಲ್ಲಿ ಮಾತ್ರ ನಟಿ ಆಲಿಯಾ ಕಾಣಿಸಿಕೊಂಡಿದ್ದರು. ಅದರ ಹೊರತಾಗಿ ಅವರು ಮತ್ತೆಲ್ಲೂ ಕಾಣಿಸಿಕೊಂಡಿಲ್ಲ. ಇನ್ನು, ಸದ್ಯ ನಟಿ ಆಲಿಯಾ ಇನ್​ಸ್ಟಾಗ್ರಾಂ ಫೀಡ್​ನಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ‘ ಚಿತ್ರದ ಪ್ರಚಾರ ಹಾಗೂ ಆ ಚಿತ್ರದ ಕುರಿತ ಪೋಸ್ಟ್​ಗಳು ಹೆಚ್ಚಿವೆ.‘ಆರ್​ಆರ್​ಆರ್’ ಬಗ್ಗೆ ಇರುವುದು ತೀರಾ ಬೆರಳಣಿಕೆಯಷ್ಟು ಪೋಸ್ಟ್​ಗಳು ಮಾತ್ರ. ಮತ್ತೊಂದೆಡೆ, ನಟಿ ಆಲಿಯಾ ಭಟ್ ಅವರ ಮುಂಬರುವ ‘ಬ್ರಹ್ಮಾಸ್ತ್ರ’ ಸಿನಿಮಾದ ಶೂಟಿಂಗ್ ಅಂತಿಮ ಹಂತದಲ್ಲರುವ ಕಾರಣ, ಇದರಿಂದ ಅವರು ಬ್ಯುಸಿಯಾಗಿರಬಹುದು ಎಂದು ಹಲವರು ಹೇಳುತ್ತಿದ್ದಾರೆ. ಹೀಗಾಗಿ, ಆಲಿಯಾ ಅವರು ‘ಆರ್​ಆರ್​ಆರ್’ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಅದೇನೇ ಇರಲಿ, ಕೇವಲ ಮೂರು ದಿನಗಳಲ್ಲಿ 500 ಕೋಟಿ ಗಳಿಸಿರುವ ‘ಆರ್​ಆರ್​ಆರ್’ ಸಿನಿಮಾ ಮಾತ್ರ ಗಲ್ಲಾಪೆಟ್ಟಿಗೆಯನ್ನು ಇನ್ನೂ ಉಕ್ಕಿ ಹರಿತುವಂತೆ ಮಾಡುತ್ತಾ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿದೆ.

ರಶ್ಮಿಕಾ ನೋಡಲು ಮಾತ್ರ ನಾಜೂಕು… ಆದ್ರೆ ವರ್ಕ್ಔಟ್ ಮಾತ್ರ ಯಾವ ಹೀರೋಗೂ ಕಮ್ಮಿ ಇಲ್ಲ!

ಕನ್ನಡಕ್ಕಿಂತ ಹೆಚ್ಚು ಬೇರೆ ಭಾಷೆಗಳಲ್ಲಿ ‘ಕೆಜಿಎಫ್​ 2’ ಟ್ರೈಲರ್ ಮಾಡಿರುವ ಮೋಡಿ ಎಂಥದ್ದು ಗೊತ್ತಾ?

Share This Article

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…